ಕಾಸರಗೋಡು: ಜಿಲ್ಲೆಯ ಚುನಾವಣೆ ಕರ್ತವ್ಯಕ್ಕಾಗಿ ಜ್ಯೂನಿಯರ್ ಆಫೀಸರ್‍ಗಳನ್ನು, ಮಹಿಳೆಯರನ್ನು ಹೆಚ್ಚಾಗಿ ನೇಮಕಗೊಳಿಸಲಾಗಿದೆ ಎಂದು ಆರೋಪಿಸಿ ಜಿಲ್ಲಾಧಿಕಾರಿ ವಿರುದ್ಧ ಐಕ್ಯರಂಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು ನೀಡಿದೆ.
ಬೂತ್‍ಗಳಲ್ಲಿ ಪ್ರಿಸೈಡಿಂಗ್ ಅಧಿಕಾರಿಗಳಾಗಿ ಜ್ಯೂನಿಯರ್ ಅಧಿಕಾರಿಗಳನ್ನು ಹೆಚ್ಚಾಗಿ ನೇಮಕ ಮಾಡಲಾಗಿದೆ. ಇದು ಕಾನೂನು ವಿರುದ್ಧವಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ಜಿಲ್ಲೆಯಲ್ಲಿ ಹೆಚ್ಚಿನ ಬೂತ್‍ಗಳಲ್ಲೂ ಮಹಿಳಾ ನೌಕರರನ್ನು ನೇಮಕ ಮಾಡಲಾಗಿದೆ. ಇದು ಜಿಲ್ಲಾಧಿಕಾರಿ ಮನ:ಪೂರ್ವಕವಾಗಿಯೇ ಮಾಡಿದ್ದಾರೆಂದು ಐಕ್ಯರಂಗ ಆರೋಪಿಸಿದೆ. ಸಮಸ್ಯೆ ಇರುವ ಬೂತ್‍ಗಳಲ್ಲಿ ಮಹಿಳೆಯರನ್ನು ನೇಮಕಗೊಳಿಸುವುದರಿಂದಾಗಿ ಕಳ್ಳಮತ ಚಲಾವಣೆಗೆ ಸಾಧ್ಯತೆ ಇದೆ ಎಂದು ದೂರಿನಲ್ಲಿ ಹೇಳಿದೆ.
ಪಕ್ಷದ ಭದ್ರ ಕೋಟೆಗಳಲ್ಲಿ ಮಹಿಳೆಯರನ್ನು ಬೆದರಿಸಿ ಮತದಾನ ಪ್ರಕ್ರಿಯೆಗಳನ್ನು ಬುಡಮೇಲುಗೊಳಿಸಲು ಸಾಧ್ಯತೆ ಇದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕೆಂದು ದೂರಿನಲ್ಲಿ ಆಗ್ರಹಿಸಲಾಗಿದೆ. ಜಿಲ್ಲಾ ಕಾಂಗ್ರೆಸ್ಸ್ ಪ್ರಧಾನ ಕಾರ್ಯದರ್ಶಿ ಎ.ಗೋವಿಂದನ್ ನಾಯರ್ ದೂರು ನೀಡಿದ್ದಾರೆ.