ಇಂದು ಹಸುರು ರ್ಯಾಲಿ
0
ಏಪ್ರಿಲ್ 04, 2019
ಕಾಸರಗೋಡು: ಈ ಬಾರಿಯ ಲೋಕಸಭೆ ಚುನಾವಣೆ ಪರಿಸರ ಸೌಹಾರ್ದವಾಗಿರಬೇಕು ಎಂಬ ಸಂದೇಶದೊಂದಿಗೆ ಶುಚಿತ್ವ ಮಿಷನ್ ವತಿಯಿಂದ ಹಸುರು ರ್ಯಾಲಿ ಇಂದು (ಏ.4) ಕಾ ಞಂಗಾಡಿನಲ್ಲಿ ನಡೆಯಲಿದೆ.
ಸಂಜೆ 4 ಗಂಟೆಗೆ ಕಾ ಞÂಂಗಾಡ್ ತಾಲೂಕು ಕಚೇರಿ ಬಳಿಯಿಂದ ಆರಂಭಗೊಳ್ಳುವ ರ್ಯಾಲಿ ಕೋಟಚ್ಚೇರಿಯಲ್ಲಿ ಸಮಾಪ್ತಿಗೊಳ್ಳಲಿದೆ. ಹಸುರು ಚುನಾವಣೆಯ ಲಾಂಛನ ಹೊಂದಿರುವ ಸಮವಸ್ತ್ರಧಾರಿಗಳಾದ ಎನ್.ಎಸ್.ಎಸ್. ಸ್ವಯಂಸೇವಕರು, ಹಸುರು ಕ್ರಿಯಾ ಸೇನೆ ಸದಸ್ಯರು, ಶುಚಿತ್ವ ಮಿಷನ್ ಸಿಬ್ಬಂದಿ, ಕಾ?ಂಗಾಡ್ ನಗರಸಭೆ ಆರೋಗ್ಯ ವಿಭಾಗ ಸಿಬ್ಬಂದಿ ಮೊದಲಾದವರು ರ್ಯಾಲಿಯಲ್ಲಿ ಭಾಗವಹಿಸುವರು.