ವಯನಾಡಿನಲ್ಲಿ ರಾಹುಲ್ ಸ್ಪರ್ಧೆ ಅಜ್ಞಾನ ಕಾರಣ : ಬಿನೋಯ್ ವಿಶ್ವಂ
0
ಏಪ್ರಿಲ್ 05, 2019
ಕಾಸರಗೋಡು: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಯನಾಡು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್„ಸುತ್ತಿರುವುದು ರಾಜಕೀಯ ಅಜ್ಞಾನ ಕಾರಣವೆಂದು ಸಿಪಿಐ ಕೇಂದ್ರ ಸೆಕ್ರೆಟರಿಯೇಟ್ ಸದಸ್ಯ ಬಿನೋಯ್ ವಿಶ್ವಂ ಅಪಹಾಸ್ಯಗೈದರು.
ಕಾಸರಗೋಡು ಪ್ರೆಸ್‍ಕ್ಲಬ್‍ನಲ್ಲಿ `ಮೀಟ್ ದಿ ಪ್ರೆಸ್' ಕಾರ್ಯಕ್ರಮದಲ್ಲಿ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.
ದೇಶದ ಪ್ರಮುಖ ಶತ್ರು ಬಿಜೆಪಿ. ದಕ್ಷಿಣದಲ್ಲಿ ಸ್ಪರ್„ಸಿ ಉತ್ತರದಲ್ಲಿರುವ ಶತ್ರುವನ್ನು ಪರಾಭವಗೊಳಿಸುತ್ತೇವೆ ಎಂಬುದು ಅಪಹಾಸ್ಯವಲ್ಲದೆ ಇನ್ನೇನು ಎಂದು ಅವರು ಪ್ರಶ್ನಿಸಿದರು. ಬಿಜೆಪಿಗೆ ಬೆದರಿ ಕಾಂಗ್ರೆಸ್ ಪರಾರಿಯಾಗುತ್ತಿರುವುದು ಉಚಿತವಲ್ಲ. ವಯನಾಡಿನಲ್ಲಿ ಕಾಂಗ್ರೆಸ್ ಸಾಕಷ್ಟು ಹಣ ವಿತರಿಸಲಿದೆ ಎಂದ ಆರೋಪಿಸಿದ ಅವರು ರಾಹುಲ್ ಗಾಂ„ ರೋಡ್‍ಶೋದಲ್ಲಿ ಭಾಗವಹಿಸಿದ ಜನಸಹಭಾಗಿತ್ವ ಮತವಾಗಿ ಪರಿವರ್ತಿಸಬೇಕಾಗಿಲ್ಲ ಎಂದರು.
ಬಿಜೆಪಿ ಸಂಸ್ಕøತಿಯನ್ನು ನಾಶಗೊಳಿಸಲು ಪ್ರಯತ್ನಿಸುತ್ತಿದೆ. ದಿನಗಳ ಹಿಂದೆ ಬಿಜೆಪಿ ಹಿರಿಯ ನೇತಾರ ಎಲ್.ಕೆ.ಅಡ್ವಾಣಿ ಅವರು ನೀಡಿದ ಹೇಳಿಕೆ ಗಮನಾರ್ಹವಾಗಿದೆ. ವ್ಯಕ್ತಿಯಲ್ಲ ಮುಖ್ಯ. ದೇಶ ಮುಖ್ಯ. ಈ ಮಾತನ್ನು ಮೋದಿ ಅವರನ್ನು ಉದ್ದೇಶಿಸಿ ಅದ್ವಾಣಿ ಹೇಳಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬಿನೋಯ್ ವಿಶ್ವಂ ಅವರೊಂದಿಗೆ ಸಿ.ಪಿ.ಐ. ರಾಜ್ಯ ಕೌನ್ಸಿಲರ್ ಟಿ.ಕೃಷ್ಣನ್ ಜೊತೆಯಲ್ಲಿದ್ದರು.