ನವದೆಹಲಿ: ದೇಶಾದ್ಯಂತ ಜೂನ್ ನಿಂದ ಸೆಪ್ಟೆಂಬರ್ ವರೆಗಿನ ನೈಋತ್ಯ ಮುಂಗಾರು ಸಾಧಾರಣವಾಗಿರಲಿದ್ದು, ಈ ಬಾರಿಯ ಮುಂಗಾರು ದೀರ್ಘಾವಧಿ ಸರಾಸರಿ ಶೇಕಡ 96 ರಷ್ಟಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೋಮವಾರ ಮುನ್ಸೂಚನೆ ನೀಡಿದೆ.
ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಭೂವಿಜ್ಞಾನಿನಗಳ ಸಚಿವಾಲಯದ ಕಾರ್ಯದರ್ಶಿ ಎಂ ರಾಜೀವನ್ ನಾಯರ್, 1951ರಿಂದ 2000ದ ಅವಧಿಯಲ್ಲಿ ಭಾರತದ ಒಟ್ಟಾರೆ ಮಳೆಗಾಲದ ಸರಾಸರಿ 89 ಸೆಂಟಿಮೀಟರ್ ಇದೆ. ಮಳೆಗಾಲದ ಉತ್ತರಾರ್ಧದಲ್ಲಿ ತೀವ್ರತೆ ಕಡಿಮೆಯಾಗಿ ಮುಂಗಾರು ಕ್ಷೀಣಿಸಲಿದೆ ಎಂದರು.
ಪೆಸಿಫಿಕ್ ಮತ್ತು ಹಿಂದೂ ಮಹಾ ಸಾಗರದ ಮೇಲಿನ ಸಮುದ್ರ ಮಟ್ಟದ ತಾಪಮಾನ ಭಾರತದ ಮುಂಗಾರಿನ ಮೇಲೆ ಭಾರೀ ಪರಿಣಾಮ ಬೀರಲಿದ್ದು ಈ ಬಗ್ಗೆ ನಿರಂತರ ನಿಗಾ ವಹಿಸಲಾಗಿದೆ.
2019ರ ಮುಂಗಾರು ಋತುವಿನಲ್ಲಿ ದೇಶದಲ್ಲಿ ಒಟ್ಟಾರೆಯಾಗಿ ಸಮ ಹಂಚಿತ ಮಳೆಯಾಗಲಿದ್ದು ರೈತರಿಗೆ ಅನುಕೂಲವಾಗಲಿದೆ ಎಂದು ಅವರು ವಿವರಿಸಿದರು.
2019ರ ಜೂನ್ ಮೊದಲ ವಾರದಲ್ಲಿ ಎರಡನೇ ಹಂತದ 2019ರ ಮುಂಗಾರು ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ಪ್ರಕಟಿಸಲಿದೆ ಎಂದರು.
ಇದಕ್ಕೂ ಮೊದಲು ಖಾಸಗಿ ಹವಮಾನ ಸಂಸ್ಥೆ, ಈ ವರ್ಷ ಮುಂಗಾರು ಮಳೆ ಸಾಕಷ್ಟು ಕೊರತೆಯಾಗಲಿದೆ ಎಂದು ವರದಿ ಮಾಡಿತ್ತು. ಇದು ರೈತ ಸಮುದಾಯದಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಆದರೆ ಈಗ ಭಾರತೀಯ ಹವಾಮಾನ ಇಲಾಖೆ ಆತಂಕವನ್ನು ದೂರ ಮಾಡಿದ್ದು ಮುಂಗಾರು ಸಾಧಾರಣವಾಗಿರಲಿದೆ ಎಂಬ ಮುನ್ಸೂಚನೆ ನೀಡಿರುವುದು ರೈತ ಸಮುದಾಯಕ್ಕೆ ನಿರಾಳತೆ ತಂದಿದೆ.