ಕಾಸರಗೋಡು: ಬಾವಿಕೆರೆಯಲ್ಲಿ ಚಂದ್ರಗಿರಿ ಹೊಳೆಗೆ ಅಡ್ಡವಾಗಿ ನಿರ್ಮಿಸುವ ಶಾಶ್ವತ ತಡೆಗೋಡೆ ನಿರ್ಮಾಣ ಪ್ರಗತಿ ಬಗ್ಗೆ ಅವಲೋಕನ ನಡೆಸುವುದಕ್ಕಾಗಿ ಐಡಿಬಿಆರ್‍ಐ ಹಿರಿಯ ಅಭಿಯಂತರ ಕೆ.ಎಚ್.ಶಂಸುದ್ದೀನ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಮಂಗಳವಾರ ಸ್ಥಳ ಸಂದರ್ಶಿಸಿದೆ. ನಾಲ್ಕು ತಿಂಗಳಿಂದ ಉತ್ತಮ ರೀತಿಯಲ್ಲಿ ಕಾಮಗಾರಿ ನಡೆಯುತ್ತಿದೆ ಎಂದು ಹಿರಿಯ ಅಭಿಯಂತರರು ತಿಳಿಸಿದ್ದಾರೆ.
ತಡೆಗೋಡೆ ನಿರ್ಮಿಸುವುದಕ್ಕಿರುವ ತಾಂತ್ರಿಕ ಸಮಸ್ಯೆಗಳ ಬಗ್ಗೆ ಈ ಮೊದಲೇ ಶಾಸಕ ಕೆ.ಕುಂಞÂರಾಮನ್ ಅವರ ಗಮನಕ್ಕೆ ತರಲಾಗಿತ್ತು. ಇದರ ಆಧಾರದಲ್ಲಿ ಎತ್ತರ ಕಡಿಮೆಗೊಳಿಸುವ ವಿಷಯವೂ ಪರಿಗಣನೆಯಲ್ಲಿರುವುದಾಗಿ ತಿಳಿಸಿದರು. ಪ್ರಸ್ತುತ 16 ಮೀಟರ್ ಎತ್ತರದಲ್ಲಿ ಅಣೆಕಟ್ಟು ನಿರ್ಮಿಸಲಾಗುವುದರಿಂದ ಪರಿಸರ ನಿವಾಸಿಗಳಿಗೆ ಫಲ ಲಭಿಸದು ಎಂಬ ವಾಸ್ತವ ಅಧಿಕಾರಿಗಳಿಗೆ ಮನದಟ್ಟಾಗಿದೆ. ಹಿರಿಯ ಅಭಿಯಂತರರ ಜೊತೆಗೆ ಕಿರು ನೀರಾವರಿ ಇಲಾಖೆ ಸುಪರಿಂಟೆಂಡೆಂಟ್ ಅಭಿಯಂತರ ನಿರ್ದೇಶಕಿ ಸಿ.ಕೆ.ಗೀತಾ, ಉಪ ನಿರ್ದೇಶಕಿ ಸುಜಾ ಗ್ರೇಷ್ಯಲ್, ಸಹಾಯಕ ನಿರ್ದೇಶಕರಾದ ಬಿ.ಸೀನ, ಟಿ.ಎಂ.ಶ್ರುತಿ, ಮೆಕಾನಿಕಲ್ ವಿಭಾಗ ಸಹಾಯಕ ಅಭಿಯಂತರ ಸಂಜೀವ್ ತಂಡದಲ್ಲಿದ್ದರು.