ಚುನಾವಣೆ : ನಿರೀಕ್ಷಕ ಜಿಲ್ಲೆಗೆ
0
ಏಪ್ರಿಲ್ 04, 2019
ಕಾಸರಗೋಡು: ಲೋಕಸಭಾ ಚುನಾವಣೆಯ ಕಾಸರಗೋಡು ಲೋಕಸಭಾ ಕ್ಷೇತ್ರ ಮಟ್ಟದ ಚಟುವಟಿಕೆ ಅವಲೋಕ ನಡೆಸುವ ನಿಟ್ಟಿನಲ್ಲಿ ಚುನಾವಣೆ ಆಯೋಗ ನೇಮಕಗೊಳಿಸಿರುವ ನಿರೀಕ್ಷಕ ಎಸ್.ಗಣೇಶ್ ಅವರು ಬುಧವಾರ ಜಿಲ್ಲೆಗೆ ಆಗಮಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಅವರನ್ನು ಜಿಲ್ಲಾ ಚುನಾವಣೆ ಅಧಿಕಾರಿಯಾಗಿರುವ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೇಮ್ಸ್ ಜೋಸೆಫ್ ಬರಮಾಡಿಕೊಂಡರು. ನಂತರ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿದ ಅವರು ಚುಆವಣೆ ಸಂಬಂಧ ಚಟುವಟಿಕೆಗಳ ಕುರಿತು ಮಾತುಕತೆ ನಡೆಸಿದರು.
ಎಂ.ಸಿ.ಎಂ.ಸಿ. ಕಚೇರಿಗೆ ನಿರೀಕ್ಷಕ ಭೇಟಿ:
ಕಾಸರಗೋಡು ಲೋಕಸಭೆ ನಿರೀಕ್ಷಕರಾಗಿ ನೇಮಕಗೊಂಡಿರುವ ಎಸ್.ಗಣೇಶ್ ಬುಧವಾರ ಜಿಲಾ ಮಾಹಿತಿ ಕೇಂರದಲ್ಲಿ ಚಟುವಟಿಕೆ ನಡೆಸುತ್ತಿರುವ ಎಂ.ಸಿ.ಎಂ.ಸಿ. ಕಚೇರಿಗೆ ಭೇಟಿ ನೀಡಿ, ಚಟುವಟಿಕೆಗಳ ಅವಲೋಕನ ನಡೆಸಿದರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೇಮ್ಸ್ ಜೋಸೆಫ್ ಜತೆಗಿದ್ದರು. ಚುನಾವಣೆ ನಿಯಂತ್ರಣ ಕೊಠಡಿಗೂ ಅವರು ಭೇಟಿ ನೀಡಿದರು.