ಮಂಜೇಶ್ವರ: ತೊಟ್ಟೆತ್ತೋಡಿ ಬಳಿಯ ಬುಡ್ರಿಯ ಶ್ರೀ ಮಲರಾಯ ಬಂಟ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗುತ್ತಿದ್ದು ಆ ಬಗ್ಗೆ ಬ್ರಹ್ಮಕಲಶೋತ್ಸವ ಸಮಿತಿ ರಚನೆ ಹಾಗೂ ಬ್ರಹ್ಮಕಲಶೋತ್ಸವ ನಡೆಸುವ ಬಗ್ಗೆ ಚರ್ಚಿಸಲು ಜೀರ್ಣೋದ್ಧಾರ ಸಮಿತಿಯ ಹಾಗೂ ಭಕ್ತರ ಮಹಾ ಸಭೆ ಇತ್ತೀಚೆಗೆ ದೈವಸ್ಥಾನದ ವಠಾರದಲ್ಲಿ ಜರಗಿತು. ಸಭೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ವಿವಿಧ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಲೀಲಾಕ್ಷ ಸಾಮಾನಿ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಜೀಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ವಸಂತ ಭಟ್ ತೊಟ್ಟೆತ್ತೋಡಿ, ವಾಮಯ ಪೂಜಾರಿ ಕಲ್ಲಗದ್ದೆ ಬುಡ್ರಿಯ, ಶ್ರೀ ಮಹಾಲಿಂಗೇಶ್ವರ ಸೇವಾಟ್ರಸ್ಟ್ ಚಿಗುರುಪಾದೆ ಇದರ ಕಾರ್ಯದರ್ಶಿ ಶ್ರೀಧರ ರಾವ್ ಆರ್.ಎಂ. ಮೀಯಪದವು, ಐಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಸೇವಾ ಸಮಿತಿ ಅಧ್ಯಕ್ಷ ದಿನೇಶ ಬುಡಲೆ ಗುಂಡಿಬೈಲು, ಶ್ರೀ ಮಲರಾಯ ಬಂಟ ದೈವಸ್ಥಾನ ಬುಡ್ರಿಯ ತೊಟ್ಟೆತ್ತೋಡಿ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಪಿ.ಆರ್.ಶೆಟ್ಟಿ ಪೊಯ್ಯೆಲು, ಮೀಯಪದವು ಅಯ್ಯಪ್ಪ ಭಜನಾ ಮಂದಿರದ ಸೇವಾಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಪಳ್ಳತ್ತಡ್ಕ, ಶಂಕರನಾರಾಯಣ ಭಟ್ ಅಡ್ಕತ್ತಿಮಾರ್, ಕೋಡಿ ರಕ್ತೇಶ್ವರಿ ಕೇತ್ರದ ಶಿವಪ್ರಸಾದ್ ಕೋಡಿ ಉಪಸ್ಥಿತರಿದ್ದರು. ಜೀಣೋದ್ಧಾರ ಸಮಿತಿಯ ಕೋಶಾಧಿಕಾರಿ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಸದಾಶಿವ ರಾವ್ ಚಿಗುರುಪಾದೆ ವಂದಿಸಿದರು.