ಮಧೂರು: ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ ಪರಮಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ 2020ರ ಶಾರ್ವರಿನಾಮ ಸಂವತ್ಸರದ ಚಾತುರ್ಮಾಸ್ಯ ವ್ರತಾಚರಣೆಯನ್ನು ಮಧೂರು ಶ್ರೀ ಕಾಳಿಕಾಂಬಾ ಮಠದಲ್ಲಿ ಜರಗಿಸುವುದಾಗಿ ನಿರ್ಣಯಿಸಲಾಗಿದೆ. ಈ ಪುಣ್ಯಕಾರ್ಯವನ್ನು ಅತ್ಯಂತ ಯಶಸ್ಸುಗೊಳಿಸುವ ನಿಟ್ಟಿನಲ್ಲಿ ಮಧೂರು ಶ್ರೀಮಠದ ಪದಾಧಿಕಾರಿಗಳು ಸಂಬಂಧಪಟ್ಟ ಎಲ್ಲಾ ಪ್ರಾಂತ್ಯಗಳನ್ನು ಸಂದರ್ಶಿಸಿ ಶಿಷ್ಯವೃಂದದವರಲ್ಲಿ ಜಾಗೃತಿಯನ್ನು ಮೂಡಿಸುವರೇ ಇತ್ತೀಚೆಗೆ ಜರಗಿದ ಆಡಳಿತ ಮಂಡಳಿಯ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಮುಂದಿನ ಎಲ್ಲ ಭಾನುವಾರಗಳಲ್ಲಿ ಪ್ರಾಂತ್ಯ ಸಂದರ್ಶನ ಚಟುವಟಿಕೆ ನಡೆಯಲಿದ್ದು, ಏ. 14 ರಂದು ಬೆಳಿಗ್ಗೆ 10-30ಕ್ಕೆ ಬದಿಯಡ್ಕ ಪ್ರಾಂತ್ಯ, ಏ.21 ರಂದು ಬೆಳಿಗ್ಗೆ 10-30ಕ್ಕೆ ಪುತ್ತೂರು, ಮಧ್ಯಾಹ್ನ 3-ಕ್ಕೆ ಸುಳ್ಯ ಪ್ರಾಂತ್ಯ. ಮೆ.5 ರಂದು ಮಧ್ಯಾಹ್ನ 12-ಕ್ಕೆ ಮಧೂರು, ಮಧ್ಯಾಹ್ನ 3-ಕ್ಕೆ ಕಾಸರಗೋಡು, ಸಂಜೆ 5-ಕ್ಕೆ ಕಂಬಾರು ಪ್ರಾಂತ್ಯ. ಮೇ. 12 ರಂದು ಬೆಳಿಗ್ಗೆ 10-ಕ್ಕೆ ಮೌವ್ವಾರು, ಮಧ್ಯಾಹ್ನ 2-ಕ್ಕೆ ಮುಳ್ಳೇರಿಯ, ಸಂಜೆ 5-ಕ್ಕೆ ಬೋವಿಕ್ಕಾನ ಪ್ರಾಂತ್ಯ. ಮೇ. 19ರಂದು ಬೆಳಿಗ್ಗೆ 10-ಕ್ಕೆ ಮಂಗಲ್ಪಾಡಿ, ಮಧ್ಯಾಹ್ನ 3-ಕ್ಕೆ ಕೋಟೆಕ್ಕಾರು ಪ್ರಾಂತ್ಯ, ಮೇ. 26ರಂದು ಬೆಳಿಗ್ಗೆ 10-30ಕ್ಕೆ ಪೆರ್ಲ, ಮಧ್ಯಾಹ್ನ 3-ಕ್ಕೆ ಸೀತಾಂಗೋಳಿಯಲ್ಲಿ ಮಾಯಿಪ್ಪಾಡಿ-ಸೀತಾಂಗೋಳಿ-ಪುತ್ತಿಗೆ ಮತ್ತು ಕುಂಬಳೆ ಪ್ರಾಂತ್ಯಗಳ ಸಂದರ್ಶನವು ನಡೆಯಲಿದೆ. ಮಧೂರು ಶ್ರೀಮಠದ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರುಗಳ ಪ್ರಾಂತ್ಯ ಸಂದರ್ಶನದಲ್ಲಿ, ಪ್ರಾಂತ್ಯ ಸಮಿತಿ, ಯುವಕ ಸಂಘ, ಮಹಿಳಾ ಸಂಘ ಸದಸ್ಯರು ಹಾಗೂ ಸಮಾಜ ಬಾಂಧವರುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಶ್ರೀಮಠದ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.