ಆದೂರು ಶಾಲಾ ವಾರ್ಷಿಕೋತ್ಸವ; ನಿವೃತ್ತ ಶಿಕ್ಷಕರಿಗೆ ಬೀಳ್ಕೊಡುಗೆ
0
ಏಪ್ರಿಲ್ 04, 2019
ಮುಳ್ಳೇರಿಯ: ಆದೂರು ಸರಕಾರಿ ಹಯ್ಯರ್ ಸೆಕೆಂಡರೀ ಶಾಲೆಯ ವಾರ್ಷಿಕೋತ್ಸವ ಮತ್ತು ನಿವೃತ್ತರಾಗಲಿರುವ ಶಿಕ್ಷಕ ಪ್ರಕಾಶ.ಯಂ ಅವರ ಬೀಳ್ಕೊಡುವ ಸಮಾರಂಭ ಶನಿವಾರ ಆದೂರು ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಮಕ್ಕಳಿಂದ ಮತ್ತು ಶಿಕ್ಷಕಿಯರಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು. ಸಭಾ ಸಮಾರಂಭದಲ್ಲಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮೊಹಮ್ಮದ್ ಪಟ್ಟಾಂಗ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಮುಖ್ಯ ಶಿಕ್ಷಕ ಪುತ್ತು ಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಆದೂರು ಹಯ್ಯರ್ ಸೆಕೆಂಡರೀ ಶಾಲೆಯಲ್ಲಿ ಪ್ರೌಢ ಶಾಲಾ ವಿಭಾಗದಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ 17 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿರುವ ಪ್ರಕಾಶ ಮಾಸ್ತರರನ್ನು ರಕ್ಷಕ ಶಿಕ್ಷಕ ಸಂಘ, ಮುಖ್ಯೋಪಾಧ್ಯಾಯರು, ಶಿಕ್ಷಕರು ಮತ್ತು ನೌಕರ ವೃಂದ, ಹಯ್ಯರ್ ಸೆಕೆಂಡರೀ ವಿಭಾಗದ ವತಿಯಿಂದ, ವಿದ್ಯಾರ್ಥಿಗಳ ವತಿಯಿಂದ ಪ್ರತ್ಯೇಕವಾಗಿ ಗೌರವಿಸಲಾಯಿತು. ಶಿಕ್ಷಕ ಗಣೇಶ್.ಪಿ ಪ್ರಾಸ್ತಾವಿಕವಾಗಿ ಮಾತನಾಡಿ ಸನ್ಮಾನ ಪತ್ರ ವಾಚಿಸಿದರು. ಸಮಾರಂಭದಲ್ಲಿ ಪ್ರಾಂಶುಪಾಲ ರಂಜಿತ್, ಕುಂಜತ್ತೂರು ಜಿವಿಎಚ್‍ಎಸ್ ಶಾಲೆಯ ಮುಖ್ಯ ಶಿಕ್ಷಕ ಬಾಲಕೃಷ್ಣ.ಜಿ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಮೊಹಮ್ಮದ್ ಹನೀಫ, ಮಾತೃಸಂಘದ ಅಧ್ಯಕ್ಷೆ ಬೀಫಾತಿಮ, ಹಿರಿಯ ಶಿಕ್ಷಕಿ ಸರಸ್ವತಿ.ಕೆ, ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯ ಅಬ್ದುಲ್ ರಹಮಾನ್ ಹಾಜಿ, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಎ.ಟಿ.ಅಬೂಬಕರ್, ಸದಸ್ಯ ಮೂಸಾನ್ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕ ರಾಮಣ್ಣ.ಡಿ ಸ್ವಾಗತಿಸಿ, ನೌಕರ ಸಂಘದ ಕಾರ್ಯದರ್ಶಿ ಯೂಸಫ್.ಕೆ ವಂದಿಸಿದರು. ಶಿಕ್ಷಕ ಶರತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.