ವಾಷಿಂಗ್ಟನ್: ಅಮೆರಿಕಾದಿಂದ ತಯಾರಿಸ್ಪಲ್ಪಡುವ ಕಾಗದ ಉತ್ಪನ್ನಗಳು ಹಾಗೂ ಐಕಾನಿಕ್ ಹಾರ್ಲಿ ಡೆವಿಡ್ ಸನ್ ಬೈಕ್ ಗಳ ಮೇಲೆ ಭಾರತ ಹೆಚ್ಚಿನ ತೆರಿಗೆ ವಿಧಿಸುತ್ತಿದೆ ಎಂದು ಟೀಕಿಸಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತ, ಚೀನಾ, ಮತ್ತು ಜಪಾನ್ ನಂತರ ರಾಷ್ಟ್ರಗಳಿಂದ ಬಿಲಿಯನ್ ಡಾಲರ್ ನಷ್ಟು ನಷ್ಟು ಅನುಭವಿಸುತ್ತಿದ್ದೇವೆ ಎಂದು ಕಿಡಿಕಾರಿದ್ದಾರೆ.
ವಿಸ್ಕಾನ್ ಸಿನ್ ರಾಜ್ಯದ ಗ್ರೀನ್ ಬೇ ಸಿಟಿಯಲ್ಲಿ ರಿಪಬ್ಲಿಕನ್ ಪಕ್ಷದ ರಾಜಕೀಯ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಡೊನಾಲ್ಡ್ ಟ್ರಂಪ್, ಎಲ್ಲಾ ರಾಷ್ಟ್ರಗಳು ಹಲವು ವರ್ಷಗಳಿಂದ ಅಮೆರಿಕವನ್ನು ವಂಚಿಸುತ್ತಿವೆ ಎಂದು ಆರೋಪಿಸಿದರು.
ಅಮೆರಿಕಾದ ವಸ್ತುಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸುತ್ತಿರುವ 'ಭಾರತ ತೆರಿಗೆಗಳ ರಾಜ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತ, ಜಪಾನ್, ಚೀನಾದಂತಹ ರಾಷ್ಟ್ರಗಳಿಂದ ಹಲವು ದಶಕಗಳಿಂದ ಬಿಲಿಯನ್ ಡಾಲರ್ ನಷ್ಟು ಕಳೆದುಕೊಂಡಿದ್ದೇವೆ. ಆದರೆ, ಹೆಚ್ಚಿನ ರೀತಿಯಲ್ಲಿ ಕಳೆದುಕೊಂಡಿಲ್ಲ. ಅದಕ್ಕಾಗಿ ಖುಷಿ ಪಡಬೇಕಾಗಿದೆ ಎಂದು ಅವರ ಬೆಂಬಲಿಗರಿಗೆ ಹೇಳಿದರು.
ವಿದೇಶಿ ಕಾಗದ ಉತ್ಪನ್ನಗಳ ಮೇಲೆ ಇತರ ರಾಷ್ಟ್ರಗಳಿಗೆ ನಾವು ಶೂನ್ಯ ತೆರಿಗೆ ವಿಧಿಸುತ್ತೇವೆ. ಆದರೆ, ವಿಸ್ಕಾಸಿನ್ ಕಾಗದ ಕಂಪನಿಗಳು ಇದನ್ನು ಬೇರೆ ದೇಶಗಳಿಗೆ ರಪ್ತು ಮಾಡಿದರೆ ಹೆಚ್ಚಿನ ತೆರಿಗೆ ವಿಧಿಸಿದ್ದಾಗಿ ಚೀನಾ ಹಾಗೂ ಭಾರತ ಬೊಬ್ಬೆ ಹೊಡೆಯುತ್ತವೆ. ವಿಯಟ್ನಾಂ ನಮ್ಮ ಮೇಲೆ ಹೆಚ್ಚಿನ ತೆರಿಗೆ ವಿಧಿಸುತ್ತಿದೆ ಎಂದು ಡೊನಾಲ್ಡ್ ಟ್ರಂಪ್ ತಿಳಿಸಿದರು.
ಭಾರತ, ಜಪಾನ್, ಹಾಗೂ ಚೀನಾದೊಂದಿಗೆ ಹೊಸ ವ್ಯಾಪಾರ ಒಪ್ಪಂದವನ್ನು ಮಾಡಿಕೊಳ್ಳಲಾಗುತ್ತಿದೆ. ಇದಕ್ಕೆ ಸಂಸತ್ತಿನಲ್ಲಿ ಅನುಮೋದನೆ ದೊರೆಯುವ ವಿಶ್ವಾಸ ಇರುವುದಾಗಿ ಟ್ರಂಪ್ ಹೇಳಿದರು.