ಕಾಸರಗೋಡು: ಲೋಕಸಭೆ ಚುನಾವಣೆ ಸಂಬಂಧ ಅಬ್ಯರ್ಥಿಗಳ ವಾಹನ ಪ್ರಚಾರಕ್ಕೆ ಅನುಮತಿ ಪಡೆಯುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚಟುವಟಿಕೆ ನಡೆಸುತ್ತಿರುವ ಇ-ಸುವಿಧಾ ವಾಹನಾನುಮತಿ ಕೇಂದ್ರ ಪ್ರಧಾನವಾಗಿದೆ.
ಇದೇ ಸಂದರ್ಭ ಅಭ್ಯರ್ಥಿಗಳು ಯಾವುದೇ ವಿಧಾನಸಭೆ ಕ್ಷೇತ್ರದಲ್ಲಿ ಮಾತ್ರ ಪ್ರಚಾರ ಪರ್ಯಟನೆ ನಡೆಸುವುದಿದ್ದಲ್ಲಿ ಸಂಬಂಧಪಟ್ಟ ಉಪಚುನಾವಣಾಧಿಕಾರಿಯನ್ನು ಸಂಪರ್ಕಿಸಿದರೆ ಸಾಕು.
ವಾಹನಾನುಮತಿ ಲಭಿಸುವ ನಿಟ್ಟಿನಲ್ಲಿ ಅಭ್ಯರ್ಥಿಗಳು ಯಾ ಅವರಿಗೆ ಸಂಬಂಧಪಟ್ಟವರು ನಿಗದಿತ ಅಪೆಂಡಿಕ್ಸ್ ಸಿ. ಫಾರಂನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿಯೊಂದಿಗೆ ಅಗತ್ಯವಿರುವವರ ವಾಹನ ಚಾಲನೆ ಪರವಾನಗಿ, ಆರ್.ಸಿ.ಪುಸ್ತಕ, ವಿಮೆ ಅರ್ಹತಾಪತ್ರ, ತೆರಿಗೆ ರಶೀದಿ, ಫಿಟ್ ನೆಸ್ ಸರ್ಟಿಫಿಕೆಟ್, ಎಗ್ರಿಮೆಂಟ್ ಪ್ರತಿ ಇತ್ಯಾದಿ ಹಾಜರುಪಡಿಸಬೇಕು. ನಂತರ ಅರ್ಜಿದಾರನ ಮಾಹಿತಿ , ಸಂಬಂಧಪಟ್ಟ ದಖಲೆಗಳು ಚುನಾವಣೆ ಆಯೋಗದ ವೆಬ್ ಸೈಟ್ ಆಗಿರುವ ಇ-ಸುವಿಧಾದಲ್ಲಿ ಅಪ್ ಲೋಡ್ ನಡೆಸುವ ರೀತಿಯ ಅಪ್ಲಿಕೇಷನ್ ಐಡಿ ಲಭಿಸಲಿದೆ.
ವಾಹನದ ಜೊತೆಗೆ ಅಭ್ಯರ್ಥಿಗಳು ಧ್ವನಿವರ್ಧಕ ಬಳಸುವುದಿದ್ದಲ್ಲಿ ಈ ಅಪಲಿಕೇಷನ್ ಐಡಿ, ಸಂಬಂಧಪಟ್ಟ ದಖಲೆಗಳು ಜಿಲ್ಲಾ ಪೊಲೀಸ್ವರಿಷ್ಠಾಧಿಕಾರಿ ಅವರ ಕಾರ್ಯಾಲಯದಲ್ಲಿ ಹಾಜರುಪಡಿಸಬೇಕು. ನಂತರ ಅಲಲಿಂದ ಮೈಕ್ ಪರ್ಮಿಷನ್ ಲಭಿಸುವುದರೊಂದಿಗೆ ವಾಹನಾನುಮತಿಯೂ ಸಂಬಂಧ ಪಟ್ಟ ಕೇಂದ್ರದಲ್ಲಿ ಲಭಿಸಲಿದೆ. ಒಂದು ಅರ್ಜಿ ಅಂಗೀಕರಿಸಿದ ನಂತರ ಅದಕ್ಕೆ ಹತ್ತು ದಿನ ಮಾತ್ರ ಕಾಲಾವಧಿ ಇರುವುದು. ನಂತರದ ಅವಧಿಗೆ ನೂತನ ಅರ್ಜಿ ಸಲ್ಲಿಸಬೇಕು.
ಬೆಳಗ್ಗೆ 10ರಿಂದ ಸಂಜೆ 5 ಗಂಟೆ ವರೆಗೆ ಇ-ಸುವಿಧಾ ಕೇಂದ್ರ ಚಟುವಟಿಕೆ ನಡೆಸುತ್ತಿದೆ. ಜೊತೆಗೆ ರಜೆ ದಿನಗಳಲ್ಲೂ ಕೇಂದ್ರ ಚಟುವಟಿಕೆ ನಡೆಸುತ್ತದೆ.