ಉಪ್ಪಳ: ಮನುಕುಲದ ಪಾಪ ವಿಮೋಚನೆಗಾಗಿ ದೇವಪುತ್ರ ಯೇಸು ಕ್ರಿಸ್ತ ಶಿಲುಬೆಗೆ ಬಲಿಯಾದ ದಿನವನ್ನು ಕ್ರೈಸ್ತರು ಗುಡ್‍ಪ್ರೈಡೇ ಅಥವಾ ಶುಭ ಶುಕ್ರವಾರವಾಗಿ ಆಚರಿಸುತ್ತಿದ್ದು, ಇದರ ಅಂಗವಾಗಿ ಶುಕ್ರವಾರ ಕಾಸರಗೋಡು ಜಿಲ್ಲೆಯ ಕ್ರೈಸ್ತ ದೇವಾಲಯಗಳಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಕಯ್ಯಾರು ಕ್ರಿಸ್ತರಾಜ ದೇವಾಲಯದಲ್ಲಿ ನಡೆದ ಶಿಲುಬೆಯ ಹಾದಿ ವಿಧಿವಿಧಾನಕ್ಕೆ ಫಾದರ್ ವಿಕ್ಟರ್ ಡಿಸೋಜ ನೇತೃತ್ವ ನೀಡಿದರು. ಯೇಸು ಕ್ರಿಸ್ತರ ಪುನರುತ್ಥಾನದ ದಿನವಾದ ಈಸ್ಟರ್ ಹಬ್ಬವನ್ನು ಆದಿತ್ಯವಾರ ಆಚರಿಸಲಾಗುವುದು.
ಶುಕ್ರವಾರ ಕ್ರೈಸ್ತರು ಉಪವಾಸ, ಧ್ಯಾನ-ಪ್ರಾರ್ಥನೆ ನಡೆಸಿದರು. ಯೇಸು ಶಿಲುಬೆಯನ್ನು ಹೆಗಲಿಗೆ ಹೇರಿಕೊಂಡು ನಡೆದ ಬಹು ಕಷ್ಟದ ಹಾದಿಯನ್ನು ಸ್ಮರಿಸಿ ಪ್ರಾರ್ಥನೆ ಸಲ್ಲಿಸಲಾಯಿತು. ದೇವಾಲಯಗಳಲ್ಲಿ ಪವಿತ್ರ ಬೈಬಲ್ ವಾಚನ, ಪ್ರವಚನ ನಡೆಯಿತು.
ಕಯ್ಯಾರು ಕ್ರಿಸ್ತರಾಜ ದೇವಾಲಯದಲ್ಲಿ ನಡೆದ ಶಿಲುಬೆಯ ಹಾದಿ ವಿಧಿವಿಧಾನಕ್ಕೆ ಫಾದರ್ ವಿಕ್ಟರ್ ಡಿಸೋಜ ನೇತೃತ್ವ ನೀಡಿದರು. ಯೇಸು ಕ್ರಿಸ್ತರ ಪುನರುತ್ಥಾನದ ದಿನವಾದ ಈಸ್ಟರ್ ಹಬ್ಬವನ್ನು ಭಾನುವಾರ ಆಚರಿಸಲಾಗುವುದು.