ಎರಿಂಜೇರಿ : ಪ್ರತಿಷ್ಠಾ ವಾರ್ಷಿಕ ದಿನಾಚರಣೆ
0
ಏಪ್ರಿಲ್ 05, 2019
ಮುಳ್ಳೇರಿಯ: ಕೋಟೂರು ಎರಿಂಜೇರಿ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಾರಂಭದ ಪ್ರಥಮ ವಾರ್ಷಿಕ ದಿನಾಚರಣೆ ಎ.8 ಮತ್ತು 9 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಶ್ರೀ ಕ್ಷೇತ್ರ ಪರಿಸರದಲ್ಲಿ ಜರಗಿದ ಶ್ರೀ ಕ್ಷೇತ್ರದ ಆಡಳಿತ ಸಮಿತಿ ಪದಾಧಿಕಾರಿಗಳು ಹಾಗು ಊರ ಭಕ್ತ ಜನರ ಜಂಟಿ ಸಭೆಯಲ್ಲಿ ನಿರ್ಧರಿಸಲಾಯಿತು. ಸಭೆಯಲ್ಲಿ ನಿವೃತ್ತ ಸಹಾಯಕ ಜಿಲ್ಲಾಧಿಕಾರಿ ಬಿ.ಬಾಲಕೃಷ್ಣ ಅಗ್ಗಿತ್ತಾಯ ಮಧೂರು ಉದ್ಘಾಟಿಸಿದರು. ತಾರಾನಾಥ ಮಧೂರು ಅಧ್ಯಕ್ಷತೆ ವಹಿಸಿದರು. ಕೀರ್ತನ್ ರಾಜ್, ಹರೀಶ್, ಕೃಷ್ಣನ್, ಸಣ್ಣಪ್ಪು ಮಾತನಾಡಿದರು. ವಿಜಯ ಸ್ವಾಗತಿಸಿ, ಚಂದ್ರಶೇಖರ ವಂದಿಸಿದರು.
ಉತ್ಸವದ ಅಂಗವಾಗಿ ಎ.8 ರಂದು ಪೂರ್ವಾಹ್ನ 9 ಕ್ಕೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ 12 ಕ್ಕೆ ಮಹಾಪೂಜೆ, ದೇವರ ದಿವ್ಯ ನರ್ತನ, ದೈವಗಳಿಗೆ ಕಲಶ, 1 ಕ್ಕೆ ಅನ್ನದಾನ, 2 ಕ್ಕೆ ತಾಳಮದ್ದಳೆ, ಸಂಜೆ ಭಜನೆ, 9 ರಂದು ಪೂರ್ವಾಹ್ನ 9 ಕ್ಕೆ ಗಣಪತಿ ಹೋಮ, 10 ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಮಧ್ಯಾಹ್ನ ಮಹಾಪೂಜೆ, 1 ಕ್ಕೆ ಅನ್ನದಾನ, ಸಂಜೆ 6.30 ಕ್ಕೆ ದೀಪಾರಾಧನೆ, 7 ಕ್ಕೆ ಉಗ್ರಮೂರ್ತಿ ಮಂತ್ರವಾದಿ ಶ್ರೀ ಗುಳಿಗ ದೈವದ ಕೋಲ, ರಾತ್ರಿ 8.30 ಕ್ಕೆ ಅನ್ನದಾನ ನಡೆಯುವುದು.