ಚುನಾವಣೆ: ಪೊಲೀಸ್ ನಿರೀಕ್ಷಕ ಜಿಲ್ಲೆಗೆ
0
ಏಪ್ರಿಲ್ 04, 2019
ಕಾಸರಗೋಡು: ಲೋಕಸಭೆ ಚುನಾವಣೆ ಸಂಬಂಧ ಕಾಸರಗೋಡು, ಕಣ್ಣೂರು ಜಿಲ್ಲೆಗಳ ಪೊಲೀಸ್ ವಲಯದ ಹೊಣೆ ಹೊತ್ತಿರುವ ಚುನಾವಣೆ ನಿರೀಕ್ಷಕ ಓಂಪ್ರಕಾಶ್ ತ್ರಿಪಾಠಿ ಗುರುವಾರ ಜಿಲ್ಲೆಗೆ ಆಗಿಸಿ ಕರ್ತವ್ಯ ವಹಿಸಿಕೊಂಡಿದ್ದಾರೆ.
ಮುಖ್ಯ ನಿರೀಕ್ಷಕರಾಗಿ ಗಣೇಶ್ ಅವರ ಸಮಕ್ಷದಲ್ಲಿ ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೇಮ್ಸ್ ಜೋಸೆಫ್ ಮೊದಲಾದವರು ಅವರನ್ನು ಸ್ವಾಗತಿಸಿದರು. ಮಧ್ಯಪ್ರದೇಶದ ಕೇಡರ್ ನಲ್ಲಿ ಐ.ಪಿ.ಎಸ್. ಅಧಿಕಾರಿಯಾಗಿರುವ ಓಂಪ್ರಕಾಶ್ ತ್ರಿಪಾಠಿ ಅವರು ಐ.ಜಿ.ಆಗಿದ್ದಾರೆ.
ಜಿಲ್ಲಾಧಿಕಾರಿ ಅವರ ಕೊಠಡಿಯಲ್ಲಿ ಗುರುವಾರ ನಡೆದ ಚುನಾವಣೆ ಸಂಬಂಧ ಅವಲೋಕನ ಸಭೆಯಲ್ಲಿ ಸುರಕ್ಷೆ ಕುರಿತು ಅವರು ಸಂಬಂಧಪಟ್ಟವರೊಂದಿಗೆ ಮಾತುಕತೆ ನಡೆಸಿದರು. ಸಭೆಯಲ್ಲಿ ಜಿಲ್ಲಾ ಸಹಾಯಕ ಪೊಲೀಸ್ವರಿಷ್ಠಾಧಿಕಾರಿ ಶಿಲ್ಪಾ, ಜಿಲ್ಲೆಯ ಇತರ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.
ಬಳಿಕ ರಾಂಡಮೈಸೇಷನ್ ಪೂರ್ಣಗೊಳಿಸಲಾದ ವಿದ್ಯುನ್ಮಾನ ಮತಯಂತ್ರಗಳನ್ನು ಇರಿಸಲಾದ ವಿತರನೆ ಕೇಂದ್ರಗಳಾದ ಪಡನ್ನಕ್ಕಾಡ್ ನೆಹರೂ ಕಾಲೇಜ್, ಕಾಸರಗೋಡು ಸರಕಾರಿ ಕಾಲೇಜುಗಳಿಗೆ ಭೇಟಿ ನಿಡಿದ ಅವರು ಸ್ಟ್ರೋಂಗ್ ರೋಂಗಳ ಪರಿಶೀಲನೆ ನಡೆಸಿದರು.