ಮುಳ್ಳೇರಿಯ : ಕಾಸರಗೋಡು ಲೋಕಸಭಾ ಕ್ಷೇತ್ರದ ಎನ್.ಡಿ.ಎ ಅಭ್ಯರ್ಥಿ ರವೀಶ ತಂತ್ರಿ ಕುಂಟಾರು ಮತಯಾಚನೆ ಸಂದರ್ಭದಲ್ಲಿ ಸಿ.ಪಿ.ಎಂ ಗೂಂಡಗಳು ಕೊಲೆಗೈಯಲು ಯತ್ನಿಸಿದ ಘಟನೆಯು ಮಂಗಳವಾರ ಮುಸ್ಸಂಜೆ ನಡೆದಿದ್ದು ಕಲ್ಯಾಶ್ಯೇರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಿಧಾನಸಭಾ ಕ್ಷೇತ್ರದ ಇರುನಾವ್ ಪೇಟೆಯಲ್ಲಿ ತಂತ್ರಿಯವರು ಮತಯಾಚಿಸುತ್ತಿರುವ ಸಂದರ್ಭದಲ್ಲಿ ಮೈಗೆ ತಾಗಿ ಗಲಭೆಗೆ ಪ್ರೇರಣೆನೀಡುವ ಸಲುವಾಗಿ ಸಿಪಿಎಂ ಗೂಂಡಗಳು ಕಾಲೆಲೆಯಲು ಪ್ರಯತ್ನಿಸಿದ್ದು, ಸಹಜವಾಗಿ ನಡೆದ ಘಟನೆಯೆಂದು ಗ್ರಹಿಸಿದ ತಂತ್ರಿಗಳು ಮತಯಾಚನೆಯನ್ನು ಮುಂದುವರಿಸಿದರು.
ಬಳಿಕ ಮತಯಾಚಿಸುತ್ತಿರುವ ಸಂದರ್ಭದಲ್ಲಿ 3 ಬೈಕ್ ನಲ್ಲಿ ಆಗಮಿಸಿದ ಸಿ.ಪಿ.ಎಂ ಗೂಂಡ ತಂಡವು ಕೊಲೆಗೈಯುವುದಾಗಿ ಬೆದರಿಕೆ ನೀಡಿದ್ದು, ಇನ್ನು ಮುಂದೆ ಈ ಕ್ಷೇತ್ರದಲ್ಲಿ ಮತಯಾಚನೆ ಉದ್ದೇಶದೊಂದಿಗೆ ಕಾಲಿರಿಸಿದ್ದಲ್ಲಿ ಆರ್.ಎಸ್.ಎಸ್ ಕಾರ್ಯಕರ್ತ ವಿನೋದ್ ರವರಿಗೆ ಆದ ಗತಿ ನಿಮಗೂ ಬರಲಿದೆ ಎಂದು ಬೆದರಿಸಿದ್ದು, ಅವ್ಯಾಚಶಬ್ದಗಳಿಂದ ನಿಂದಿಸಿದ್ದರು. ಸ್ಥಳದಲ್ಲಿ ಯಾವುದೇ ರೀತಿಯ ಗಲಭೆಗೆ ಪ್ರಚೋದನೆ ನೀಡದಂತೆ ಶಾಂತಿಯುತವಾಗಿ ವ್ಯವಹರಿಸಿದ ರವೀಶ ತಂತ್ರಿಯವರು ಪೊಲಿಸ್ ಸ್ಟೇಶನ್ ಗೆ ತೆರಳಿ ದೂರು ನೀಡಲು ತೀರ್ಮಾನಿಸಿದರು.
ತದನಂತರ ಪೋಲಿಸ್ ಠಾಣೆಯಲ್ಲಿ ದೂರ ನೀಡಲು ಹೋದ ತಂತ್ರಿಯವರು ಎಸ್.ಐ ಸ್ಥಳದಲ್ಲಿರಲಿಲ್ಲ. ಸ್ವಲ್ಪ ಹೊತ್ತು ಕಾಯಿರಿ ಎಂದ ಪೋಲಿಸರು, ಕೇಸು ದಾಖಲಿಸಲು ಹಿಂದೇಟು ಹಾಕಿದರು ಎನ್ನಲಾಗಿದೆ. ಇದೇ ಸಂದರ್ಭದಲ್ಲಿ ಸೇರಿದ ನೂರಾರು ಕಾರ್ಯಕರ್ತರು ಪೋಲಿಸ್ ಸ್ಪೇಷನ್ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹವನ್ನು ನಡೆಸಿದರು. ನಿಧಾನವಾಗಿ ಆಗಮಿಸಿದ ಎಸ್.ಐ ಮೊದಲು ಕೇಸು ದಾಖಲಿಸಲು ಹಿಂದರಿದ್ದು, ಬಳಿಕ ಎನ್.ಡಿ.ಎ ಅಭ್ಯರ್ಥಿ ಹಾಗೂ ಕಲ್ಯಾಶ್ಯೇರಿ ವಿಧಾನ ಸಭಾಕ್ಷೇತ್ರದ ಎನ್.ಡಿ.ಎ ಹಾಗೂ ಬಿಜೆಪಿ ನೇತಾರರ ಒತ್ತಾಯಕ್ಕೆ ಮಣಿದು ಕೇಸು ದಾಖಲಿಸಿದ್ದು ಆರೋಪಿಗಳನ್ನು 24ಗಂಟೆಯೊಳಗೆ 308 ಸೆಕ್ಷನ್ ಜಾಮಿನು ರಹಿತ ಕೇಸ್ ದಾಖಲಿಸಿ ಬಂಧಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ರವೀಶ ತಂತ್ರಿ ಹಾಗೂ ನೇತಾರರು, ಕಾರ್ಯಕರ್ತರು ತೆರಳಿದರು.
ಖಂಡನೆ : ಪ್ರಜಾಪ್ರಭುತ್ವದ ರೀತಿಯಲ್ಲಿ ಅಭ್ಯರ್ಥಿಯೋರ್ವರು ಮತಯಾಚಿಸುತ್ತಿರುವಾಗ ಸಿ.ಪಿ.ಎಂ ಗೂಂಡಗಳಿಂದ ಪ್ರಜಾಪ್ರಭುತ್ವಕ್ಕೆ ವಿರೋಧಿಯಾಗಿರುವ ಈ ಘಟನೆಯನ್ನು ಬಿಜೆಪಿ ಜಿಲ್ಲಾ ಸಮಿತಿಯು ಅತ್ಯುಘ್ರರೀತಿಯಲ್ಲಿ ಖಂಡಿಸಿದೆ ಎಂದು ಜಿಲ್ಲಾಧ್ಯಕ್ಷ ನ್ಯಾಯವಾದಿ .ಕೆ ಶ್ರೀಕಾಂತ್ ಹೇಳಿದರು.