ಕುಂಬಳೆ: ಶಡ್ರಂಪಾಡಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಜರಗುತ್ತಿರುವ ನವೀಕರಣ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಸೋಮವಾರ ಪೂರ್ವಾಹ್ನ 6.30ರಿಂದ ಗಣಪತಿ ಹೋಮ, ಸೋಪಾನದಲ್ಲಿ ಪೂಜೆ, ದೊಡ್ಡ ಬಲಿಕಲ್ಲು ಪ್ರತಿಷ್ಠೆ, ಸಣ್ಣ ಬಲಿಕಲ್ಲುಗಳ ಪ್ರತಿಷ್ಠೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ6 ರಿಂದ 8ರ ವರೆಗೆ ಸೋಪಾನದಲ್ಲಿ ಪೂಜೆ, ಅಂಕುರಪೂಜೆ, ರಾತ್ರಿ ಪೂಜೆಗಳು ನಡೆಯಿತು.
ಶ್ರೀರಾಜರಾಜೇಶ್ವರಿ ಭಜನಾ ಸಂಘ ಮಾಯಿಪ್ಪಾಡಿ, ಶ್ರೀಸತ್ಯನಾರಾಯಣ ಭಜನಾ ಸಂಘ ಐಲ ತಂಡದವರಿಂದ ಬೆಳಿಗ್ಗೆ ಹಾಗೂ ವೈಕುಂಠ ಕಾಮತ್ ಮತ್ತು ಬಳಗ ಕುಂಬಳೆ ತಂಡದವರಿಂದ ಸಂಜೆ 4 ರಿಂದ ಭಜನಾ ಸಂಕೀರ್ತನೆ ನಡೆಯಿತು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 10.30 ರಿಂದ ವಿದುಷಿಃ ಸಾವಿತ್ರಿ ಕೆ.ಭಟ್ ದೊಡ್ಡಮಾಣಿ ಮತ್ತು ಶಿಷ್ಯವೃಂದದವರಿಂದ ಸಂಗೀತ ಕಚೇರಿ, ಮಧ್ಯಾಹ್ನ 1 ರಿಂದ ನಾರಾಯಣಮಂಗಲದ ವಿಘ್ನೇಶ್ವರ ಯಕ್ಷಗಾನ ಕಲಾಸಂಘದವರಿಂದ ರಣವೀಳ್ಯ ಯಕ್ಷಗಾನ ತಾಳಮದ್ದಳೆ, ರಾತ್ರಿ 7ರಿಂದ ಹನುಮಗಿರಿ ಕೋದಂಡರಾಮ ಕೃಪಾಪೋಶಿತ ಯಕ್ಷಗಾನ ಮಂಡಳಿಯವರಿಂದ ಗಜೇಂದ್ರ ಮೋಕ್ಷ-ಕಂಸವಧೆ-ರತಿ ಕಲ್ಯಾಣ ಯಕ್ಷಗಾನ ಬಯಲಾಟವು ಕಿಕ್ಕಿರಿದ ಜನಸಾಗರದೊಂದಿಗೆ ಪ್ರದರ್ಶನಗೊಂಡಿತು.
ಇಂದಿನ ಕಾರ್ಯಕ್ರಮಗಳು:
ಮಂಗಳವಾರದಂದು ಪ್ರಾತಃಕಾಲ 6.30 ರಿಂದ ಗಣಪತಿ ಹೋಮ, ಸೋಪಾನದಲ್ಲಿ ಪೂಜೆ, ಬ್ರಹ್ಮಕಲಶ ಪೂಜೆ, ಪರಿಕಲಶ ಪೂಜೆ, ತತ್ತ್ವ ಹೋಮ, ತತ್ತ್ವಕಲಶ ಪೂಜೆ ಜರಗಲಿದೆ. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಪ್ರಸಾದ ಭೋಜನದ ನಂತರ ಸಾಯಂಕಾಲ ಸೋಪಾನದಲ್ಲಿ ಪೂಜೆ, ಅಧಿವಾಸ ಹೋಮ, ಕಲಶಾಧಿವಾಸ, ಪ್ರಾರ್ಥನೆಯ ನಂತರ ರಾತ್ರಿ ಮಹಾಪೂಜೆ ನಡೆಯಲಿವೆ.
ಶ್ರೀ ಅನಂತಪದ್ಮನಾಭ ಭಜನಾ ಸಂಘ ಅನಂತಪುರ, ಶ್ರೀ ಸತ್ಯನಾರಾಯಣ ಭಜನಾ ಸಂಘ ಮುಖಾರಿಗದ್ದೆ ಇವರಿಂದ ಬೆಳಿಗ್ಗೆ ಮತ್ತು ಕುತ್ಯಾಳ ರಕ್ತೇಶ್ವರಿ ಭಜನಾ ಸಂಘ ಕೋಟೆಕ್ಕಾರು ಇವರಿಂದ ಅಪರಾಹ್ನ ಭಜನಾ ಕಾರ್ಯಕ್ರಮ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಬೆಳಿಗ್ಗೆ 10.30 ರಿಂದ ಬಂಟ್ವಾಳದ ಕುಮಾರಿ ಗಹನಶ್ರೀ ಕಡೇಶಿವಾಲಯ ಮತ್ತು ಬಳಗದವರಿಂದ ಸಂಗೀತ ಕಛೇರಿ ಜರಗಲಿದೆ. ಅಪರಾಹ್ನ 2 ರಿಂದ ಶ್ರೀಕೃಷ್ಣ ಲೀಲಾಮೃತಂ ಯಕ್ಷಗಾನ ತಾಳಮದ್ದಳೆ ಜರಗಲಿದೆ. ಹಿಮ್ಮೇಳ ಕಲಾವಿದರಾಗಿ ಸಿರಿಬಾಗಿಲು ರಾಮಕೃಷ್ಣ ಮಯ್ಯ, ತಲ್ಪಣಾಜೆ ಶಿವಶಂಕರ ಭಟ್, ಗೋಪಾಲಕೃಷ್ಣ ನಾವಡ ಮಧೂರು, ಮುರಳೀಮಾಧವ ಮಧೂರು ಇವರು ಸಹಕರಿಸಲಿದ್ದಾರೆ. ಅರ್ಥಧಾರಿಗಳಾಗಿ ಯಚ್.ಶಂಭು ಶರ್ಮ, ರಾಧಾಕೃಷ್ಣ ಕಲ್ಚಾರ್, ಸಪರ್ಂಗಳ ಈಶ್ವರ ಭಟ್, ಹರೀಶ ಬಳಂತಿಮೊಗರು ಮತ್ತು ಜಯರಾಮ ದೇವಸ್ಯ ಭಾಗವಹಿಸುವರು. ರಾತ್ರಿ 7 ರಿಂದ ನಾಟ್ಯನಿಲಯ ಬಾಲಕೃಷ್ಣ ಮಂಜೇಶ್ವರ ಇವರ ಶಿಷ್ಯವೃಂದದವರಿಂದ ನೃತ್ಯಾರ್ಪಣಂ ಭರತನಾಟ್ಯ ಮತ್ತು ಜಾನಪದ ನೃತ್ಯ ಕಾರ್ಯಕ್ರಮ ಜರಗಲಿದೆ.

ಚಿತ್ರ ಮಾಹಿತಿ ಭಾನುವಾರದ ನಡೆದ ಚಿತ್ತರಂಜಿನಿ ಹಿಳ್ಳೆಮನೆ ಮತ್ತು ಬಳಗದವರಿಂದ ಸಂಗೀತ ಕಛೇರಿ,2). ಉಳಿಯ ಶ್ರೀ ಧನ್ವಂತರೀ ಯಕ್ಷಗಾನ ಕಲಾಸಂಘ, ಮಧೂರು ಇವರಿಂದ ಭೀಷ್ಮೋತ್ಪತ್ತಿ - ಭೀಷ್ಮ ಪ್ರತಿಜ್ಞೆ ಯಕ್ಷಗಾನ ತಾಳಮದ್ದಳೆ.