HEALTH TIPS

ಪೇಯ್ಡ್ ನ್ಯೂಸ್ ವಿರುದ್ಧ ಜಾಗೃತಿ: ನೀತಿ ಸಂಹಿತೆಗೆ ಕೈಗನ್ನಡಿ ಹಿಡಿದ ವಿಚಾರಸಂಕಿರಣ

ಕಾಸರಗೋಡು: ಚುನಾವಣೆ ಸಂಬಂಧ ನೀತಿ ಸಂಹಿತೆ ಜಾರಿಗೊಂಡಿರುವ ವೇಳೆ ಮಾಧ್ಯಮಗಳು ಪಾಲಿಸಬೇಕಾದ ಕಟ್ಟುನಿಟ್ಟಿನ ಕ್ರಮಗಳ ಕುರಿತು ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ನಡೆದ ವಿಚಾರಸಂಕಿರಣ ಕೈಗನ್ನಡಿ ಹಿಡಿದಿದೆ. ಮೀಡಿಯಾ ಸರ್ಟಿಫಿಕೇಷನ್ ಆಂಡ್ ಮೋನಿಟರಿಂಗ್ ಸಮಿತಿ (ಎಂ.ಸಿ.ಎಂ.ಸಿ.) ಕಾಸರಗೋಡು ವತಿಯಿಂದ ಪೇಯ್ಡ್ ನ್ಯೂಸ್ ವಿರುದ್ಧ ಜಾಗೃತಿ ವಿಚಾರಸಂಕಿರಣ ಬುಧವಾರ ನಡೆಯಿತು. ಎಂ.ಸಿ.ಎಂ.ಸಿ. ಸದಸ್ಯರಲ್ಲಿ ಪರಿಣತರಾದ ಕಾಸರಗೋಡು ಆರ್.ಡಿ.ಒ.ಪಿ.ಎ.ಅಬ್ದು ಸಮದ್, ಜಿಲ್ಲಾ ಕಾನೂನು ಅಧಿಕಾರಿ ಕೆ.ಪಿ.ಉಣ್ಣಿಕೃಷ್ಣನ್, ಜಿಲ್ಲಾ ಇನ್ ಫಾರ್ಮೆಟಿಕ್ಸ್ ಆಫೀಸರ್-ಎನ್.ಐ.ಸಿ. ಕೆ.ರಾಜನ್, ಸ್ವತಂತ್ರ ಸದಸ್ಯ ಜಿ.ಬಿ.ವತ್ಸನ್, ಕನ್ನಡ ಭಾಷಾ ಪ್ರತಿನಿಧಿ ನಿವೃತ್ತ ಕಾನೂನು ಹೆಚ್ಚುವರಿ ಕಾರ್ಯದರ್ಶಿ ಸೀತಾರಾಮ ಎಂ., ಜಿಲ್ಲಾ ಮಾಹಿತಿ ಅಧಿಕಾರಿ-ಮೆಂಬರ್ ಸೆಕ್ರೆಟರಿ ಮಧುಸೂದನನ್ ಎಂ. ತರಗತಿ ನಡೆಸಿದರು. ಕನ್ನಡ ಮಾಧ್ಯಮದಲ್ಲಿ ಉಪನ್ಯಾಸ ನಡೆಸಿದ ನಿವೃತ್ತ ಹೆಚ್ಚುವರಿ ಕಾನೂನು ಕಾರ್ಯದರ್ಶಿ ಸೀತಾರಾಮ ಎಂ. ಅವರು ಈ ಕುರಿತು ಸಮಗ್ರ ಚಿತ್ರಣ ನೀಡಿದರು. ಚುನಾವಣೆ ಸಂಬಂಧ ಪೇಯ್ಡ್ ನ್ಯೂಸ್ಗಳನ್ನು ಪತ್ತೆಮಾಡಿ ಕ್ರಮ ಕೈಗೊಳ್ಳುವುದು, ಮಾಧ್ಯಮಗಳ ಮೂಲಕ ಪ್ರಚಾರ ಗಿಟ್ಟಿಸಲು ರಾಜಕೀಯ ಸ್ವಭಾವ ಹೊಂದಿರುವ ಜಾಹೀರಾತು ಪರಿಶೀಲಿಸಿ ಅಂಗೀಕಾರ ನೀಡುವಿಕೆ ಇತ್ಯಾದಿ ಎಂ.ಸಿ.ಎಂ.ಸಿ.ಸಮಿತಿಯ ಪ್ರಧಾನ ಹೊಣೆಗರಿಕೆಯಾಗಿದೆ. ಏನಿದು ಪೇಯ್ಡ್ ನ್ಯೂಸ್?: ಹಣ ಯಾ ಇತರ ಸೌಲಭ್ಯಗಳನ್ನು ಪಡೆದು ಯಾವುದಾದರೂ ಮಾಧ್ಯಮಗಳಲ್ಲಿ ಪ್ರಕಟಿಸುವ ಯಾವ ಸುದ್ದಿಯೂ, ಅವಲೋಕನವೂ, ಪೇಯ್ಡ್ ನ್ಯೂಸ್ ಎಂದು ಪರಿಶೀಲಿಸಲಾಗುವುದು ಎಂದು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ನಿರ್ವಚನೆ ನೀಡಿದ್ದು, ಇದನ್ನು ಚುನಾವಣೆ ಆಯೋಗ ಅಂಗೀಕರಿಸಿದೆ. ಪೇಯ್ಡ್ ನ್ಯೂಸ್ ವಿರುದ್ಧ ಜಾಗ್ರತೆ ಬೇಕು ಪೇಯ್ಡ್ ನ್ಯೂಸ್ ಜನತೆಯನ್ನು ತಪ್ಪುದಾರಿಗೆಳೆಯುವ ಯತ್ನ ನಡೆಸುತ್ತಿದೆ. ಅವರ ಮಾಹಿತಿ ಹಕ್ಕನ್ನು ಕಸಿಯುವ ಪ್ರಯತನ್ನವನ್ನೂ ಮಾಡುತ್ತದೆ. ಚುನಾವಣೆ ವೆಚ್ಚದ ನಿಯಂತ್ರಣವನ್ನು ಉಲ್ಲಂಘಿಸಲು ಇದನ್ನು ಗುಪ್ತ ಮಾರ್ಗವಾಗಿ ಬಳಸಲಾಗುತ್ತದೆ ಎಂದು ತಿಳಿಯಲಾಗಿದೆ. ಜಿಲ್ಲಾ ಮಟ್ಟದ ಎಂ.ಸಿ.ಎಂ.ಸಿ.ಸಮಿತಿ ಅಧ್ಯಕ್ಷ: ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಸದಸ್ಯರು: ಕಾಸರಗೋಡು ಆರ್.ಡಿ.ಒ.ಪಿ.ಎ.ಅಬ್ದು ಸಮದ್, ಜಿಲ್ಲಾ ಕಾನೂನು ಅಧಿಕಾರಿ ಕೆ.ಪಿ.ಉಣ್ಣಿಕೃಷ್ಣನ್, ಜಿಲ್ಲಾ ಇನ್ ಫಾರ್ಮೆಟಿಕ್ಸ್ ಆಫೀಸರ್-ಎನ್.ಐ.ಸಿ. ಕೆ.ರಾಜನ್, ಸ್ವತಂತ್ರ ಸದಸ್ಯ ಜಿ.ಬಿ.ವತ್ಸನ್, ಕನ್ನಡ ಭಾಷಾ ಪ್ರತಿನಿಧಿ ನಿವೃತ್ತ ಕಾನೂನು ಹೆಚ್ಚುವರಿ ಕಾರ್ಯದರ್ಶಿ ಸೀತಾರಾಮ ಎಂ., ಜಿಲ್ಲಾ ಮಾಹಿತಿ ಅಧಿಕಾರಿ-ಮೆಂಬರ್ ಸೆಕ್ರೆಟರಿ ಮಧುಸೂದನನ್ ಎಂ. ಪರಿಶೀಲನೆ ಈ ಮೂಲಕ ಸಾಮೂಹಿಕ ಎಸ್.ಎಂ.ಎಸ್.ಗಳು, ವೋಯ್ಸ್ ಮೆಸೆಜ್ ಗಳು, ಚಾನೆಲ್ ಗಳು/ ಕೇಬಲ್ ನೆಟ್ ವರ್ಕ್ ಗಳು, ರೇಡಿಯೋ/ಎಫ್.ಎಂ. ಚಾನೆಲ್ ಗಳು, ಸಿನಿಮಾ ಥಿಯೇಟರ್ ಗಳು, ಸಾರ್ವಜನಿಕ ಪ್ರದೇಶಗಳ ಆಡಿಯೋ, ವೀಡಿಯೋ ಡಿಸ್ ಪ್ಲೇಗಳು, ಸಮೂಹಿಕ ಮಾಧ್ಯಮಗಳು, ಪತ್ರಿಕೆಗಳ ಸಹಿತ ಮುದ್ರಣ ಮಾಧ್ಯಮಗಳ ಪರಿಶೀಲನೆ ನಡೆಸಲಾಗುವುದು. ಯಾವುದಕ್ಕೆಲ್ಲ ಅನುಮತಿ ಬೇಕು?: ಮೆಸೇಜ್ ಗಳು, ಕಮೆಂಟ್ ಗಳು, ಫೊಟೋಗಳು, ವೀಡಿಯೋ ಪೋಸ್ಟ್ ಗಳು, ಬ್ಲೋಗ್ಗಳು, ವೆಬ್ ಸೈಟ್ ಗಳು ಮೊದಲಾದೆಡೆ ನಡೆಸಲಾಗುವ ವಿಮರ್ಶೆಗಳು, ಸಾಮಾಜಿಕ ಜಾಲ ತಾಣಗಳಲ್ಲಿನ ಪೋಸ್ಟ್ ಗಳು ಇತ್ಯಾದಿ ರಾಜಕೀಯ ಜಾಹೀರಾತು ಎಂದು ಪರಿಶೀಲಿಸಲಾಗುವುದಿಲ್ಲ. ಅದರೊಂದಿಗೆ ಇವುಗಳಿಗೆ ಮುಂಗಡ ಅನುಮತಿ ಅಗತ್ಯವಿಲ್ಲ. ಇದೇ ವೇಳೆ ಇ-ಪೇಪರ್ ಗಳಲ್ಲಿ ನೀಡಲಾಗುವ ಜಾಹೀರಾತು ಸಮಿತಿಯ ಅನುಮತಿ ಪಡೆದಿರಬೇಕು. ಪರಸ್ಪರ ಸ್ಪರ್ಧೆ ಹೊಂದಿರುವ ಮಾಧ್ಯಮಗಳಲ್ಲಿ ವಾರ್ತೆ, ಲೇಖನ, ಸಮಾನ ಶೀರ್ಷಿಕೆ, ಚಿತ್ರ ಸಹಿತದ ಪ್ರಕಟಣೆಗಳು, ಒಬ್ಬ ಅಭ್ಯರ್ಥಿಗೆ ಸಂಬಂಧಿಸಿ ಪುಟ್ಟ ಸುದ್ದಿಗೂ ಅಪಾರ ಮಹತ್ವ ನೀಡುವುದು ಮತ್ತು ಸ್ಪರ್ಧಾಳು ಅಭ್ಯರ್ಥಿಯನ್ನು ಪೂರ್ಣ ರೂಪದಲ್ಲಿ ತಿರಸ್ಕರಿಸುವುದು ಪೇಯ್ಡ್ ನ್ಯೂಸ್ ಎನಿಸುತ್ತದೆ. ಪೇಯ್ಡ್ ನ್ಯೂಸ್ ಗಮನಕ್ಕೆ ಬಂದಲ್ಲಿ ನೋಟೀಸ್ ನೀಡುವಿಕೆಗೆ, ವಾರ್ತೆಗಾಗಿ ಬಳಸಲಾದ ವೆಚ್ಚವನ್ನು ಅಭ್ಯರ್ಥಿಯ ವೆಚ್ಚದಿಮದ ಪಡೆದು ಬಳಸಲು ಶಿಫಾರಸು ಮಡಲು ಚುನಾವಣೆ ಅಧಿಕಾರಿಗೆ ಪತ್ರ ನೀಡುವುದು. ನಾಮಪತ್ರಿಕೆ ಸಲ್ಲಿಸಿದ ದಿನದಿಂದ ಅಭ್ಯರ್ಥಿಯ ಖರ್ಚುವೆಚ್ಚ ಗಣನೆಯಲ್ಲಿ ಇದೂ ಸೇರುವುದು. ಹೊಣೆಗಾರ ಅಭ್ಯರ್ಥಿಯ ಕವರೇಜ್ ಬಹಿರಂಗವಾಗಿ ಪರಿಶೀಲಿಸದೇ ಇರುವ ನಿಟ್ಟಿನಲ್ಲಿ ಚುನಾವಣೆ ಆಯೋಗಕ್ಕೆ ವರದಿ ನಡೆಸದೇ ಇರುವ ನಿಟ್ಟಿನಲ್ಲಿ ನಡೆಸಿದ ಯತ್ನಕ್ಕೆ ಕಾರಣ ತಿಳಿಸಬೇಕು ಎಂಬ ಕಾರಣಕ್ಕೆ ಜಿಲ್ಲಾ ಚುನಾವಣೆ ಅಧಿಕಾರಿ ಪತ್ರ ಬರೆಯುವರು. ಅಭ್ಯರ್ಥಿ 48 ತಾಸುಗಳ ಅವಧಿಯಲ್ಲಿ ನೋಟೀಸಿಗೆ ಉತ್ತರ ನೀಡಬೇಕು. ಇಲ್ಲವಾದರೆ ಎಂ.ಸಿ.ಎಂ.ಸಿ. ಜಿಲ್ಲಾ ಸಮಿತಿಯ ತೀರ್ಮಾನ ಅಂತಿಮವಾಗಿರುವುದು. ಆಕ್ಷೇಪಗಳಿದ್ದಲ್ಲಿ ಜಿಲ್ಲಾ ಸಮಿತಿಯ ತೀರ್ಮಾನ ಪ್ರಟಕಗೊಂಡು 48 ತಾಸು ಅವಧಿಯಲ್ಲಿ ರಾಜ್ಯ ಸಮಿತಿಗೆ ಅಫೀಲು ಸಲ್ಲಿಸಬೇಕು. ಇದಕ್ಕೆ ರಾಜ್ಯ ಎಂ.ಸಿ.ಎಂ.ಸಿ. 96 ತಾಸುಗಳ ಅವಧಿಯಲಲಿ ತೀರ್ಮಾನಕೈಗೊಳ್ಳಲಿದೆ. ಪೇಯ್ಡ್ ನ್ಯೂಸ್ ಚುನಾವಣೆ ವೆಚ್ಚದಲ್ಲಿ ಬಳಸುವಿಕೆ ಸಂಬಂಧ ಸರ್ಟಿಫಿಕೇಷನ್ ಸಂಬಂಧ ಜಿಲ್ಲಾ ಮಟ್ಟದ ಎಂ.ಸಿ.ಎಂ.ಸಿ.ಯ ತೀರ್ಮಾನ ದಲ್ಲಿ ಅಫೀಲುಗಳಿದ್ದಲ್ಲಿ ರಾಜ್ಯ ಮಟ್ಟದ ಎಂ.ಸಿ.ಎಂ.ಸಿ.ಗೆ ನಿಗದಿತ ಅವಧಿಯಲ್ಲಿ ಸಲ್ಲಿಸಬೇಕು. ಜಾಹೀರಾತುಗಳು: ಜಾಹೀರಾತುಗಳು ಎಂ.ಸಿ.ಎಂ.ಸಿ.ಯ ಅರ್ಟಿಫಿಕೇಷನ್ ಪಡೆದಿವೆಯೇ ಎಂಬ ಪರಿಶೀಲನೆ ನಡೆಸಲಾಗುವುದು. ರಾಷ್ಟ್ರೀಯ-ರಾಜ್ಯ ಮಟ್ಟದ ರಾಜಕೀಯ ಪಕ್ಷಗಳು ಜಾಹೀರಾತು ಪ್ರಕಟಿಸುವ ಮೂರು ದಿನಗಳ ಮುನ್ನ ಜಿಲ್ಲಾ ಮಟ್ಟದ ಎಂ.ಸಿ.ಎಂ.ಸಿ.ಗೆ ಅರ್ಜಿ ಸಲ್ಲಿಸಬೇಕು. ಇತರ ರಾಜಕೀಯ ಪಕ್ಷಗಳು, ವ್ಯಕ್ತಿಗಳು, ಸಮಗಟನೆಗಳು ಒಂದು ವಾರಕ್ಕೆ ಮುಂಚಿತವಾಗಿ ಜಿಲ್ಲಾ ಮಟ್ಟದ ಎಂ.ಸಿ.ಎಂ.ಸಿ.ಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಲಭಿಸಿದ 48 ತಾಸುಗಳ ಅವಧಿಯಲ್ಲಿ ಎಂ.ಸಿ.ಎಂ.ಸಿ. ತೀರ್ಮಾನ ತಿಳಿಸಲಿದೆ. ಸಲ್ಲಿಸಬೇಕಾದ ದಾಖಲೆಗಳು ಜಾಹೀರಾತು ಅನುಮತಿಗೆ ಸಲ್ಲಿಸಬೇಕಾದ ದಾಖಲೆಗಳು ಇಂತಿವೆ. ಇಲೆಕ್ಟ್ರಾನಿಕ್ ಜಾಹೀರಾತುಗಳ ಎರಡು ಪ್ರತಿಗಳು , ಅದರ ಅಟೆಸ್ಟ್ ನಡೆಸಲಾದ ಸ್ಕ್ರಿಪ್ಟ್. ಜಾಹೀರಾತು ನಿರ್ಮಾಣದ ಖರ್ಚು ವೆಚ್ಚದ ಮಾಹಿತಿ. ಸ್ಥಳೀಯ ಚಾನೆಲ್, ಕೇಬಲ್ ನೆಟ್ ವಕ್ರ್ಗಳಲಲಿ ಈ ಜಾಹೀರಾತು ಪ್ರಸಾರಗೊಳ್ಳುವ ನಿಟ್ಟಿನಲ್ಲಿ ಸರಿಸುಮಾರು ಮೊಬಲಗು, ಪ್ರಸಾರದ ಸಮಯ, ಎಷ್ಟು ಬಾರಿ ಪ್ರಸಾರ ಎಂಬುದನ್ನು ತಿಳಿಸಬೇಕು. ಅಭ್ಯರ್ರತಿಯ ರಾಜಕೀಯ ಪಕ್ಷ ಪ್ರತಿನಿಧಿ ಎಂಬುದನ್ನು ಅತ್ಯವಾ????ಲ ಮೂಲಕ ತಿಳಿಸಬೇಕು. ಜಾಹೀರಾತು ನೀಡುವುದು ರಾಜಕೀಯಪಕ್ಷವೋ, ಅಭ್ಯರ್ಥಿಯೋ, ಅಥವಾ ಬೇರಾರೋ ಎಂಬ ವಿಚಾರದಲ್ಲಿ ಸತ್ಯ ಪ್ರತಿಜ್ಞೆ ನೀಡಬೇಕು. ಇದು ಯಾವುದಾದರೂ ರಾಜಕೀಯ ಪಕ್ಷ, ಅಭ್ಯರ್ರತಿ, ಪ್ರಾಯೋಜನಕತ್ವ ಮೂಲಕ ನೀಡಲಾದುದೋ ಎಂಬುದನ್ನು ಸತ್ಯ ಪ್ರತಿಜ್ಞೆಯ ಮೂಲಕ ತಿಳಿಸಬೇಕು. ಇದಕ್ಕಿರುವ ಮೊಬಲಗು ಚೆಕ್ ಯಾ ಡಿಡಿ ರೂಪದಲ್ಲಿ ಮಾತ್ರ ನೀಡಲಾಗಿದೆ ಎಂಬುದನ್ನು ಖಚಿತಪಡಿಸುವ ದಾಖಲೆಗಳನ್ನು ನೀಡಬೇಕು. ಎಂ.ಸಿ.ಎಂ.ಸಿ.ಯ ಜವಾಬ್ದಾರಿ: ಅಭ್ಯರ್ಥಿ ನೇರವಾಗಿ ಅಥವಾ ಅಭ್ಯರ್ಥಿಗಾಗಿ ಬೇರಾರಾದರೂ ನೀಡುವ ಜಾಹೀರಾತನ್ನು ಪರಿಶೀಲಿಸಬೇಕು. ಜಾಹೀರಾತು ಬ್ಯರ್ರಥಿಯ ಅಂಗೀಕಾರದೊಂದಿಗೆ ಅಲ್ಲದೇ ಇದ್ದರೆ ಐ.ಪಿ.ಸಿ.171 ಎಚ್.ನ ಉಲ್ಲಂಘನೆ ಗಾಗಿ ಪ್ರಕಾಶಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಮತ, ಪಂಗಡ, ಜಾತಿ ಇತ್ಯಾದಿ ಹೆಸರಲ್ಲಿ ದ್ವೇಷ, ಪ್ರೋತ್ಸಾಹ ನೀಡುವ ಜಹೀರಾತು ಪ್ರಟಿಸಲಾಗದು. ದೇಶದ ಕಾನೂನುಗಳಿಗೆ ವಿಧೇಯವಾಗಿ, ಧಾರ್ಮಿಕತೆಗೆ ಒಗ್ಗುವ ಜಾಹೀರಾತು ಮಾತ್ರ ಪ್ರಕಟಿಸಬೇಕು. ಎಲ್ಲ ಚುನಾವಣೆ ಜಾಹೀರಾತುಗಳಲ್ಲಿ, ಪೋಸ್ಟರ್, ಕಿರು ಹೊತ್ತಗೆ ಇತ್ಯಾದಿಗಳಲ್ಲಿ ಮುದ್ರಕ,ಪ್ರಕಾಶಕರ ಹೆಸರು, ವಿಳಾಸ ಇರಬೇಕು. ಇಲ್ಲವಾದರೆ ಕ್ರಮಕೈಗೊಳ್ಳಲಾಗುವುದು. ಇತರ ಮುದ್ರಣ ಮಾಧ್ಯಮಗಳು ಚುನಾವಣೆ ಚಟುವಟಿಕೆಗಳಿಗೆ ಅನುಗುಣವಾಗಿ ಬಳಸುವ ಯಾವುದೇ ಮುದ್ರಣ ಮಾಧ್ಯಮದಲ್ಲಿ ಪ್ರಕಾಶಕರ ಹೆಸರು, ವಿಳಾಸ ಕಟ್ಟಡಾಯ. ಇಲ್ಲವಾದಲ್ಲಿ ಎಂ.ಸಿ.ಎಂ.ಸಿ.ಗೆ ಮಾಹಿತಿ ನೀಡಬೇಕು. ಇತರ ಕ್ರಮಗಳು ಬಲ್ಕ್ ಎಸ್.ಎಂ.ಎಸ್.ಗಳು ಗಮನಕ್ಕೆ ಬಂದರೆ ವರದಿ ಮಾಡಬಹುದು. ಪ್ರಚಾರ ಸಾಮಾಗ್ರಿಗಳ ವೆಚ್ಚ ಅಭ್ಯರ್ಥಿ ಸಲ್ಲಿಸಬೇಕು. ಮುಂಗಡ ಅನುಮತಿ ಪಡೆಯದೇ ಇದ್ದಲ್ಲಿ ಎಂ.ಸಿ.ಎಂ.ಸಿ. ಜಿಲ್ಲಾ ಚುನಾವಣೆ ಅಧಿಕಾರಿಗೆ ತಿಳಿಸಬೇಕು. ಮುದ್ರಣ ಮಾಧ್ಯಮದಲ್ಲಿ ಯಾವುದೇ ಜಾಹೀರಾತು,ಅಡ್ವಟೋರಿಯಲ್, ಅಭ್ಯರ್ಥಿಗೆ ಪೂರಕವಾಗಿದ್ದರೆ ಎಂ.ಸಿ.ಎಂ.ಸಿ.ಚುನಾವಣೆ ವೆಚ್ಚ ನಿರೀಕ್ಷಕರ ಗಮನಕ್ಕೆ ತರಬೇಕು. ಒಂದು ಪ್ರತಿ ಶಾಡೋ ಅಬ್ಸರ್ ವೇಶನ್ ನಲಲಿ ದಾಖಲಿಸಲಾಗುವುದು. ಕ್ರಮಾಂಕ 12ರಲ್ಲಿ ಚುನಾವಣೆ ವೆಚ್ಚ ನಿರೀಕ್ಷಕರಿಗೆ, ಜಿಲ್ಲಾ ಚುನಾವಣಾಧಿಕಾರಿಗೆ ಪ್ರತಿದಿನ ವರದಿ ಸಲ್ಲಿಸಬೇಕು. ಎಂ.ಸಿ.ಎಂ.ಸಿ. ತಂಡ ಟಕೌಂಟಿಂಗ್ ಟೀಂಗೆ ಪ್ರತಿದಿನ ವರದಿ ಸಲ್ಲಿಸಬೇಕು. ಇದರ ಪ್ರತಿಯನ್ನು ಚುನಾವಣೆ ವೆಚ ನಿರೀಕ್ಷಕರಿಗೆ ಮತ್ತು ಜಿಲ್ಲಾ ಚುನಾವಣೆ ಅಧಿಕಾರಿಗೆ ಸಲ್ಲಿಸಬೇಕು. ಮಹತ್ವದ ಅನೇಕ ವಿಚಾರಗಳ ಬಗ್ಗೆ ಪರಿಣತರು ಮಾಹಿತಿ ನೀಡಿದರು. ಭಾಗವಹಿಸಿದ ಪತ್ರಕರ್ತರು ಪರಿಣತರೊಂದಿಗೆ ಸಂವಾದ ನಡೆಸಿದರು. ಸ್ವೀಪ್ ವತಿಯಿಂದ ಮತದಾನ ಜಾಗೃತಿ ವೀಡಿಯೋ ಪ್ರದರ್ಶನ ನಡೆಸಲಾಯಿತು. ಪೇಯ್ಡ್ ನ್ಯೂಸ್ ವಿರುದ್ಧ ವಿಚಾರಸಂಕಿರಣ ಪೇಯ್ಡ್ ನ್ಯೂಸ್ ವಿರುದ್ಧ ಜಾಗೃತಿ ವಿಚಾರ ಸಂಕಿರಣ ಬುಧವಾರ ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ಜರುಗಿತು. ಎಂ.ಸಿ.ಎಂ.ಸಿ. ಜಿಲ್ಲಾ ಸಮಿತಿ ವತಿಯಿಂದ ನಡೆದ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಉದ್ಘಾಟಿಸಿದರು. ಚುನಾವಣೆ ವಿಭಾಗ ಸಹಾಯಕ ಜಿಲ್ಲಾಧಿಕಾರಿ ವಿ.ಪಿ.ಅಬ್ದುಲ್ ರಹಮಾನ್ ಅಧ್ಯಕ್ಷತೆ ವಹಿಸಿದ್ದರು. ಎಂ.ಸಿ.ಎಂ.ಸಿ. ಸದಸ್ಯರಾದ ಕಾಸರಗೋಡು ಆರ್.ಡಿ.ಒ.ಪಿ.ಎ.ಅಬ್ದು ಸಮದ್, ಜಿಲ್ಲಾ ಕಾನೂನು ಅಧಿಕಾರಿ ಕೆ.ಪಿ.ಉಣ್ಣಿಕೃಷ್ಣನ್, ಜಿಲ್ಲಾ ಇನ್ ಫಾರ್ಮೆಟಿಕ್ಸ್ ಅಧಿಕಾರಿ ಕೆ.ರಾಜನ್, ಸ್ವತಂತ್ರ ಸದಸ್ಯ ಜಿ.ಬಿ.ವತ್ಸನ್, ಹೆಚ್ಚುವರಿಕಾನೂನು ಕಾರ್ಯದರ್ಶಿ (ನಿವೃತ್ತ) ಎಂ.ಸೀತಾರಾಮ, ಕಾಸರಗೋಡು ಪ್ರೆಸ್ ಕ್ಲಬ್ ಅಧ್ಯಕ್ಷ ಟಿ.ಎ.ಶಾಫಿ ಉಪಸ್ಥಿತರಿದ್ದರು. ಪತ್ರಕರ್ತರು ಸಂವಾದ ನಡೆಸಿದರು. ಜಿಲ್ಲಾ ಮಾಹಿತಿ ಅಧಿಕಾರಿ ಮಧುಸುದನನ್ ಎಂ. ಸ್ವಾಗತಿಸಿದರು. ಜಿಲ್ಲಾ ಮಾಹಿತಿ ಕಚೇರಿ ಸಹಾಯಕ ಸಂಪಾದಕ ರಶೀದ್ ಬಾಬು ಪಿ. ವಂದಿಸಿದರು. ಜಿಲ್ಲಾ ಶುಚಿತ್ವ ಮಿಷನ್ನ ಸ್ವೀಪ್ ಕಾರ್ಯಕ್ರಮ ವತಿಯಿಂದ ಮತದಾನ ಜಾಗೃತಿ ವೀಡಿಯೋ ಪ್ರದರ್ಶನ ನಡೆಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries