HEALTH TIPS

ಮತ್ತೆ ಕನ್ನಡಕ್ಕೆ ಗಧಾ ಪ್ರಹಾರ-ಕನ್ನಡವಿಲ್ಲದ ಮತದಾರ ಚೀಟಿ: ಕನ್ನಡಿಗರ ಆಕ್ರೋಶ

      ಕುಂಬಳೆ: ಭಾಷಾ ಅಲ್ಪಸಂಖ್ಯಾತ ಕನ್ನಡ ಪ್ರದೇಶದಲ್ಲಿರುವ ಮಂಜೇಶ್ವರ ಮತ್ತು ಕಾಸರಗೋಡು ತಾಲೂಕು ವ್ಯಾಪ್ತಿಯಲ್ಲಿ ವಿತರಿಸಲಾದ ಮತದಾರ ಚೀಟಿ(ವೋಟರ್ ಸ್ಲಿಪ್)ಯಲ್ಲಿ ಕನ್ನಡದಲ್ಲಿ ಮಾಹಿತಿ ಇಲ್ಲದಿರುವುದರಿಂದ ಕನ್ನಡಿಗ ಮತದಾರರು ಆಕ್ರೋಶಿತರಾಗಿದ್ದಾರೆ. ನಿಯಮಪ್ರಕಾದ ಕನ್ನಡ ಪ್ರದೇಶದಲ್ಲಿ ಕನ್ನಡದಲ್ಲೂ ಮತದಾರ ಚೀಟಿ, ಮತದಾರಪಟ್ಟಿ ಮೊದಲಾದವುಗಳನ್ನು ವಿತರಿಸುವುದಲ್ಲದೆ ಮತಗಟ್ಟೆಗಳಲ್ಲಿ ಕನ್ನಡದಲ್ಲೂ ಸೂಚನಾಫಲಕಗಳನ್ನು ಪ್ರದರ್ಶಿಸಲಾಗುವುದು ಎಂದು ರಾಜ್ಯ ಚುನಾವಣಾ ಇಲಾಖೆ ಮಾಹಿತಿಹಕ್ಕು ಪ್ರಕಾರ ತಿಳಿಸಿತ್ತು. ಆದರೆ ಸಂಬಂಧಪಟ್ಟ ರಾಜ್ಯಮಟ್ಟದ ಅಧಿಕಾರಿಗಳಾಗಲಿ, ಜಿಲ್ಲಾ ಚುನಾವಣಾ ಅಧಿಕಾರಿಗಳಾಗಲಿ ಈ ಬಗ್ಗೆ ನಿರ್ಲಕ್ಷ್ಯೆ ತೋರಿಸಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಮತದಾರರಿಗೆ ವಿತರಿಸಲಾದ ಮತದಾರ ಚೀಟಿಯಲ್ಲಿ ಕೇವಲ ಮಲೆಯಾಳ ಮತ್ತು ಇಂಗ್ಲೀಷಿನಲ್ಲಿ ಮಾಹಿತಿಗಳಿದ್ದು ಕನ್ನಡ ಮಾತ್ರ ತಿಳಿದವರಿಗೆ ಅರ್ಥವಾಗುವಂತಿಲ್ಲ. ಕನ್ನಡದ ವಿಷಯಕ್ಕೆ ಬಂದಾಗ ಮಾತ್ರ ಯಾವಾಗಲೂ ಎಲ್ಲ ನಿಯಮಗಳನ್ನೂ ಉಲ್ಲಂಘಿಸುತ್ತಿರುವುದು ಕನ್ನಡಿಗರ ಬಗೆಗಿನ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ಮತದಾರರು ಹೇಳುತ್ತಿದ್ದಾರೆ. ಈ ಬಾರಿ ಕನ್ನಡದಲ್ಲೂ ಮಾಹಿತಿ ನೀಡಬೇಕು ಎಂದೂ, ಮತದಾರ ಚೀಟಿ ಮತದಾರ ಪಟ್ಟಿಯನ್ನು ಕನ್ನಡದಲ್ಲೂ ಒದಗಿಸಬೇಕು ಎಂದು ರಾಜ್ಯ ಚುನಾವಣಾಧಿಕಾರಿಗಳಿಗೂ ಜಿಲ್ಲಾಧಿಕಾರಿಗಳಿಗೂ ಹಲವರು ಮನವಿ ಸಲ್ಲಿಸಿದ್ದರು. ಆದರೆ ಕನ್ನಡಿಗರ ಮನವಿಯನ್ನು ನಿರ್ಲಕ್ಷ್ಯಿಸಲಾಗಿದೆ.
       ಸಾಮಾಜಿಕ ಜಾಲತಾಣದಲ್ಲೂ ಕೇರಳ ಸರಕಾರದ ಅಧಿಕಾರಿಗಳ ಮಲತಾಯಿ ಧೋರಣೆ ಬಗ್ಗೆ ಆಕ್ರೋಶ ಪ್ರಕಟವಾಗುತ್ತಿದೆ. ಕನ್ನಡವನ್ನು ನಿರ್ಲಕ್ಷ್ಯಿಸುತ್ತಿರುವುದನ್ನು ಪ್ರತಿಭಟಿಸಿ ತಾವು ಮತದಾನ ಮಾಡುವುದಿಲ್ಲ ಎಂದು ಕೆಲವರು ತಿಳಿಸಿದ್ದಾರೆ. ಇನ್ನು ಕೆಲವರು ಕನ್ನಡದಲ್ಲಿದ್ದ ಮತದಾರ ಚೀಟಿ ಕನ್ನಡಕ್ಕೆ ಆಗುತ್ತಿರುವ ಅವಮಾನವನ್ನು ನೆನಪಿಸುತ್ತಿದ್ದು ಇದನ್ನು ಹಿಡಿದುಕೊಂಡು ಮತಗಟ್ಟೆಗೆ ಹೋಗುವ ತಾವು ರಾಜ್ಯದ ಆಡಳಿತ ಪಕ್ಷದ ವಿರುದ್ಧವಾಗಿ ಮತ ಚಲಾಯಿಸುವುದಾಗಿ ಪ್ರಕಟಿಸಿದ್ದಾರೆ. ಕನ್ನಡದಲ್ಲಿ ಮುದ್ರಣಗೊಂಡ ಮತದಾರ ಪಟ್ಟಿ ಇನ್ನೂ ಲಭ್ಯವಾಗಿಲ್ಲ ಎನ್ನಲಾಗುತ್ತಿದೆ. ಮತಗಟ್ಟೆಯಲ್ಲಿ ಕನ್ನಡದಲ್ಲಿ ಸೂಚನಾಫಲಕಗಳಿಲ್ಲದಿದ್ದರೆ ಸಾಮಾನ್ಯ ಕನ್ನಡಿಗರು ಕಷ್ಟಪಡಬೇಕಾಗಬಹುದು. ಇದರ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಮತದಾರರು ಆಗ್ರಹಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries