ಉಪ್ಪಳ: ಉಪ್ಪಳ ಕ್ಯಾನ್ಸರ್ ಕೇರ್ ಫೌಂಡೇಶನ್, ತಲಶ್ಶೇರಿ ಮಲಬಾರ್ ಕ್ಯಾನ್ಸರ್ ಸೆಂಟರ್‍ನ ಸಂಯುಕ್ತಾಶ್ರಯದಲ್ಲಿ ಕ್ಯಾನ್ಸರ್ ಬಗ್ಗೆ ಜನಜಾಗೃತಿ ಕಾರ್ಯಕ್ರಮ ಹಾಗು ಕ್ಯಾನ್ಸರ್ ಬಾಧಿಸಿದ ಅಂಗಗಳ ಪ್ರದರ್ಶನ ಏ.29 ಮತ್ತು 30 ರಂದು ಬೆಳಿಗ್ಗೆ 9.30 ರಿಂದ ಸಂಜೆ 6 ಗಂಟೆಯ ವರೆಗೆ ಉಪ್ಪಳ ಬಸ್ ನಿಲ್ದಾಣ ಬಳಿ ನಡೆಯಲಿದೆ.
ಇಂದು ಸಂಜೆ ಸಂಜೆ 7 ಕ್ಕೆ ಕ್ಯಾನ್ಸರ್ ರೋಗದ ಬಗ್ಗೆ ಮಾಹಿತಿ, ವೀಡಿಯೋ ಪ್ರದರ್ಶನ ಹಾಗು ತಲಶ್ಶೇರಿ ಮಲಬಾರ್ ಕ್ಯಾನ್ಸರ್ ಸೆಂಟರ್‍ನ ನುರಿತ ವೈದ್ಯರ ನೇತೃತ್ವದಲ್ಲಿ ಪ್ರದರ್ಶನ ನಡೆಯಲಿರುವುದು.