ಕುಂಬಳೆ: ಅಗಲಿದ ಪತ್ರಕರ್ತ ಮುತ್ತಲಿಬ್ ಕುಂಬಳೆ ಅವರ ಎರಡನೇ ಸಂಸ್ಮರಣೆ ಹಾಗೂ ಅತ್ಯುತ್ತಮ ಪತ್ರಕರ್ತರಿಗೆ ಕೊಡಮಾಡುವ ಮುತ್ತಲಿಬ್ ಸ್ಮಾರಕ ಅವಾರ್ಡ್ ವಿತರಣಾ ಕಾರ್ಯಕ್ರಮ ಇಂದು (ಏ18) ಕುಂಬಳೆ ಫ್ರೆಸ್ ಕ್ಲಬ್ ನಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮ ಅಪರಾಹ್ನ 3.30ಕ್ಕೆ ಫ್ರೆಸ್ ಕ್ಲಬ್ ಸಭಾಂಗಣದಲ್ಲಿ ನಡೆಯಲಿದ್ದು, ಪ್ರೆಸ್ ಕ್ಲಬ್ ಅಧ್ಯಕ್ಷ ಕೆ.ಸುರೇಂದ್ರನ್ ಚೀಮೇನಿ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪಂಚಾಯತಿ ಅಧ್ಯಕ್ಷ ಎ.ಜಿ.ಸಿ.ಬಶೀರ್ ಉದ್ಘಾಟಿಸುವರು. ಪತ್ರಕರ್ತ ಶಾಫಿ ತೆರುವತ್ತ್ ಸಂಸ್ಮರಣಾ ಭಾಷಣ ಮಾಡುವರು. ಹಿರಿಯ ಬರಹಗಾರ, ಕವಿ ವಿನೋದ್ ಕುಮಾರ್ ಪೆರುಂಬಳ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಉತ್ತಮ ವರದಿಗಾರಿಕೆಗೆ ನೀಡಲಾಗುವ ಮುತ್ತಲಿಬ್ ಸಂಸ್ಮರಣಾ ಪ್ರಶಸ್ತಿಯನ್ನು ಈ ಸಂದರ್ಭ ಗಣ್ಯರು ಪ್ರಧಾನಗೈಯ್ಯುವರು. ಪ್ರೆಸ್ಸ್ ಕ್ಲಬ್ ಕಾರ್ಯದರ್ಶಿ ಅಬ್ದುಲ್ಲ ಕುಂಬಳೆ, ಕೆ.ಎಂ.ಎ.ಸತ್ತಾರ್, ಲತೀಫ್ ಮಾಸ್ತರ್, ಲತೀಫ್ ಉಪ್ಪಳ, ಧನ್ ರಾಜ್ ಉಪ್ಪಳ ಮೊದಲಾದವರು ಉಪಸ್ಥಿತರಿರುವರು.