ಪಚ್ಲಂಪಾರೆಯ ಅಷ್ಟಬಂಧ ಬ್ರಹ್ಮಕಲಶೋತ್ಸವ ಆಮಂತ್ರಣ ಬಿಡುಗಡೆ
0
ಏಪ್ರಿಲ್ 01, 2019
ಉಪ್ಪಳ: ಉಪ್ಪಳ ಪಚ್ಲಂಪಾರೆಯ ಶ್ರೀ ಉಮಾಭಗವತೀ ಭಜನಾ ಮಂದಿರದ ಪುನ:ಪ್ರತಿಷ್ಠೆ ಮತ್ತು ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ 48 ಗಂಟೆಗಳ ಅಖಂಡ ಭಜನೋತ್ಸವದ ಆಮಂತ್ರಣ ಪತ್ರಿಕೆಯನ್ನು ಇತ್ತೀಚೆಗೆ ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಬಿಡುಗಡೆಗೊಳಿಸಿ ಕಾರ್ಯಕ್ರಮದ ಸಂಪೂರ್ಣ ಯಶಸ್ಸಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಭಾಸ್ಕರನ್ ಕೆ, ಅಧ್ಯಕ್ಷ ಬಾಬು ಪಚ್ಲಂಪಾರೆ, ಪ್ರಧಾನ ಕಾರ್ಯದರ್ಶಿ ಮುರುಗೇಶ್ ಎನ್., ಕಾರ್ಯದರ್ಶಿ ವಿಜಯಕುಮಾರ್, ಜೊತೆಕಾರ್ಯದರ್ಶಿಗಳಾದ ಪ್ರದೀಶ್ ಎಸ್ ಮತ್ತು ಶಿವಕುಮಾರ್, ಹೊರೆಕಾಣಿಕೆ ಸಮಿತಿ ಸಂಚಾಲಕ ಸುರೇಶ್ ಶೆಟ್ಟಿ ಪರಂಕಿಲ ಹಾಗೂ ವಿವಿಧ ಉಪಸಮಿತಿಗಳ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.
ಭಕ್ತಾದಿಗಳು ಪುಣ್ಯಕಾರ್ಯಕ್ಕೆ ಸರ್ವರೀತಿಯಿಂದ ಸಹಕರಿಸಿ ಕಾರ್ಯಕ್ರಮದ ಯಶಸ್ಸಿನಲ್ಲಿ ಭಾಗಿಗಳಾಗಬೇಕೆಂದು ಪಚ್ಲಂಪಾರೆಯ ಬ್ರಹ್ಮಕಲಶೋತ್ಸವ ಸಮಿತಿ ವಿನಂತಿಸಿದೆ.