ಇಂದು ಎನ್‍ಡಿಎ ಅಭ್ಯರ್ಥಿ ರವೀಶ ತಂತ್ರಿ ಕುಂಟಾರು ನಾಮಪತ್ರ ಸಲ್ಲಿಕೆ
0
ಏಪ್ರಿಲ್ 01, 2019
ಕಾಸರಗೋಡು: ಲೋಕಸಭಾ ಚುನಾವಣೆಯ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಎನ್.ಡಿ.ಎ.ಯ ಬಿಜೆಪಿ ಅಭ್ಯರ್ಥಿ ರವೀಶ ತಂತ್ರಿ ಕುಂಟಾರು ಅವರು ಎ.1 ರಂದು ಬೆಳಗ್ಗೆ 11 ಗಂಟೆಗೆ ನಾಮಪತ್ರ ಸಲ್ಲಿಸಲಿದ್ದಾರೆ.
ಬೆಳಿಗ್ಗೆ 10 ಗಂಟೆಗೆ ನುಳ್ಳಿಪ್ಪಾಡಿಯ ಶ್ರೀ ಅಯ್ಯಪ್ಪ ಕ್ಷೇತ್ರ ದರ್ಶನದ ಬಳಿಕ ಕಾರ್ಯಕರ್ತರ ಹಾಗು ವಾಹನಗಳ ಮೆರವಣಿಗೆಯೊಂದಿಗೆ ಸಾಗಿ ಚುನಾವಣಾ„ಕಾರಿಗಳಿಗೆ ನಾಮಪತ್ರ ಸಲ್ಲಿಸುವರು.
ಆ ಬಳಿಕ 11.30 ಕ್ಕೆ ವಿವಿಧ ಸರಕಾರಿ ಕಚೇರಿಗಳಲ್ಲಿ ಮತ ಯಾಚಿಸುವರು. ಮಧ್ಯಾಹ್ನ 12.30 ಕ್ಕೆ ಕಾಸರಗೋಡು ನಗರಸಭಾ ವ್ಯಾಪ್ತಿಯಲ್ಲಿ ಪರ್ಯಟನೆ, ಸಂಜೆ 5 ಗಂಟೆಯಿಂದ ಮಧೂರು ಗ್ರಾಮ ಪಂಚಾಯತ್‍ನಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ.