ಶಡ್ರಂಪಾಡಿಯಲ್ಲಿ ಇಂದಿನ ಕಾರ್ಯಕ್ರಮ
0
ಏಪ್ರಿಲ್ 06, 2019
ಕುಂಬಳೆ: ಶಡ್ರಂಪಾಡಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಜರಗುತ್ತಿರುವ ನವೀಕರಣ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಇಂದು ಪ್ರಾತಃಕಾಲ 5 ರಿಂದ ಗಣಪತಿ ಹೋಮ, ವಿದ್ಯೇಶ್ವರ ಕಲಶಪೂಜೆ, ಪ್ರಾಸಾದ ಪ್ರತಿಷ್ಠೆ, ನಾಂದಿಮುಖ, ಪುಣ್ಯಾಹ, ನಪುಂಸಕ ಶಿಲಾಪ್ರತಿಷ್ಠೆ, ಪೀಠಪ್ರತಿಷ್ಠೆ, ಜೀವಕಲಶಾಭಿಷೇಕ, ಮುಹೂರ್ತದಾನ, ಮುಹೂರ್ತದಕ್ಷಿಣೆ, ಪ್ರತಿಷ್ಠಾ ಮುಹೂರ್ತ, ಅಷ್ಟಬಂಧ ನಿಕ್ಷೇಪ, ಜೀವ ಆವಾಹನ, ಸ್ಥೂಲ ಆವಾಹನ, ಸ್ತೋತ್ರ, ಪ್ರಾರ್ಥನೆಗಳು, ಪ್ರತಿಷ್ಠಾ ಬಲಿ, ಪ್ರದಕ್ಷಿಣೆ, ನಿತ್ಯ ನೈಮಿತ್ತಿಕ ನಿರ್ಣಯ, ಭದ್ರದೀಪ ನಿಕ್ಷೇಪ, ಕವಾಟ ಬಂಧನ, ಸೋಪಾನ ಪೂಜೆ, ಅಂಕುರಪೂಜೆ ಜರಗಲಿದೆ. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಪ್ರಸಾದ ಭೋಜನದ ನಂತರ ಸಾಯಂಕಾಲ ಸೋಪಾನದಲ್ಲಿ ಪೂಜೆ, ಅಂಕುರ ಪೂಜೆ, ರಾತ್ರಿಪೂಜೆ ನಡೆಯಲಿವೆ.
ಗಣೇಶ ಭಜನಾ ಸಂಘ ಸೂರಂಬೈಲು, ಗುರುಕೃಪಾ ಭಜನಾ ಸಂಘ ಉಳಿಯತ್ತಡ್ಕ ಇವರಿಂದ ಬೆಳಗ್ಗೆ ಮತ್ತು ಕಾಳಿಕಾಂಬಾ ಭಜನಾ ಸಂಘ ಆರಿಕ್ಕಾಡಿ ಇವರಿಂದ ಅಪರಾಹ್ನ ಭಜನಾ ಕಾರ್ಯಕ್ರಮ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಬೆಳಿಗ್ಗೆ 10.30 ರಿಂದ ಚಿತ್ತರಂಜಿನಿ ಹಿಳ್ಳೆಮನೆ ಮತ್ತು ಬಳಗದವರಿಂದ ಸಂಗೀತ ಕಛೇರಿ ಜರಗಲಿದೆ. ಅಪರಾಹ್ನ 2 ಗಂಟೆಯಿಂದ ಉಳಿಯ ಶ್ರೀಧನ್ವಂತರೀ ಯಕ್ಷಗಾನ ಕಲಾಸಂಘ, ಮಧೂರು ಇವರಿಂದ ಭೀಷ್ಮೋತ್ಪತ್ತಿ - ಭೀಷ್ಮ ಪ್ರತಿಜ್ಞೆ ಯಕ್ಷಗಾನ ತಾಳಮದ್ದಳೆ ಜರಗಲಿದೆ. ರಾತ್ರಿ 8 ರಿಂದ ನಂದಾದೀಪ ಮಕ್ಕಳ ಗುಂಪು ಮುಖಾರಿಗದ್ದೆ ಮತ್ತು ಊರವರಿಂದ ನೃತ್ಯ ವೈಭವ ಕಾರ್ಯಕ್ರಮ ಜರಗಲಿದೆ.
ಸಮರಸ ಚಿತ್ರ ಮಾಹಿತಿ:
1. ಕೃಷ್ಣಶೌರಿ.ಡಿ.ಎಸ್ ದೊಡ್ಡಮಾಣಿ ಇವರಿಂದ ಕೊಳಲುವಾದನ
2. ಶ್ರೀಮತಿ ಪವನ.ಬಿ.ಆಚಾರ್ ಮಣಿಪಾಲ ಇವರಿಂದ ವೀಣಾವಾದನ
3. ನೀರ್ಚಾಲು ಶ್ರೀ ವಿಘ್ನೇಶ್ವರ ಯಕ್ಷಗಾನ ಕಲಾಸಂಘದ ಸದಸ್ಯರಿಂದ ಕೊಲ್ಲೂರು ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟ