ಅಮೇಥಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ನಾಮಪತ್ರದ ಜತೆಗೆ ಸಲ್ಲಿಕೆಯಾಗಿದ್ದ ದಾಖಲೆಗಳಲ್ಲಿ ಕೆಲ ತಪ್ಪು ಮಾಹಿತಿ ಇರುವ ದೂರು ಬಂದಿದ್ದ ಹಿನ್ನೆಲೆಯಲ್ಲಿ ನಾಮಪತ್ರ ಪರಿಶೀಲನೆಯನ್ನು ಏಪ್ರಿಲ್ 22ಕ್ಕೆ ಮುಂದೂಡಬೇಕೆಂದು ಅಮೇಥಿ ಚುನಾವಣಾ ಅಧಿಕಾರಿ ರಾಮ್ ಮನೋಹರ್ ಮಿಶ್ರಾ ಆದೇಶಿಸಿದ್ದಾರೆ.
ಸ್ವತಂತ್ರ ಅಭ್ಯರ್ಥಿ ಧ್ರುವ್ ಲಾಲ್ ರಾಹುಲ್ ಅವರ ದಾಖಲೆಗಳಲ್ಲಿ ಗೊಂದಲಗಳಿದೆ ಎಂದು ದೂರು ಸಲ್ಲಿಸಿದ್ದರು.ಈ ಕುರಿತಂತೆ ನಾವು ಪ್ರಮುಖವಾಗಿ ಮೂರು ಪ್ರಶ್ನೆಗಳನ್ನಿಟ್ಟಿದ್ದೇವೆ ಎಂದು ಲಾಲ್ ಪರ ವಕೀಲರು ಹೇಳಿದ್ದಾರೆ.
ಮೊದಲನಯದಾಗಿ ರಾಹುಲ್ ಗಾಂಧಿ ಯುಕೆ ಪ್ರಜೆಯಾಗಿದ್ದಾರೆ. ಅವರು ಯುಕೆನಲ್ಲಿ ಒಂದು ಕಂಪನಿಯನ್ನು ನೊಂದಾಯಿಸಿದ್ದು ಆ ಕಂಪನಿ ನೊಂದಾವಣೆ ಪ್ರಮಾಣಪತ್ರದಲ್ಲಿ ಇದನ್ನು ಉಲ್ಲೇಖಿಸಲಾಗಿದ್ದೆ. ಆದರೆ ಭಾರತೀಯ ಪ್ರಜಾಪ್ರತಿನಿಧಿ ಕಾಯ್ದೆ ಅನುಸಾರ ಯಾವುದೇ ವಿದೇಶಿಗರು ವಿದೇಶೀ ಪ್ರಹ್ಜೆ ಭಾರತೀಯ ಚುನಾವಣೆಯಲ್ಲಿ ಸ್ಪರ್ಧಿಸಬಾರದು.
ಅವರು ಯಾವ ಆಧಾರದ ಮೇಲೆ ಬ್ರಿಟಿಷ್ ನಾಗರಿಕರಾಗಿದ್ದಾರೆ? ಮತ್ತು ಈಗ ಅವರು ಭಾರತೀಯ ಪೌರತ್ವವನ್ನು ಹೇಗೆ ಪಡೆದರು? ಈ ವಿಷಯದ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರೆ, ನಾವು ರಾಹುಲ್ ಗಾಂಧಿಯವರ ನಾಮಪತ್ರಗಳನ್ನು ಸ್ವೀಕರಿಸದಂತೆ ನಾವು ಚುನವನಾಧಿಕಾರಿಗಳಿಗೆ ಮನವಿ ಮಾಡಿದ್ದೇವೆ ಎಂದು ಲಾಲ್ ಪರ ವಕೀಲರಾದ ರವಿ ಪ್ರಕಾಶ್ ಹೇಳಿದ್ದಾರೆ.
2003 ರಿಂದ 2009 ರ ನಡುವೆ ಯುಕೆ ಕಂಪನಿಯ ಆಸ್ತಿ ಮತ್ತು ಸ್ವತ್ತುಗಳ ಕುರಿತು ರಾಹುಲ್ ಅವರ ಚುನಾವಣಾ ಅಫಿಡವಿಟ್ ನಲ್ಲಿ ಯಾವುದೇ ವಿವರಗಳಿಲ್ಲ ಎಂದು ವಕೀಲರು ಆರೋಪಿಸಿದ್ದಾರೆ.
ರಾಹುಲ್ ಅವರ ಶೈಕ್ಷಣಿಕ ಅರ್ಹತೆಗಳಲ್ಲಿ ಬಹಳಷ್ಟು ಸಮಸ್ಯೆಗಳಿವೆ ಎಂದು ಆರೋಪಿಸಿರುವ ರವಿ ಪ್ರಕಾಶ್ ಅವರ ವಿದ್ಯಾರ್ಹತೆಗಳು ದಾಖಲೆಗಳಲ್ಲಿನ ವಿವರಗಳಿಗೆ ಹೊಂದಾಣಿಕೆ ಆಗುತ್ತಿಲ್ಲ.ಅವರು ತಮ್ಮ ಕಾಲೇಜಿನಲ್ಲಿ 'ರೌಲ್ ವಿನ್ಸಿ ಎಂದು ಹೆಸರು ಬರೆದಿದ್ದು ರಾಹುಲ್ ಗಾಂಧಿ ಎಂಬ ಹೆಸರಿನಲ್ಲಿ ಯಾವುದೇ ಪ್ರಮಾಣಪತ್ರಗಳಿಲ್ಲ.
ಹಾಗಾದರೆ, ರಾಹುಲ್ ಗಾಂಧಿ ಮತ್ತು ರೌಲ್ ವಿನ್ಸಿ ಒಬ್ಬರೆಯೆ ಎಂದು ನಾವು ಪ್ರಶ್ನಿಸಬೇಕಿದೆ.ಹಾಗಲ್ಲದಿದ್ದಲ್ಲಿ ರಾಹುಲ್ ತಮ್ಮ ಮೂಲ ವಿದ್ಯಾರ್ಹತೆಯ ಅಂಕಪಟ್ಟಿಯನ್ನು ನೀಡಬೇಕು. ಆಗ ಅವುಗಳ ಪರಿಶೀಲನೆ ನಡೆಯಬೇಕು ಎಂದು ತಿಳಿಸಲಾಗಿದೆ.
ಗಾಂಧಿ ಕುಟುಂಬದ ಸಾಂಪ್ರದಾಯಿಕ ಭದ್ರಕೋಟೆಯಾದ ಅಮೇಥಿಯಲ್ಲಿ ಮೇ6 ರಂದು ಚುನಾವಣೆ ನಡೆಯಲಿದೆ. ಮೇ 23 ರಂದು ಮತಗಳ ಎಣಿಕೆ ನಡೆಯಲಿದೆ.