ಉಪ್ಪಳ: ಪಚ್ಲಂಪಾರೆ ಶ್ರೀ ಉಮಾ ಭಗವತೀ ಭಜನಾ ಮಂದಿರದಲ್ಲಿ ಪುನ:ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ, ಬಡಾಜೆ ಶ್ರೀ ಗೋಪಾಲಕೃಷ್ಣ ತಂತ್ರಿಯವರ ದಿವ್ಯಹಸ್ತದಿಂದ ವಿವಿಧ ವೈಧಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆದು ಶುಕ್ರವಾರ ಸಮಾಪ್ತಿಗೊಂಡಿತು.
ಶನಿವಾರ ಸೋರ್ಯೋದಯದಿಂದ ಆರಂಭಗೊಂಡ 48 ಗಂಟೆಗಳ ಅಖಂಡ ಭಜನೆಯನ್ನು ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ವಿವಿಧ ತಂಡಗಳಿಂದ ಭಜನಾ ಸಂಕೀರ್ತನೆ ನಡೆಯಿತು. ಸೋಮವಾರ ಸೂರ್ಯೋದಯಕ್ಕೆ ಸಮಾಪ್ತಿಗೊಂಡಿತು. ಮಧ್ಯಾಹ್ನ 1ಕ್ಕೆ ಅನ್ನಸಂತರ್ಪಣೆ, ರಾತ್ರಿ 7ಕ್ಕೆ ಆನಂದ ಭಜನೆ, 8ಕ್ಕೆ ಶ್ರೀ ದೈವ ಗುಳಿಗನ ನೇಮೋತ್ಸವ, 9ಕ್ಕೆ ಪ್ರಸಾದ ವಿತರಣೆ ನಡೆಯಿತು.