ಕಣ್ಣೂರು: ಮಂಗಳವಾರ ನಡೆದ ಲೋಕಸಭಾ ಚುನಾವಣೆಯಲ್ಲಿ ಮತಗಟ್ಟೆಯೊಂದರಲ್ಲಿ ವಿವಿ ಪ್ಯಾಟ್ ಯಂತ್ರದಲ್ಲಿ ಹಾವು ಕಂಡುಬಂದು ಹೌಹಾರಿದ ಘಟನೆ ನಡೆದಿದೆ.
ಕಣ್ಣೂರು ಜಿಲ್ಲೆಯ ಮಯ್ಯಿಲ್ ಕಂಡಕೈ ಮತಗಟ್ಟೆಯ ವಿವಿ ಪ್ಯಾಟ್ ಯಂತ್ರದಲ್ಲಿ ಹಾವೊಂದು ಕಂಡುಬಂದು ಗಾಬರಿಗೆ ಕಾರಣವಾಯಿತು.
ಮಂಗಳವಾರ ಬೆಳಿಗ್ಗೆ ಮತದಾನ ಆರಂಭಗೊಳ್ಳುವುದಕ್ಕೆ ಕ್ಷಣಗಣನೆ ಇರುವಂತೆ ಯಂತ್ರದ ಕೊನೇಯ ಪರಿಶೀಲನೆ ನಡೆಸುತ್ತಿರುವಂತೆ ಬುಸುಗುಟ್ಟುವ ಹಾವು ಎದುರಾಯಿತು. ಬಳಿಕ ಹಾವನ್ನು ಹೊರತೆಗೆದು ಪರಿಶೀಲನೆ ನಡೆಸಲಾಯಿತು. ಯಂತ್ರದೊಳಗೆ ಹಾವು ಕಂಡುಬಂದಿರುವುದು ಸ್ವಲ್ಪ ಆತಂಕಕ್ಕೆ ಕಾರಣವಾಯಿತು.