ಮಂಜೇಶ್ವರ: ಭಾರತೀಯ ಸಂಸ್ಕೃತಿ, ಮೌಲ್ಯಗಳ ರಕ್ಷಣೆ ಹಾಗೂ ವ್ಯಕ್ತಿ ನಿರ್ಮಾಣದ ಕೆಲಸವನ್ನು ಬಾಲ ಗೋಕುಲಗಳು ಮಾಡುತ್ತಿವೆ. ಈ ಮೂಲಕ ಮಕ್ಕಳನ್ನು ರಾಷ್ಟ್ರಭಕ್ತರನ್ನಾಗಿ ಮಾಡಲಾಗುತ್ತದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಸೇವಾಪ್ರಮುಖ್ ವೆಂಕಟರಮಣ ಹೊಳ್ಳ ಹೇಳಿದರು.
ಅವರು ಬಾಯಾರು ಆವಳ ಮಠ ಶ್ರೀದುರ್ಗಾಸದನ ಸಭಾಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಮಂಜೇಶ್ವರ ತಾಲೂಕಿನ ಬಾಲಗೋಕುಲಗಳ ಗೋಕುಲೋತ್ಸವದ ಸಮಾರೋಪ ಸಭೆಯಲ್ಲಿ ಮಾತನಾಡಿದರು.
ಇಂದಿನ ಶಿಕ್ಷಣದಲ್ಲಿ ಭಾರತೀಯ ಸಂಸ್ಕೃತಿಯ ಕುರಿತಾಗಿ ತಿಳಿಸುವ ಕೆಲಸ ಆಗುತ್ತಿಲ್ಲ. ಇಂದಿಗೂ ಬ್ರಿಟಿಷರು ಅಳವಡಿಸಿದ ಮೆಕಾಲೆ ಶಿಕ್ಷಣ ಪದ್ಧತಿ ಅನುಕರಣೆಯಲ್ಲಿದೆ. ಅದರಲ್ಲಿ ಭಾರತದ ನಿಜವಾದ ಭವ್ಯ ಇತಿಹಾಸವನ್ನು ತಿಳಿಸುವ ಕೆಲಸ ಆಗುತ್ತಿಲ್ಲ. ಭಾರತದ ಇತಿಹಾಸವು ಗೆಲುವಿನ ಇತಿಹಾಸ ಹೊಂದಿದ್ದು ಹಿಂದಿನಿಂದಲೇ ಆಯರ್ವೇದ, ವಿಜ್ಞಾನ, ಯೋಗ ಗಣಿತ ಹೀಗೆ ಹಲವು ಕ್ಷೇತ್ರಗಳಲ್ಲಿ ಸಾಕಷ್ಟು ಸಾಧನೆ ಮಾಡಿದ ಶ್ರೇಷ್ಠ ಇತಿಹಾಸ ಹೊಂದಿದೆ. ನಮ್ಮ ಗತಕಾಲದ ನೈಜ ಹಾಗೂ ಭವ್ಯ ಇತಿಹಾಸವನ್ನು ನಮ್ಮ ಮಕ್ಕಳಿಗೆ ತಿಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಆ ಕೆಲಸವು ಬಾಲಗೋಕುಲಗಳ ಮೂಲಕ ಆಗಬೇಕಿದ್ದು ತನ್ಮೂಲಕ ನಮ್ಮ ಮಕ್ಕಳನ್ನು ರಾಷ್ಟ್ರಭಕ್ತರನ್ನಾಗಿ ಮಾಡೋಣ ಎಂದು ಅವರು ಹೇಳಿದರು.
ಗೋಕುಲೋತ್ಸವದ ಆರಂಭದಲ್ಲಿ ಬಾಲಗೋಕುಲದ ಮಕ್ಕಳ ಆಕರ್ಷಕ ಶೋಭಾಯಾತ್ರೆ ಸರ್ಕುತ್ತಿಯಿಂದ ಆವಳ ಮಠದವರೆಗೆ ನಡೆಯಿತು. ಬಳಿಕ ನಡೆದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಸಂತ ಪಂಡಿತ್ ಗುಂಪೆ ಹಾಗೂ ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಪ್ರಜ್ವಲನದೊಂದಿಗೆ ಗಣಪತಿ ಭಟ್ ಆವಳ ಮಠ ಇವರು ನಡೆಸಿದರು.ರಾ.ಸ್ವಂಸೇ.ಸಂಘದ ಜಿಲ್ಲಾ ಸೇವಾ ಪ್ರಮುಖ್ ವಿಶ್ವನಾಥ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳಿಕ ವಿವಿಧ ಬಾಲಗೋಕುಲದ ಮಕ್ಕಳದ ಸಾಮೂಹಿಕ, ಬೌದ್ಧಿಕ, ಶಾರೀರಿಕ ಕಾರ್ಯಕ್ರಮಗಳು ನಡೆದವು. ಭೋಜನದ ನಂತರ ಬಾಲಗೋಕುಲ ಮಕ್ಕಳಿಂದ ಪ್ರತಿಭಾ ಪ್ರದರ್ಶನ ನಡೆಯಿತು.
ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪೈವಳಿಕೆ ಗ್ರಾಮ ಪಂಚಾಯತಿ ಸದಸ್ಯ ಸುಬ್ರಮಣ್ಯ ಭಟ್ ಅವರು ವಹಿಸಿದ್ದರು. ಅತಿಥಿಗಳಾಗಿ ಎನ್ ಟಿ ಯು ರಾಜ್ಯ ಸಮಿತಿಯ ಕಾರ್ಯದರ್ಶಿ ವೆಂಕಪ್ಪ ಶೆಟ್ಟಿ ಪಿ ಹಾಗೂ ಕೃಷ್ಣ ಗುರುಸ್ವಾಮಿ ಕುರುಡಪದವು ಉಪಸ್ಥಿತರಿದ್ದರು. ಮಂಜೇಶ್ವರ ತಾಲೂಕಿನ ಪೈವಳಿಕೆ, ಮೀಂಜ, ವರ್ಕಾಡಿ ಹಾಗೂ ಮಂಜೇಶ್ವರ ಪಂಚಾಯತಿಗೆ ಒಳಪಟ್ಟ ಬಾಲಗೋಕುಲಗಳ ಸುಮಾರು 230 ಮಂದಿ ಮಕ್ಕಳು ಈ ಗೋಕುಲೋತ್ಸವದಲ್ಲಿ ಭಾಗವಹಿಸಿದ್ದರು.