ಮಂಜೇಶ್ವರ: ದೈಗೋಳಿಯ ಶ್ರೀಸಾಯಿ ಸೇವಾ ಪ್ರತಿಷ್ಠಾನದ ನೇತೃತ್ವದಲ್ಲಿ ಶ್ರೀಸತ್ಯಸಾಯಿ ಆರಾಧನಾ ಮಹೋತ್ಸವ ಹಾಗೂ ಶ್ರೀಸಾಯಿನಿಕೇತನ ಸೇವಾಶ್ರಮ ಕಟ್ಟಡದ ವಿಸ್ತರಿಸಿದ ಭಾಗದ ಅನಾವರಣ ಇಂದು(ಏ.21) ಬೆಳಿಗ್ಗೆ9 ರಿಂದ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 9ಕ್ಕೆ ಕಾರ್ಯಕ್ರಮಗಳನ್ನು ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಶ್ರೀಗಳು ಉದ್ಘಾಟಿಸಿ ಚಾಲನೆ ನೀಡುವರು. 9.30ರಿಂದ ಬೋಳಂತಕೋಡಿ ರಾಮ ಭಟ್ ಅವರ ನೇತೃತ್ವದಲ್ಲಿ ಶ್ರೀಸತ್ಯನಾರಾಯಣ ಪೂಜಾರಂಭ ನಡೆಯಲಿದೆ. ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತೀ ಶ್ರೀಗಳು ಉಪಸ್ಥಿತರಿದ್ದು ಆಶೀರ್ವಚನ ನೀಡುವರು. ಅಳಿಕೆಯ ಶ್ರೀಸತ್ಯಸಾಯಿ ಲೋಕಸೇವಾ ಟ್ರಸ್ಟ್ ಅಧ್ಯಕ್ಷ ಯು.ಗಂಗಾಧರ ಭಟ್ ಅಧ್ಯಕ್ಷತೆ ವಹಿಸುವರು. ಕರ್ನಾಟಕ ಬ್ಯಾಂಕ್‍ನ ಪ್ರಧಾನ ಪ್ರಬಂಧಕ ವೈ.ವಿ.ಬಾಲಚಂದ್ರ, ಸತ್ಯಸಾಯಿ ಲೋಕಸೇವಾ ಸಂಸ್ಥೆಯ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ, ಕರ್ನಾಟಕ ರಾಜ್ಯ ಟ್ರಸ್ಟ್ ಸದಸ್ಯ ಎಂ.ಪದ್ಮನಾಭ ಪೈ, ರಾಜ್ಯ ಮಹಿಳಾ ಸೇವಾ ಸಂಯೋಜಕಿ ಪ್ರಿಯಾ ಪಿ.ಪೈ, ಮಂಗಳೂರು ಲಯನ್ಸ್ ಕ್ಲಬ್ ಅಧ್ಯಕ್ಷ ವಿಜಯ ವಿಷ್ಣು ಮಯ್ಯ ಟಿ, ರೋಟರಿ ಕ್ಲಬ್ ಸಹಾಯಕ ಗವರ್ನರ್ ಪ್ರಕಾಶ ಕಾರಂತ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಡಾ.ರಾಮಪ್ರಕಾಶ ಎಸ್, ಡಾ.ಪ್ರದ್ಯುಮ್ನ, ವಿಶು ಶೆಟ್ಟಿ ಅಂಬಲಪಾಡಿ, ರೋಶನ್ ಬೆಳ್ಮಣ್ ಅವರನ್ನು ಈ ಸಂದರ್ಭ ಸನ್ಮಾನಿಸಲಾಗುವುದು.
ಮಧ್ಯಾಹ್ನ 12.30ಕ್ಕೆ ಶ್ರೀಸತ್ಯನಾರಾಯಣ ಪೂಜಾ ಮಂಗಳಾರತಿ, ಪ್ರಸಾದ ವಿತರಣೆ, ಭೋಜನ ಪ್ರಸಾದ, ಅಪರಾಹ್ನ 2 ರಿಂದ ಹವ್ಯಾಸಿ ಯಕ್ಷ ಬಳಗ ಕೋಳ್ಯೂರು ತಂಡದವರಿಂದ ಸುಧನ್ವ ಮೋಕ್ಷ-ವೀರವರ್ಮ ಕಾಳಗ ಯಕ್ಷಗಾನ ಪ್ರದರ್ಶನ ನಡೆಯಲಿದೆ.