ಕೋಳ್ಯೂರು ಶಾಲಾ ವಾರ್ಷಿಕೋತ್ಸವ, ವಿದಾಯಕೂಟ
0
ಏಪ್ರಿಲ್ 05, 2019
ಮಂಜೇಶ್ವರ: ಕೋಳ್ಯೂರು ಶ್ರೀ ಶಂಕರನಾರಾಯಣ ಅನುದಾನಿತ ಕಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಮತ್ತು ಸೇವೆಯಿಂದ ನಿವೃತ್ತರಾಗುವ ಶಾಲಾ ಮುಖ್ಯೋಪಾಧ್ಯಾಯ ಗೋಪಾಲಕೃಷ್ಣ ಭಟ್ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬೂಬಕ್ಕರ್ ಮುಂಚಿಪ್ಪಾಡಿ ಅವರು ಧ್ವಜಾರೋಹಣಗೈದರು. ಶ್ರೀ ಶಂಕರನಾರಾಯಣ ದೇವಸ್ಥಾನದ ಮೊಕ್ತೇಸರ ಕೇಶವ ಭಟ್ ಮೊಗಸಾಲೆ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶ್ರೀ ಶಂಕರನಾರಾಯಣ ದೇವಸ್ಥಾನದ ಮೊಕ್ತೇಸರ ಕೃಷ್ಣ ಭಟ್ ಮೊಗಸಾಲೆ, ಶಾಲಾ ಮಾತೃ ಸಂಘದ ಅಧ್ಯಕ್ಷ ಅಂಬಿಕ ಸಿಂತಾಜೆ, ಸ್ವಾಗತ ಸಮಿತಿ ಕೋಶಾಧಿಕಾರಿ ಗೋಪಾಲಕೃಷ್ಣ ಶಾಸ್ತ್ರಿ ಚಕ್ರಕೋಡಿ ಉಪಸ್ಥಿತರಿದ್ದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬೂಬಕ್ಕರ್ ಅಧ್ಯಕ್ಷತೆ ವಹಿಸಿದರು.
ಶಾಲಾ ಮುಖ್ಯೋಪಾಧ್ಯಾಯ ಗೋಪಾಲಕೃಷ್ಣ ಭಟ್ ಸ್ವಾಗತಿಸಿ, ಶಾಲಾ ಸಹಾಯಕ ಅಧ್ಯಾಪಿಕೆ ಕೆ.ಉಷಾಕಿರಣ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಶಾಲಾ ಮಕ್ಕಳಿಂದ, ಅಂಗನವಾಡಿ ಮಕ್ಕಳಿಂದ ಮತ್ತು ಹಳೆ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು.
ಸಮಾರೋಪ ಸಮಾರಂಭ : ಸಮಾರೋಪ ಸಮಾರಂಭದಲ್ಲಿ ಕೋಳ್ಯೂರು ಶಾಲೆಯಲ್ಲಿ 31 ವರ್ಷ ಸೇವೆಗೈದ ಗೋಪಾಲಕೃಷ್ಣ ಭಟ್ ಅವರನ್ನು ಸಮ್ಮಾನಿಸಲಾಯಿತು. ಮಂಜೇಶ್ವರ ಬಿಆರ್‍ಸಿ ತರಬೇತುದಾರ ಕೃಷ್ಣ ಪ್ರಕಾಶ್ ಉದ್ಘಾಟಿಸಿದರು. ಮಂಜೇಶ್ವರ ಬಿಆರ್‍ಸಿ ಸಂಪನ್ಮೂಲ ವ್ಯಕ್ತಿಯಾದ ವಿಜಯ ಕುಮಾರ್ ಪಾವಳ, ಸೋಮಪ್ಪ ದೈಗೋಳಿ, ಬೆನಕ ಯಕ್ಷಗಾನ ಮಂಡಳಿಯ ಮುಖ್ಯಸ್ಥ ಕೃಷ್ಣ ಭಟ್ ದೇವಕಾನ ಮುಂತಾದವರು ಅತಿಥಿಗಳಾಗಿ ಭಾಗವಹಿಸಿದರು.
ಶಾಲಾ ಅಧ್ಯಾಪಕ ವೃಂದ, ರಕ್ಷಕ ಶಿಕ್ಷಕ ಸಮಿತಿಯ ವತಿಯಿಂದ ಮತ್ತು ಶ್ರೀ ಮಹಾಗಣಪತಿ ಯಕ್ಷಗಾನ ಕಲಾ ಪ್ರತಿಷ್ಠಾನ ಕೋಳ್ಯೂರು, ಶ್ರೀ ಶಂಕರ್ ಪ್ರೆಂಡ್ಸ್ ಕ್ಲಬ್ ಕೋಳ್ಯೂರು, ದಫ್‍ಮುಟ್ಟ್ ಸಂಘ ಕೋಳ್ಯೂರು ಮುಂತಾದ ಸಂಘದ ವತಿಯಿಂದ ಗೋಪಾಲಕೃಷ್ಣ ಭಟ್ ಅವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಶ್ರೀ ಶಂಕರನಾರಾಯಣ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಹಾಗೂ ಶಾಲಾ ಪ್ರಬಂಧಕ ಉಮೇಶ್ ವಿ, ಶ್ರೀ ಶಂಕರ್ ಫ್ರೆಂಡ್ಸ್ ಕ್ಲಬ್ ಕೋಳ್ಯೂರು ಅಧ್ಯಕ್ಷ ಕೆ.ದೀಪಕ್, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಂಕರನಾರಾಯಣ ಭಟ್, ಸ್ವಾಗತ ಸಮಿತಿ ಸಂಚಾಲಕರುಗಳಾದ ಭಾಸ್ಕರ ಕೋಳ್ಯೂರು, ಜುನೈದ್ ಕೋಳ್ಯೂರುಪದವು, ಅಂಬಿಕ ಸಿಂತಾಜೆ, ಗೋಪಾಲಕೃಷ್ಣ ಶಾಸ್ತ್ರಿ ಚಕ್ರಕೋಡಿ ಮುಂತಾದವರು ಉಪಸ್ಥಿತರಿದ್ದರು. ಅಬೂಬಕ್ಕರ್ ಮುಂಚಿಪ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಅರೆಬಿಕ್ ಅಧ್ಯಾಪಕ ಇಲಿಯಾಸ್ ವಂದಿಸಿದರು. ನಂತರ ಶಾಲೆಯ ಹಳೆ ವಿದ್ಯಾರ್ಥಿಗಳಿಂದ ರಮೇಶ್ ಶೆಟ್ಟಿ ಬಾಯಾರು ನಿರ್ದೇಶನದಲ್ಲಿ ತಾರಕಾಸುರ ಮೋಕ್ಷ ಎಂಬ ಯಕ್ಷಗಾನ ಬಯಲಾಟ ಜರಗಿತು.