ಕುಂಬಳೆ: ಮಾನವೀಯತೆ ಮತ್ತು ಸಂಘಟನಾ ಚತುರತೆಗಳು ಜೀವನದಲ್ಲಿ ಮನುಷ್ಯನನ್ನು ಎತ್ತರಕ್ಕೇರಿಸುತ್ತದೆ. ಪ್ರತಿಯೊಂದು ಚರಾಚರ ವಸ್ತುಗಳಲ್ಲೂ ದೈವತ್ವವನ್ನು ಕಂಡು ಬೆಳೆದುಬಂದಿರುವ ಸನಾತನ ಸಂಸ್ಕøತಿಯ ಆಚಾರ-ವಿಚಾರ, ನಂಬಿಕೆಗಳ ನೆಲೆಯನ್ನು ಭದ್ರಗೊಳಿಸುವ ಮೂಲಕ ಬದುಕನ್ನು ಸೌಖ್ಯದಿಂದ ಸಾರ್ಥಕಗೊಳಿಸುವ ಧೀಶಕ್ತಿ ಪ್ರತಿಯೊಬ್ಬರಲ್ಲೂ ನೆಲೆಗೊಳ್ಳಬೇಕು ಎಂದು ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ.ಸದಾನಂದ ಪೆರ್ಲ ಅವರು ತಿಳಿಸಿದರು.
ಕುoಬಳೆ ಆರಿಕ್ಕಾಡಿಯ ಶ್ರೀಮಲ್ಲಿಕಾರ್ಜುನ ಮತ್ತು ಕೋಟೆ ಶ್ರೀವೀರಾಂಜನೇಯ ದೇವಾಲಯದಲ್ಲಿ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಶನಿವಾರ ಸಂಜೆ ನಡೆದ ಧಾರ್ಮಿಕ ವಿದ್ವತ್ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಮಂಗಳೂರಿನ ಶಾರದಾ ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷ, ವಿಹಿಂಪ ಪ್ರಾಂತ್ಯಾಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್ ಅವರು ಮಾತನಾಡಿ, ಮನುಷ್ಯ ಜೀವನದಲ್ಲಿ ಮನುಷ್ಯತ್ವ ಮತ್ತು ಜೀವನ ಕಲೆ ಎನ್ನುವುದು ಅತಿ ಮುಖ್ಯವಾದ ಅಂಶಗಳಾಗಿವೆ. ಸನಾತನ ಹಿಂದೂ ಪರಂಪರೆ ಈ ಮೂಲ ಸೂತ್ರದಡಿ ನೆಲೆಗೊಂಡಿದೆ. ಶ್ರದ್ದೆ, ನಂಬಿಕೆಗಳಿಂದ ಮಾಡಿದ ಕರ್ಮಗಳು ಯಶಸಸ್ವಿಯಾಗುತ್ತದೆ ಎಂದು ತಿಳಿಸಿದರು. ಬದುಕಿನಲ್ಲಿ ಸತ್ಕರ್ಮಗಳ ಸಿದ್ದಿಯಾದಾಗ ದೈವ ದರ್ಶನ ಸಾಧ್ಯವಾಗುತ್ತದೆ ಎಂದು ತಿಳಿಸಿದ ಅವರು, ಸಂಸ್ಕಾರಯುತ ಸಂತಾನದ ಕೊಡುಗೆಯಿಂದ ಬದುಕು ಪಾವನಗೊಳ್ಳುತ್ತದೆ. ಅಂತಹ ಸಮಸ್ಕಾರ ಸಮಸ್ಕøತಿಗಳು ದೇವಾಲಯಗಳ ಮೂಲಕ ಪಸರಿಸಲ್ಪಡುತ್ತದೆ ಎಂದು ತಿಳಿಸಿದರು.
ಮಂಗಳೂರು ಒಮೇಗಾ ಆಸ್ಪತ್ರೆಯ ಅಧ್ಯಕ್ಷ ಡಾ.ಕೆ.ಮುಕುಂದ ಕುಂಬಳೆ, ಆಡಳಿತಾಧಿಕಾರಿ ಎಸ್.ಎಲ್.ಭಾರದ್ವಾಜ್ ಬೇಕಲ್, ಉದ್ಯಮಿ ವಸಂತ ಪೈ ಬದಿಯಡ್ಕ, ಮಾಜೀ ಶಾಸಕ ಸಿ.ಎಚ್.ಕುಮಞÂಂಬು, ನ್ಯಾಯವಾದಿ ಬಿ.ಸುಬ್ಬಯ್ಯ ರೈ, ಕೆಸಿಎನ್ ಚಾನೆಲ್ ನಿರ್ದೇಶಕ ಪುರುಷೋತ್ತಮ ಎಂ.ನಾಯ್ಕ್ ಕಾಸರಗೋಡು, ದಾಸ ಸಂಕೀರ್ತನಕಾರ ಜಯಾನಂದಕುಮಾರ್ ಹೊಸದುರ್ಗ, ಆರಿಕ್ಕಾಡಿ ವಿಶ್ವಕರ್ಮ ಬ್ರಾಹ್ಮಣ ಸಂಘದ ಅಧ್ಯಕ್ಷ ಎ.ಸುಧಾಕರ ಆಚಾರ್ಯ, ಅನಂತಪು ಶ್ರೀಅನಂತಪದ್ಮನಾಭ ಕ್ಷೇತ್ರದ ಆಡಳಿತ ಸಮಿತಿ ಸದಸ್ಯ ನ್ಯಾಯವಾದಿ ಉದಯಕುಮಾರ್ ಆರ್.ಗಟ್ಟಿ, ಜಯಪ್ರಕಾಶ ಶೆಟ್ಟಿ ಉಪಸ್ಥಿತರಿದ್ದು ಶುಭಹಾರೈಸಿದರು.
ಬ್ರಹ್ಮಕಲಶೋತ್ಸವ ಸಮಿತಿ ಸಂಘಟನಾ ಕಾರ್ಯದರ್ಶಿ ಶಿವರಾಮ ಕಾಸರಗೋಡು ಪ್ರಾಸ್ತಾವಿಕವಾಗಿ ಮಾತನಾಡಿದರು. ಜಯಪ್ರಕಾಶ್ ಕೋಟೆಮನೆ ಸ್ವಾಗತಿಸಿ, ರಾಧಾಕೃಷ್ಣ ಜಾಲುಮನೆ ವಂದಿಸಿದರು. ಪಿ.ಸುನಿಲ್ ಕುಮಾರ್ ಪುಜೂರು ಹಾಗೂ ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಕಾಸರಗೋಡು ಕೋಟೆಕಣಿಯ ಶ್ರೀರಾಮನಾಥ ಸಾಂಸ್ಕøತಿಕ ಭವನ ಸಮಿತಿಯವರಿಂದ ರಂಗನಟ ಕಿರಣ್ ಕಲಾಂಜಲಿ ನಿರ್ದೇಶನದ ಶ್ರೀಪಥ ಕನ್ನಡ ಪೌರಾಣಿಕ ನಾಟಕ ಪ್ರದರ್ಶನ ನಡೆಯಿತು. ಬಳಿಕ ದರ್ಶನ್ ಪಿ.ಆರ್ ತಲಶ್ಚೇರಿ ನೇತೃತ್ವದಲ್ಲಿ ಕೂಚುಪುಡಿ ನೃತ್ಯ, ಭರತನಾಟ್ಯ ಹಾಗೂ ಜಾನಪದ ವೈವಿಧ್ಯಗಳು ಮತ್ತು ಡಾ.ಚೈತನ್ಯ ಪಿ.ಆರ್ ತಲಶ್ಚೇರಿ ಅವರ ನೇತೃತ್ವದಲ್ಲಿ ಗಾನ-ಗಾಯನ ಕಾರ್ಯಕ್ರಮ ನಡೆಯಿತು.