ಕುಂಬಳೆ: ಆದಿ ದಲಿತ ಮುನ್ನಡೆ ಸಮಿತಿಯ ಆಶ್ರಯದಲ್ಲಿ ಇತ್ತೀಚೆಗೆ ಕುಂಬಳೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ನೂತನ ಕಾರ್ಯಕಾರಿ ಸಮಿತಿ ರಚಿಸಲಾಯಿತು.
ಚಂದ್ರಶೇಖರ ಪಡುಮನೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚಂದ್ರಶೇಖರ ಪಡುಮನೆ(ಅಧ್ಯಕ್ಷರು), ಬಾಬು ಬಿ.ನಾಯ್ಕಾಪು(ಉಪಾಧ್ಯಕ್ಷ), ಸುಂದರ ಕೆ.ಎಂ.(ಕಾರ್ಯದರ್ಶಿ),ರತೀಶ್ ಕುಮಾರ್ ಬೋವಿಕ್ಕಾನ(ಜೊತೆಕಾರ್ಯದರ್ಶಿ), ಸುಮತಿ ಬಂಬ್ರಾಣ(ಖಜಾಂಜಿ) ಅವರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಯಿತು. ಜೊತೆಗೆ 21 ಸದಸ್ಯರನ್ನೊಳಗೊಂಡ ಸಮಿತಿ ರೂಪಿಸಲಾಯಿತು.