ಕಾಸರಗೋಡು: `ಉಗ್ರರಿಗೆ ಜಾತಿ, ಮತವಿಲ್ಲ. ಹಿಂಸೆಯ ವಿರುದ್ಧ ಕೈಜೋಡಿಸುವ' ಎಂಬ ಸಂದೇಶದೊಂದಿಗೆ ಶ್ರೀಲಂಕಾದ ಜನತೆಗೆ ಬೆಂಬಲ ಸಾರಿ ಮುಸ್ಲಿಂ ಯೂತ್ ಲೀಗ್ ಕಾಸರಗೋಡು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕಾಸರಗೋಡು ನಗರದಲ್ಲಿ ಭಾನುವಾರ ಮೆರವಣಿಗೆ ನಡೆಯಿತು.
ಈಸ್ಟರ್ ದಿನದಂದು ಕೊಲಂಬೋದಲ್ಲಿ ಉಗ್ರರು ನಡೆಸಿದ ಬಾಂಬ್ ಸ್ಪೋಟದಲ್ಲಿ ಸಾವಿಗೀಡಾದ ಅಮಾಯಕರ ಕುಟುಂಬಗಳಿಗೆ ಸಾಂತ್ವನ ವ್ಯಕ್ತಪಡಿಸಲಾಯಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷ ಅಶ್ರಫ್ ಎಡನೀರು, ಪ್ರಧಾನ ಕಾರ್ಯದರ್ಶಿ ಟಿ.ಡಿ.ಕಬೀರ್, ಪದಾಧಿಕಾರಿಗಳಾದ ಯೂಸುಫ್ ಉಳುವಾರು, ನಾಸರ್ ಚಾಯಿಂಡಡಿ, ಮನ್ಸೂರ್ ಮಲ್ಲತ್, ಎಂ.ಎ.ನಜೀಬ್, ಅಸೀಸ್ ಕಳತ್ತೂರು, ಹಾರಿಸ್ ತೊಟ್ಟಿ, ರೌಫ್ ಬಾವಿಕೆರೆ, ರಹ್ಮಾನ್ ಗೋಲ್ಡನ್, ಕೆ.ಕೆ.ಬದ್ರುದ್ದೀನ್, ಆಬೀದ್ ಆರಂಗಾಡಿ, ಮುಜೀಬ್ ಕಂಬಾರು, ಹಾರಿಸ್ ಬೆದಿರ, ಸಲೀಂ ಬಾರಿಕ್ಕೋಡ್ ಮೊದಲಾದವರು ನೇತೃತ್ವ ನೀಡಿದರು.