ಮಂಜೇಶ್ವರ: ಎಡರಂಗ ಈ ಲೋಕಸಭಾ ಚುನಾವಣೆಯಲ್ಲಿ ವ್ಯಾಪಕ ಅಡ್ಡ ಮತದಾನ ಮಾಡಿರುವ ಮಾಹಿತಿ ಬಹಿರಂಗಗೊಳ್ಳುತ್ತಿದಂತೆ ಕಾಂಗ್ರೆಸ್ ಹಾಗೂ ಮುಸ್ಲಿಂ ಲೀಗ್ ಎಡರಂಗದ ವಿರುದ್ಧ ಮಾಡುತ್ತಿರುವ ಆರೋಪಗಳು ಕೇವಲ ಮೊಸಳೆ ಕಣ್ಣೀರೆಂದು ಬಿಜೆಪಿ ಮಂಜೇಶ್ವರ ಮಂಡಲ ಪ್ರ.ಕಾರ್ಯದರ್ಶಿ ಆದರ್ಶ್ ಬಿಎಂ ಮಾಧ್ಯಮ ಪ್ರಕಟಣೆಯಲ್ಲಿ ಹೇಳಿರುವರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಡ್ಡ ಮತದಾನದಿಂದ ಗೆದ್ದ ಮುಸ್ಲಿಂಲಿಗ್ ವಿರುದ್ಧ ಬಿಜೆಪಿ ಅಭ್ಯರ್ಥಿ ಕೆ ಸುರೇಂದ್ರನ್ ಕಾನೂನು ಹೋರಾಟ ಆರಂಭಿಸಿದಾಗ ಲೇವಡಿ ಮಾಡಿದ ಮುಸ್ಲಿಂಲಿಗ್, ಕಾಂಗ್ರೆಸ್‍ಗೆ ಎಡರಂಗದ ನಕಲಿ ಮತದಾನದ ವಿರುದ್ದ ಹೋರಾಡುವ ನೈತಿಕತೆ ಇದೆಯೇ ಎಂದು ಅವರು ಪ್ರಶ್ನಿಸಿದರು. ಅಡ್ಡ ಮತ ಚಲಾವಣೆ ವಿರುದ್ಧ ಕೆ.ಸುರೇಂದ್ರನ್ ಕಾನೂನು ಸಮರ ಆರಂಭಿಸಿದಾಗ ವಿರೋಧಿಸಿದ ಯುಡಿಎಫ್ ಈಗ ಅಡ್ಡ ಮತದಾನ ಎಮದು ಬೊಬ್ಬೆ ಹಾಕುತ್ತಿದೆ. ನಕಲಿ ಮತದಾನ ಎಡರಂಗ ಹಾಗೂ ಐಕ್ಯರಂಗ ತಮ್ಮ ಶಕ್ತಿ ಕೇಂದ್ರಗಳಲ್ಲಿ ವ್ಯವಸ್ಥಿತವಾಗಿ ಮಾಡುತ್ತಿದೆ ಎಂದು ಬಿಜೆಪಿ ಈ ಹಿಂದೆಯೇ ಆರೋಪಿಸುತ್ತಿದ್ದಾಗ ಬಿಜೆಪಿ ಯ ಆರೋಪವನ್ನು ಅಲ್ಲಗೆಳೆದ ಎಡರಂಗದ ಹಾಗೂ ಐಕ್ಯರಂಗದ ನಾಯಕರುಗಳು ತಮ್ಮ ರಾಜಕೀಯ ನೈತಿಕತೆ ಸ್ಪಷ್ಟ ಪಡಿಸಬೇಕೆಂದು ಬಿಜೆಪಿ ಆಗ್ರಹಿಸಿದೆ.
ಗೆಲುವಿಗಾಗಿ ಅಡ್ಡದಾರಿ ಹಿಡಿಯುವ ಎಡರಂಗ ತಮ್ಮ ರಾಜಕೀಯ ದೀವಾಳಿತನವನ್ನು ಪ್ರದರ್ಶಿಸಿಸುತ್ತಿದೆ. ಕೆ.ಸುರೇಂದ್ರನ್ ರ ಕಾನೂನು ಹೋರಾಟಕ್ಕೆ ಪ್ರಸ್ತುತ ದೊರಕಿರುವ ಜಯವು ಪ್ರಜಾಪ್ರಭುತ್ವದ ದೊಡ್ಡ ದಾಖಲೆಯಾಗಿದ್ದು, ನಕಲಿ ಮತ ತಡೆಗೆ ಗುರುತುಪತ್ರಕ್ಕೆ ಆಧಾರ್ ಜೋಡಣೆ ಸೂಕ್ತ ಎಂದು ಆದರ್ಶ್ ಬಿ.ಎಂ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿರುವರು.