ಕಾಸರಗೋಡು: ಲೋಕಸಭೆ ಚುನಾವಣೆ ಸಂಬಂಧ ಕರ್ತವ್ಯಕ್ಕೆ ನಿಯುಕ್ತಗೊಂಡ ಖಾಸಗಿ ವಾಹನಗಳ ಚಾಲಕರಿಗೆ ಚುನಾವಣೆ ದಿನ ಅವರ ಮತಗಟ್ಟೆಗಳಲ್ಲಿ ಮತದಾನ ನಡೆಸುವ ಅವಕಾಶಗಳಿಲ್ಲದೆ ಇರುವ ಕಾರಣ ಅವರಿಗೊಂದು ಅವಕಾಶವನ್ನು ಚುನಾವಣೆ ಆಯೋಗ ಒದಗಿಸಿದೆ. ಅಂಚೆ ಬ್ಯಾಲೆಟ್ ಅಲ್ಲದೇ ಇದ್ದರೆ ಇಲೆಕ್ಷನ್ ಡ್ಯೂಟಿ ಸರ್ಟಿಫಿಕೆಟ್ ಮುಖಾಂತರ ಮತದಾನ ನಡೆಸಬಹುದಾಗಿದೆ. ಚುನಾವಣೆ ಕರ್ತವ್ಯಕ್ಕಾಗಿ ವಹಿಸಲಾದ ವಾಹನಗಳ ಚಾಲಕರ ಹೆಸರಿನ ಪಟ್ಟಿ ಸಂಚಾರಿ ವಿಭಾಗದ ನೋಡೆಲ್ ಅ„ಕಾರಿ ಒದಗಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಚುನಾವಣೆ ಅ„ಕಾರಿ ಪ್ರಸ್ತುತ ಚಾಲಕರಿಗೆ ಪೆÇೀಸ್ಟಲ್ ಬ್ಯಾಲೆಟ್, ಇಲೆಕ್ಷನ್ ಡ್ಯೂಟಿ ಸರ್ಟಿಫಿಕೆಟ್ ನೀಡಲು ಆದೇಶ ನೀಡಲಾಗಿದೆ. ಈ ಪ್ರಕಾರ ಅಗತ್ಯವಿರುವ ಚಾಲಕರಿಗೆ ಎ.15ರ ಮುಂಚಿತವಾಗಿ ಜಿಲ್ಲಾ„ಕಾರಿ ಕಚೇರಿಯಲ್ಲಿ ಚಟುವಟಿಕೆ ನಡೆಸುತ್ತಿರುವ ಚುನಾವಣೆ ವಿಭಾಗವನ್ನು ಸಂಪರ್ಕಿಸಿ ಪ್ರಸ್ತುತ ಆದೇಶದ ಪ್ರತಿಯ ನಕಲು ಪಡೆದುಕೊಮಡು ಅರ್ಜಿ ಸಲ್ಲಿಸಬೇಕು. ಇದಕ್ಕಿರುವ ಸೌಲಭ್ಯವನ್ನೂ ಚುನಾವಣೆ ವಿಭಾಗ ಸಿದ್ಧಪಡಿಸಿದೆ.
ಪೆÇೀಸ್ಟಲ್ ಬ್ಯಾಲೆಟ್, ಚುನಾವಣೆ ಡ್ಯೂಟಿ ಸರ್ಟಿಫಿಕೆಟ್ ಇತ್ಯಾದಿಗಳಿಗೆ ಅರ್ಜಿ ಸಲ್ಲಿಸುವವರು ಅವರಿಗೆ ಮತದಾನಕ್ಕೆ ಹಕ್ಕಿರುವ ವಿಧಾನಸಭೆ ಕ್ಷೇತ್ರದ ಹೆಸರು, ಮತಗಟ್ಟೆ ನಂಬ್ರ, ಮತದಾತರ ಪಟ್ಟಿಯಲ್ಲಿ ಅವರ ಹೆಸರಿನ ಸಂಖ್ಯೆ ಸ್ಪಷ್ಟವಾಗಿ ನಮೂದಿಸಬೇಕು ಎಂದು ಅಧಿಕೃತರು ತಿಳಿಸಿದ್ದಾರೆ.