ಕಾಸರಗೋಡು: 2007ನೇ ಇಸವಿಯಿಂದ 2017-18 ರ ವರೆಗೆ ಕಕ್ಕಿಲ್ಲಾಯ ಕುಟುಂಬಸ್ಥರ ಖಾಸಗಿ ಸಂಸ್ಥೆಯಾದ ಬೇವಿಂಜೆ ಶ್ರೀಧರ ಕಕ್ಕಿಲ್ಲಾಯ ಪ್ರತಿಷ್ಠಾನದ ವತಿಯಿಂದ ಆರ್ಥಿಕವಾಗಿ ಹಿಂದುಳಿದ(ಕಾಸರಗೋಡು ಜಿಲ್ಲಾ ವ್ಯಾಪ್ತಿಯ) ಅರ್ಹವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ನೀಡಲಾಗುತಿತ್ತು.
ಇದುವರೆಗೆ ಸುಮಾರು 600 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಈ ಯೋಜನೆಯ ಪ್ರಯೋಜನ ಪಡೆದಿದ್ದಾರೆ. ಇದೀಗ ಇನ್ನೂ ಹೆಚ್ಚಿನ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳುವುದಕ್ಕಾಗಿ ದಿ.ಕಕ್ಕಿಲ್ಲಾಯರ ಅಭಿಮಾನಿಗಳನ್ನು ಸೇರಿಸಿಕೊಂಡು ಹೊಸ ಸಂಸ್ಥೆ ಬೇವಿಂಜೆ ಶ್ರೀಧರ ಕಕ್ಕಿಲ್ಲಾಯ ಸ್ಮಾರಕ ಟ್ರಸ್ಟನ್ನು ಸ್ಥಾಪಿಸಲಾಗಿದೆ. ಈ ಹೊಸ ಟ್ರಸ್ಟ್‍ನಲ್ಲಿ ಜಸ್ಟಿಸ್ ಯು.ಎಲ್.ಭಟ್ ಪೆÇೀಷಕರಾಗಿ, ಬಿ.ವಿ.ಕಕ್ಕಿಲ್ಲಾಯ ಅಧ್ಯಕ್ಷರಾಗಿ, ಡಾ.ಶ್ರೀನಿವಾಸ ಕಕ್ಕಿಲ್ಲಯ ಉಪಾಧ್ಯಕ್ಷರಾಗಿರುವರು. ದಿ.ಕಕ್ಕಿಲ್ಲಾಯರ ಕುಟುಂಬಸ್ಥರಲ್ಲದೆ, ಕೆ.ವಿ.ಇರ್ನೀರಾಯ, ವಿ.ಕೆ. ತಾಳಿತ್ತಾಯ, ಡಾ.ಯು.ಬಿ.ಕುಣಿಕುಳ್ಳಾಯ, ಹಿರಿಯ ನ್ಯಾಯವಾದಿಗಳಾದ ಐ.ವಿ. ಭಟ್, ಕೆ.ಎಂ. ಬಳ್ಳಕ್ಕುರಾಯ, ಲೆಕ್ಕಪತ್ರ ಪರಿಶೋಧಕ ಎ.ಕೇಶವ ಭಟ್, ಅಬ್ದುಲ್ ಗಫೂರ್ ಸಿ.ಪಿ, ಅಹಮ್ಮದ್ ಅಲಿ ಕೆ, ಡಾ.ಕಮಲಾಕ್ಷ, ಡಾ.ಯು.ಮಹೇಶ್ವರಿ, ವಿವೇಕ ಮಯ್ಯ, ಸುಬ್ರಹ್ಮಣ್ಯ ತಂತ್ರಿ, ಪಿ.ಎನ್.ಮೂಡಿತ್ತಾಯ, ಪೆÇ್ರ.ವಾಸುದೇವ, ಡಾ.ಬೇ.ಸಿ ಗೋಪಾಲಕೃಷ್ಣ ಭಟ್, ಜಯರಾಮ ಮಂಜತ್ತಾಯ ಎಡನೀರು ಮುಂತಾದವರು ಟ್ರಸ್ಟಿಗಳಾಗಿರುವರು.
ಬೇವಿಂಜೆ ಶ್ರೀಧರ ಕಕ್ಕಿಲ್ಲಾಯ ಸ್ಮಾರಕ ಟ್ರಸ್ಟ್ ಕಾಸರಗೋಡು ಇವರು 2019-2020 ನೇ ಶೈಕ್ಷಣಿಕ ವರ್ಷದಿಂದ ಕಾಸರಗೋಡು ಜಿಲ್ಲಾ ವ್ಯಾಪ್ತಿಯ ಅರ್ಹ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ನೀಡಲಿದ್ದಾರೆ. ಆರ್ಥಿಕ ಸಂಕಷ್ಟವು ಕಾರಣವಾಗಿ ಶಿಕ್ಷಣ ಮುಂದುವರಿಸಲು ಸಾಧ್ಯವಾಗದ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸದ್ರಿ ಪ್ರತಿಷ್ಠಾನವು ಸಹಾಯ ಹಸ್ತವನ್ನು ಚಾಚಲು ಸಿದ್ಧವಾಗಿದೆ. ಇದಕ್ಕಾಗಿ ಮುಂದಿನ ಕೆಲವೇ ದಿನಗಳಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗುವುದು.
ಪ್ರೇರಣ ಮುಂತಾದ ಇತರ ಸಂಸ್ಥೆಗಳ ಸಹಯೋಗದೊಂದಿಗೆ ಈ ಆರ್ಥಿಕ ಯೋಜನೆಯನ್ನು ಠಮ್ಮಿಕೊಂಡಿದೆ. ಪ್ರತಿ ವರ್ಷ ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ಅವರ ವಿದ್ಯಾಭ್ಯಾಸ ಪೂರ್ತಿಯಾಗುವ ತನಕ ಆರ್ಥಿಕ ಸಹಾಯವನ್ನು ನೀಡಲಾಗುವುದು ಎಂದು ದಿ.ಬೇವಿಂಜೆ ಶ್ರೀಧರ ಕಕ್ಕಿಲ್ಲಾಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಬಿ.ವಿ.ಕಕ್ಕಿಲ್ಲಾಯ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.