ಕಾಸರಗೋಡು: ಇಂದು ನಡೆಯಲಿರುವ ಲೊಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ವಿಶೇಷಚೇತನ ಮತದಾತರು ಮತದಾನ ನಡೆಸುವ ನಿಟ್ಟಿನಲ್ಲಿ ಮತಗಟ್ಟೆಗೆ ತೆರಳಲು ಜಿಲ್ಲೆಯಲ್ಲಿ 25 ಅಂಬುಲೆನ್ಸ್ ಸೌಲಭ್ಯ ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು. ವಿಧಾನಸಭೆ ಕ್ಷೇತ್ರಗಳ ಮಟ್ಟದಲ್ಲಿ ಆಂಬುಲೆನ್ಸ್ ಸೌಲಭ್ಯ ಸಿದ್ಧಪಡಿಸಲಾಗಿದೆ. ಮಂಜೇಶ್ವರ, ಉದುಮಾ ವಿಧಾನಸಭೆ ಕ್ಷೇತ್ರಗಳಲ್ಲಿ ತಲಾ 6, ಕಾಸರಗೋಡು ಕ್ಷೇತ್ರದಲ್ಲಿ 5, ಕಾಞÂಂಗಾಡ್, ತ್ರಿಕರಿಪುರ ಕ್ಷೇತ್ರಗಳಲ್ಲಿ ತಲಾ 4 ಆಂಬುಲೆನ್ಸ್ ಗೆ ಅನುಮತಿ ನೀಡಲಾಗಿದೆ.
ವಿಶೇಷಚೇತನರಿಗೆ ಸಹಾಯ ಒದಗಿಸಲು ಸೆಕ್ಟರ್ ಸಂಚಾಲಕರ ನೇಮಕ:
ಜಿಲ್ಲೆಯ ಎಲ್ಲ ವಿಶೇಷ ಚೇತನ ಮತದಾತರ ಮತಚಲಾವಣೆಗೆ ಸೌಲಭ್ಯ ಏರ್ಪಡಿಸುವ ನಿಟ್ಟಿನಲ್ಲಿ 84 ಸೆಕ್ಟರ್ ಸಂಚಾಲಕರನ್ನು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ನೇಮಿಸಿದ್ದಾರೆ. ಮತದಾನ ನಡೆಸುವ ನಿಟ್ಟಿನಲ್ಲಿ ವಿಶೇಷ ಚೇತನರನ್ನು ಮತಗಟ್ಟೆಗಳಿಗೆ ತಲಪಿಸುವ ನಿಟ್ಟಿನಲ್ಲಿ ವಿಶೇಷ ಚೇತನರ ನೋಡೆಲ್ ಅಧಿಕಾರಿ ನಡೆಸುವ ಚಟುವಟಿಕೆಗಳಲ್ಲಿ ಇವರು ಸಹಾಯಕರಾಗಿರುವರು. ಮಂಜೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ 19, ಕಾಸರಗೋಡಿನಲ್ಲಿ 15, ಉದುಮಾದಲ್ಲಿ 18, ಕಾಞÂಂಗಾಡು ಮತ್ತು ತ್ರಿಕರಿಪುರದಲ್ಲಿ ತಲಾ 16 ಮಂದಿ ಸೆಕ್ಟರ್ ಸಂಚಾಲಕರನ್ನು ನೇಮಿಸಲಾಗಿದೆ.
ಇವರಲ್ಲದೆ ವಿಶೇಷಚೇತನರನ್ನು ಮತಗಟ್ಟೆಗಳಿಗೆ ತಲಪಿಸುವ ಚಟುವಟಿಕೆಗಳನ್ನು ಏಕೀಕರಣಗೊಳಿಸುವ ನಿಟ್ಟಿನಲ್ಲಿ ವಿಧಾನಸಭೆ ಕ್ಷೇತ್ರ ಮಟ್ಟದಲ್ಲಿ 12 ಮಂದಿ ಸಂಚಾಕರನ್ನು ಜಿಲ್ಲಾಧಿಕಾರಿ ನೇಮಿಸಿದ್ದಾರೆ.