HEALTH TIPS

ಅಕ್ರಮ ಮತದಾನ ಶಿಕ್ಷಾರ್ಹ ಅಪರಾಧ


      ಕಾಸರಗೋಡು: ಬೇರೊಬ್ಬರ ಮತದಾನವನ್ನು ಅಕ್ರಮವಾಗಿ ನಡೆಸಲು (ಅಕ್ರಮ ಮತದಾನ)ಯತ್ನಿಸಿದವರ ಮತ್ತು ಒಮ್ಮೆ ಮತದಾನ ನಡೆಸಿದ ವಿಚಾರವನ್ನು ಗುಟ್ಟಾಗಿರಿಸಿ ಮತ್ತೊಮ್ಮೆ ಮತ ಚಲಾಯಿಸಲು ಯತ್ನಿಸುವುದು ಜನಪ್ರಾತಿನಿಧ್ಯ ಕಾನೂನು ಪ್ರಕಾರ ಮತ್ತು ಭಾರತೀಯ ದಂಡ ಸಂಹಿತೆ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ. ಅಂಥಾ ಆರೋಪಿಗಳಿಗೆ ಐ.ಪಿ.ಸಿ.171 ಎಫ್. ಪ್ರಕಾರ ಒಂದು ವರ್ಷ ವರೆಗೆ ಸಜೆ   ಮತ್ತು ದಂಡ ವಿಧಿಸಲಾಗುವುದು.
     ಯಾರದ್ದಾದರೂ ಪ್ರೇರಣೆಯಿಂದ ಅಕ್ರಮ ಮತದಾನ ನಡೆಸಿದರೂ ಅದು ಶಿಕ್ಷಾರ್ಹವಾಗಿದ್ದು, ಶಿಕ್ಷೆಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ಇನ್ನೊಬ್ಬರ ಗುರುತು ಚೀಟಿಯನ್ನು ಅಕ್ರಮವಾಗಿ ಸಿದ್ಧಪಡಿಸಿ ಅಕ್ರಮ ಮತದಾನ ನಡೆಸಲು ಯತ್ನಿಸಿದರೆ ಅಕ್ರಮ ದಾಖಲೆ ನಿರ್ಮಾಣ ನಡೆಸಿದ ಮತ್ತು ಇನ್ನೊಬ್ಬರ ಮತವನ್ನು ಅಕ್ರಮವಾಗಿ ಚಲಾಯಿಸಿದ ಆರೋಪದಲ್ಲಿ ಕೇಸು ದಾಖಲಿಸಲಾಗುವುದು. ನೆರೆ ರಾಜ್ಯಗಳಲ್ಲಿ ಈಗಾಗಲೇ ಮತದಾನ ನಡೆಸಿ, ಜಿಲ್ಲೆಯ ಗಡಿಪ್ರದೇಶದಲ್ಲಿ ವಾಸವಾಗಿರುವ ಮಂದಿ ಮತ್ತೆ ಕಾಸರಗೋಡಿನಲ್ಲಿ ಮತದಾನ ನಡೆಸಲು ಯತ್ನಿಸಿದರೆ ಅಂಥವರ ಬಗ್ಗೆ ನಿಗಾ ಇರಿಸಲು ಪ್ರತ್ಯೇಕ ನಿರೀಕ್ಷಕರನ್ನು ನೇಮಿಸಲಾಗಿದೆ. ಇಂಥಾ ಯತ್ನವನ್ನು ಯಾರಾದರೂ ನಡೆಸಿದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.
     ವಿದೇಶದಲ್ಲಿರುವ, ಬೇರೆ ರಾಜ್ಯದಲ್ಲಿರುವ ವ್ಯಕ್ತಿಗಳ ಮತದಾತರ, ಮತದಾತರ ಪಟ್ಟಿಯಲ್ಲಿ ಹೆಸರು ಹೊಂದಿರುವ, ಆದರೆ ನಿಧನರಾಗಿರುವ ವ್ಯಕ್ತಿಗಳ ಹೆಸರಲ್ಲಿ ಅಕ್ರಮವಾಗಿ ದಾಖಲೆ ನಿರ್ಮಿಸಿ, ಮತದಾನ ನಡೆಸಲು ಯತ್ನಿಸಿದವರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ನಿಜವಾದ ಮತದಾತರನ್ನು ಗುರುತಿಸಲು ಕರ್ತವ್ಯದಲ್ಲಿರುವ ಸಿಬ್ಬಂದಿ ಯತ್ನಿಸಬೇಕು. ಮತದಾತರ ಗುರುತು ಸಂಬಂಧ ದೂರುಗಳಿದ್ದಲ್ಲಿ ಕಾನೂನು ರೀತ್ಯಾ ಕ್ರಮಗಳು ಪೂರ್ಣಗೊಂಡ ನಂತರವಷ್ಟೇ ಮತದಾನ ನೆಸಲು ಅನುಮತಿ ನೀಡಬೇಕು. ಟೆಂಡರ್ ಮತ ಚಲಾಯಿಸುವುದಿದ್ದರೆ, ಮತಯಂತ್ರದಲ್ಲಿ ನಡೆಸಲು ಅನುಮತಿ ನೀಡಕೂಡದು.
    ಯಾವುದೇ ಅಭ್ಯರ್ಥಿಗೆ ಮತದಾನ ನಡೆಸುವ ನಿಟ್ಟಿನಲ್ಲಿ ಹಣ ಯಾ ಇನ್ನಿತರ ಕೊಡುಗೆ ನೀಡಿಕೆ, ಬೆದರಿಕೆ ಇನ್ನಿತರ ರೂಪದಲ್ಲಿ ಪ್ರೇರೇಪಣೆ ನೀಡಿದರೆ, ಯಾವುದಾದರೂ ರೂಪದಲ್ಲಿ ಮತದಾನ ನಡೆಸುವುದಕ್ಕೆ ತಡೆಮಾಡಿದರೆ, ಮತಗಟ್ಟೆ ಬಳಿ ತಡೆಮಾಡುವುದು, ಸಂಘರ್ಷಕ್ಕೆ ಯತ್ನಿಸಿದರೆ ಕ್ರಮಕೈ ಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
         ಟೆಂಡರ್ ಮತದಾನ:
     ಮತದಾನ ನಡೆಸುವುದಕ್ಕೆ ಮತಗಟ್ಟೆಗೆ ಆಗಮಿಸಿದ ವ್ಯಕ್ತಿಗೆ ತನ್ನ ಮತ ಈಗಾಗಲೇ ಬೇರೆ ಯಾರೋ ಚಲಾಯಿಸಿದ್ದಾರೆ ಎಂದು ಪ್ರಿಸೈಡಿಂಗ್ ಅಧಿಕಾರಿ ಮೂಲಕ ತಿಳಿದುಬಂದರೆ, ಅಸಲಿ ಮತದಾತನಿಗೆ ಟೆಂಡರ್ ಮತದಾನ ನಡೆಸಲು ಅನುಮತಿ ನೀಡಲಾಗುವುದು. ಆದರೆ ಟೆಂಡರ್ ಮತದಾನ ಮತಯಂತ್ರ ಮೂಲಕ ನಡೆಸಲು ಸಾಧ್ಯವಿಲ್ಲ. ಇದಕ್ಕಾಗಿ ಬ್ಯಾಲೆಟ್ ಪೇಪರ್ ಬಳಸಬೇಕು. ಮತದಾನ ನಡೆಸಿದ ನಂತರ ಬ್ಯಾಲೆಟ್ ಪೇಪರ್ ಸೀಲ್ ನಡೆಸಿ ಇರಿಸಬೇಕು. ಈ ಕುರಿತು ಮಾಹಿತಿಯನ್ನು 17 ಎ. ರಿಜಿಸ್ಟರ್ ನಲ್ಲಿ ದಾಖಲಿಸಲಾಗುವುದು.     
      ಚಾಲೆಂಜ್ ವೋಟ್:
    ಮತದಾತನ ಗುರುತಿನ ಸಂಬಂಧ ಮತಗಟ್ಟೆಯ ಏಜೆಂಟರಿಗೆ ಆಕ್ಷೇಪ ಇದ್ದಲ್ಲಿ 2 ರೂ. ಠೇವಣಿ ಇರಿಸಿ, ಆಕ್ಷೇಪ ಮಂಡಿಸಬಹುದು. ಈ ವಿಚಾರ ಸಂಬಂಧ ಪ್ರಿಸೈಡಿಂಗ್ ಅಧಿಕಾರಿ ವಿಚಾರಣೆ ನಡೆಸಬೇಕು. ವಿವಾದ ತುಂಬ ಹೊತ್ತು ಇಲ್ಲದೇ ಇದ್ದಲ್ಲಿ ಮತದಾತನಿಗೆ ಮತದಾನ ನಡೆಸಲು ಅನುಮತಿ ನೀಡಬೇಕು. ಆಕ್ಷೇಪ ಬಿಗಿಯಾಗಿದ್ದಲ್ಲಿ ಆರೋಪಿ ಮತದಾತನನ್ನು ಪೆÇಲೀಸರಿಗೆ ಹಸ್ತಾಂತರಿಸಬೇಕು.
     ಪ್ರಾಕ್ಸಿ ವೋಟ್:
       ಸಿ.ಎಸ್.ವಿ.(ಕ್ಲಾಸಿಫೈಡ್ ಸರ್ವೀಸ್ ವೋಟರ್) ಪಟ್ಟಿಯಲ್ಲಿರುವ ವ್ಯಕ್ತಿಗಾಗಿ ಪ್ರಾಕ್ಸಿ ಆಗಿ ನೇಮಕಮಾಡಲಾದ ವ್ಯಕ್ತಿ ಮತದಾನ ನಡೆಸಬಹುದು. ಮತದಾನ ನಡೆಸುವ ವೇಳೆ ಪ್ರಾಕ್ಸಿಯ ನಡುಬೆರಳಿಗೆ ಶಾಯಿ ಗುರುತು ಹಾಕಲಾಗುವುದು. 
      ಸಿಬ್ಬಂದಿ ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಬೇಕು:
      ಇಂದು(ಏ.23) ನಡೆಯುವ ಲೋಕಸಭೆ ಚುನಾವಣೆಯ ಕರ್ತವ್ಯಕ್ಕೆ ನೇಮಕಗೊಂಡಿರುವ ಸಿಬ್ಬಂದಿ ನಿಷ್ಪಕ್ಷಪಾತವಾಗಿ, ಕಾನೂನು ಬದ್ಧವಾಗಿ ಹೊಣೆ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.
    ಯಾವುದೇ ರಾಜಕೀಯ ಪಕ್ಷದ ಪರವಾಗಿ ಅಥವಾ ವಿರೋಧವಾಗಿ, ಇನ್ನಿತರ ರೀತಿಯ ಪಕ್ಷಪಾತ ರೂಪದಲ್ಲಿ ಸಿಬ್ಬಂದಿ ವರ್ತಿಸಬಾರದು. ಎಲ್ಲರನ್ನೂ ಒಂದೇ ರೀತಿ ಕಾಣಬೇಕು. ಸ್ವತಂತ್ರ ಮತ್ತು ಕಾನೂನು ಬದ್ಧ ಚುನಾವಣೆ ನಡೆಯುವಲ್ಲಿ ಪೂರಕವಾಗಿರಬೇಕು. ಮತದಾನ ಸಂಬಂಧ ಚಟುವಟಿಕೆಗಳು ಜನಪ್ರಾತಿನಿಧ್ಯ ಕಾನೂನು ಪ್ರಕಾರ ಮತ್ತು ಚುನಾವಣೆ ನೀತಿ ಸಂಹಿತೆ, ಮಾರ್ಗದರ್ಶನ ಪ್ರಕಾರ ನಡೆಯಬೇಕಾಗಿದೆ. ಚುನಾವಣೆ ಸಂಬಂಧ ಎಲ್ಲ ವಿಚಾರಗಳಿಗೂ ಸ್ಪಷ್ಟ ರೂಪದ ನಿಯಮಾವಳಿ ಮತ್ತು ಮಾರ್ಗದರ್ಶನಗಳಿವೆ. ಇವನ್ನು ಕಡ್ಡಾಯವಾಗಿ ಪಾಲಿಸಬೇಕು. ಈ ಆದೇಶ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಮುನ್ನೆಚ್ಚರಿಕೆ ನೀಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries