ಬದಿಯಡ್ಕ: ಇತಿಹಾಸ ಪ್ರಸಿದ್ಧ ಪುತ್ರಕಳ ಬೂಡು ಹಾಗೂ ದೈವ ಸಾನಿಧ್ಯಗಳ ಜೀರ್ಣೋದ್ಧಾರ ಕಾರ್ಯದಂಗವಾಗಿ ಮೇ 8ರಂದು ಜರಗಲಿರುವ ಅನುಜ್ಞಾ ಕಲಶ ಹಾಗೂ ಬಾಲಾಲಯ ಪ್ರತಿಷ್ಠೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಇತ್ತೀಚೆಗೆ ಜರಗಿತು. ಬೂಡಿನಲ್ಲಿ ವಿಶೇಷ ಪ್ರಾರ್ಥನೆಯ ಬಳಿಕ ಜೀರ್ಣೋದ್ಧಾರ ಸಮಿತಿ ಉಪಾದ್ಯಕ್ಷ ಬಾಲಕೃಷ್ಣ ಕೆ.ಕೆ. ಅವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಜೀರ್ಣೊದ್ಧಾರ ಸಮಿತಿಯ ಗೌರವ ಸಲಹೆಗಾರ ಪಿ.ವೈ.ದೇರಣ್ಣ ರೈ ಪುತ್ರಕಳ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸತೀಶ ಶೆಟ್ಟಿ ದೆಯ್ಯಂದ್ರೆ, ಜಯ ಮಣಿಯಂಪಾರೆ, ವಿಜಯ ರೈ ಪುತ್ರಕಳ, ಸತೀಶ ಶೆಟ್ಟಿ ಪುತ್ರಕಳ, ಮೋಹನ ರೈ ಪುತ್ರಕಳ,ಭಾಸ್ಕರ ಆಳ್ವ ಪುತ್ರಕಳ, ನವೀನ್ ಶೆಟ್ಟಿ ಪುತ್ರಕಳ, ಸಂತೋಷ್ ರೈ ಪುತ್ರಕಳ, ಕಿಶೋರ ಆಳ್ವ ಪುತ್ರಕಳ, ಜಯರಾಮ ರೈ ಪುತ್ರಕಳ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.
ಮೇ 8ರಂದು ಬೆಳಿಗ್ಗೆ 7.20ರಿಂದ 8.04ರ ವೃಷಭ ಲಗ್ನ ಸುಮುಹೂರ್ತದಲ್ಲಿ ಅನುಜ್ಞಾ ಕಲಶ ಹಾಗೂ ಬಾಲಲಯ ಪ್ರತಿಷ್ಠೆ, 9 ಗಂಟೆಗೆ ಏತಡ್ಕದ ಶ್ರೀದುರ್ಗಾ ಬಾಲಗೋಕುಲ ತಂಡದಿಂದ ಭಜನಾ ಸಂಕೀರ್ತನೆ, 10 ಗಂಟೆಗೆ ಅಷ್ಟದ್ರವ್ಯ ಸಹಿತ 108 ಕಾಯಿ ಗಣಪತಿಹೋಮ, 12.30 ಕ್ಕೆ ಹೋಮದ ಪೂರ್ಣಾಹುತಿ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ಜರಗಲಿದೆ.