ಕಾಸರಗೋಡು: ಲೋಕಸಭೆ ಚುನಾವಣೆಯಲ್ಲಿ ಕಾಸರಗೋಡು ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಖರ್ಚು-ವೆಚ್ಚದ ಗಣನೆಗಳನ್ನು ಸಲ್ಲಿಸಲಾಗಿದೆ.
ಏ.11 ವರೆಗಿನ ಪ್ರಚಾರ ವೆಚ್ಚದ ದಾಖಲೆಗಳನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಜಿಲ್ಲಾಧಿಕಾರಿ ಕಚೇರಿಯಲ್ಲಿ ಚಟುವಟಿಕೆ ನಡೆಸುತ್ತಿರುವ ಜಿಲ್ಲಾ ಖರ್ಚುವೆಚ್ಚ ಮೋನಿಟರಿಂಗ್ ಸಮಿತಿಗೆ ಸಲ್ಲಿಸಿದ್ದಾರೆ. ನೂತನ ಲೆಕ್ಕಗಳನ್ನು ಏ.17, 21ರಂದು ಸಮಿತಿಗೆ ಸಲಲಿಸಬೇಕು. ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ನೇತೃತ್ವದಲ್ಲಿ ಮೋನಿಟರಿಂಗ್ ಸಮಿತಿ ಚಟುವಟಿಕೆ ನಡೆಸುತ್ತಿದೆ. ಸಲ್ಲಿಸಿದ ವೆಚ್ಚದ ಗಣನೆಗಳಲ್ಲಿ ಯಾವುದೇ ವ್ಯತ್ಯಾಸಗಳು ಕಂಡುಬಂದಲ್ಲಿ 24 ತಾಸುಗಳ ಅವಧಿಯಲ್ಲಿ ಸಂಬಂಧಪಟ್ಟ ರಾಜಕೀಯ ಪಕ್ಷಗಳಿಗೆ ನೋಟೀಸು ನೀಡಲಾಗುವುದು. ಇದಕ್ಕೆ 48 ತಸುಗ ಅವಧಿಯಲ್ಲಿ ರಾಜಕೀಯ ಪಕ್ಷಗಳು ಉತ್ತರ ನೀಡಬೇಕು. ಉತ್ತರ ತೃಪ್ತಿಕರವಲ್ಲದೇ ಇದ್ದಲ್ಲಿ ಜನಪ್ರಾತಿನಿಧ್ಯ ಕಾಯಿದೆ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದು. ರಾಜಕೀಯ ಪಕ್ಷಗಳು ಸಲ್ಲಿಸುವ ದಾಖಲೆಗಳು, ಸ್ಪಷ್ಟೀಕರಣಕ್ಕಾಗಿ ನೀಡುವ ನೋಟಿಸು, ಉತ್ತರ ಚುನಾವಣೆ ಅಧಿಕಾರಿಗಖ ಕಚೇರಿಗಳ ಬೋರ್ಡ್ ನಲ್ಲಿ ಮತ್ತು ಚುನಾವಣೆ ಆಯೋಗದ ವೆಬ್ ಸೈಟ್ ನ ಜಿಲ್ಲಾ ಚುನಾವಣೆ ಅಧಿಕಾರಿಯ ಲಿಂಕ್ ನಲ್ಲಿ ಲಭಿಸಲಿದೆ.