ಬದಿಯಡ್ಕ: ಜಿ.ಎಸ್.ಬಿ ಸಮಾಜ ಬದಿಯಡ್ಕದ ಆಶ್ರಯದಲ್ಲಿ ಮಾ. 6ರಂದು ಯುಗಾದಿ ಹಬ್ಬ ಆಚರಿಸಲಾಯಿತು. ಸಮಾಜದ ಸದಸ್ಯರಿಗಾಗಿ ಹಲವು ಸ್ಪರ್ಧೆ ಗಳನ್ನು ಆಯೋಜಿಸಲಾಗಿತ್ತು.
ಬಳಿಕ ನಡೆದ ಸಮಾರೋಪ ಸಮಾರಂಭದಲ್ಲಿ ಕುಂಬಳೆಯ ವೀರವಿಠಲ ದೇವಸ್ಥಾನದ ಆಡಳಿತ ಮೊಕ್ತೇಸರ ನಾರಾಯಣ. ಪ್ರಭು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಭೆಯ ಅಧ್ಯಕ್ಷತೆಯನ್ನು ಬಿ.ಶ್ರೀಧರ.ಪೈ ವಹಿಸಿದ್ದರು. ಸಮಾಜದ ಖಜಾಂಜಿಯಾದ ಬಿ.ರವೀಂದ್ರ.ಕಾಮತ್ ಮತ್ತು ಕಾರ್ಯದರ್ಶಿ ಬಿ.ಜ್ಞಾನದೇವ.ಶೆಣೈ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಬಾಲಪ್ರತಿಭೆ, ಕನ್ನಡ ಕೋಗಿಲೆ ಖ್ಯಾತಿಯ ಬಿ.ಅಪೇಕ್ಷಾ. ಪೈಯನ್ನು ಸನ್ಮಾನಿಸಲಾಯಿತು. ಸನ್ಮಾನ ಪತ್ರವನ್ನು ಬಿ.ಗಣೇಶ.ಪೈ ವಾಚಿಸಿದರು. ಬಿ.ವಿದ್ಯಾ.ಎನ್.ಶೆಣೈ ಸ್ವಾಗತಿಸಿ, ಬಿ.ವಿಠಲದಾಸ.ಕಾಮತ್ ವಂದಿಸಿದರು. ಬಳಿಕ ಸಮಾಜದ ಸದಸ್ಯರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.