ನವದೆಹಲಿ: ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯ ಚುನಾವಣೆಯ ಸಂದರ್ಭದಲ್ಲಿ ನಕಲಿ ಸುದ್ದಿಗಳು,ಚುನಾವಣಾ ಅಪರಾಧಗಳ ವಿರುದ್ಧದ ಹೋರಾಟದಲ್ಲಿ ತೊಡಗಿಸಿಕೊಳ್ಳುವಂತೆ ದೇಶದ 400 ಮಿಲಿಯನ್ ಸ್ಮಾರ್ಟ್ ಪೋನ್ ಬಳಕೆದಾರರನ್ನು ಚುನಾವಣಾ ಆಯೋಗ ಕೋರಿದೆ.
ಹಣ ನೀಡಿಕೆ, ಮತದಾರರಿಗೆ ಬೆದರಿಕೆ ಹಾಗೂ ನಕಲಿ ಸುದ್ದಿಗಳು ಮುಂತಾದ ಚುನಾವಣಾ ಅಪರಾಧಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ದಾಖಲಿಸಲು ಮತ್ತು ವರದಿ ಮಾಡಲು ಜನರ ಸಹಾಯಕ್ಕಾಗಿ ಚುನಾವಣಾ ಆಯೋಗ ಸುಮಾರು ಹನ್ನೇರಡು ಆಪ್ ಗಳನ್ನು ಪರಿಚಯಿಸಿದೆ.
ಸಿ - ವಿಜಿಲ್ ಆಪ್ ನಲ್ಲಿ ಈಗಾಗಲೇ ಸುಮಾರು 70 ಸಾವಿರಕ್ಕೂ ಹೆಚ್ಚು ಚುನಾವಣಾ ಪ್ರಚಾರ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ.ಈ ಆಪ್ ಚುನಾವಣಾ ಆಯೋಗದ ವೆಬ್ ಸೈಟ್ ನಲ್ಲಿ ಲಭ್ಯವಿದೆ. ಇತ್ತೀಚಿನ ಮಾಹಿತಿಯ ಪ್ರಕಾರ, ಮೂರನೇ ಎರಡು ಭಾಗದಷ್ಟು ಮಾನ್ಯವಾಗಿದ್ದು, ಎಷ್ಟು ನಕಲಿ ಸುದ್ದಿಗಳನ್ನು ಸ್ವೀಕರಿಸಲಾಗಿದೆ ಎಂಬುದರ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ.
ಚುನಾವಣಾ ಆಯೋಗದ 400 ಶಾಶ್ವತ ಸಿಬ್ಬಂದಿ ಇಂತಹ ದೂರುಗಳ ಮೇಲ್ವಿಚಾರಣೆ ಮಾಡುತ್ತಿದ್ದು, 900 ಮಿಲಿಯನ್ ಗಿಂತಲೂ ಹೆಚ್ಚು ಮತದಾರರ ಬಗ್ಗೆ ಗಮನ ಹರಿಸುತ್ತಿದ್ದಾರೆ. ಅಲ್ಲದೇ ಚುನಾವಣಾ ಕಾರ್ಯಕ್ಕಾಗಿ ಶಿಕ್ಷಕರಿಂದ ಹಿಡಿದು ಪೊಲೀಸರವರೆಗೂ, ಅನೇಕ ಮಿಲಿಯನ್ ಸ್ಥಳೀಯ ನಿವಾಸಿಗಳ ನೆರವನ್ನು ಚುನಾವಣಾ ಆಯೋಗ ಪಡೆದುಕೊಂಡಿದೆ.