ಕೆಥೋಲಿಕ್ ಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ನೇಮಕ
0
ಏಪ್ರಿಲ್ 04, 2019
ಬದಿಯಡ್ಕ: ಕೆಥೋಲಿಕ್ ಸಭಾ ಕಾಸರಗೋಡು ಜಿಲ್ಲಾ ಘಟಕದ ಚುನಾವಣೆಯು ಬೇಳ ಇಗರ್ಜಿ ಸಭಾಂಗಣದಲ್ಲಿ ಇತ್ತೀಚೆಗೆ ಜರಗಿತು.
ಅಧ್ಯಕ್ಷರಾಗಿ ಯುವ ನೇತಾರ ಹಾಗೂ ಉದ್ಯಮಿ ರಾಜು ಸ್ಟೀಫನ್ ಡಿ'ಸೋಜ ಕುಂಬಳೆ, ಉಪಾಧ್ಯಕ್ಷರಾಗಿ ಕುಂಬಳೆ ಹೋಲಿ ಫ್ಯಾಮಿಲಿ ಶಾಲೆಯ ಶಿಕ್ಷಕ ವಿನೋದ್ ಕ್ರಾಸ್ತ ಹಾಗೂ ಕಾರ್ಯದರ್ಶಿಯಾಗಿ ಆಲ್ವಿನ್ ಡಿ'ಸೋಜ ನಾರಂಪಾಡಿ ಅವರು ಸರ್ವಾನುಮತದಿಂದ ಆಯ್ಕೆಯಾದರು. ಚುನಾವಣಾ ಅಧಿಕಾರಿಗಳಾಗಿ ಪ್ರಾಂತೀಯ ಪ್ರತಿನಿಧಿಗಳು ಹಾಜರಿದ್ದರು. ಕಾಸರಗೋಡು ವಲಯದ ಪ್ರಧಾನ ಧರ್ಮಗುರು ವಂದನೀಯ ಜೋನ್ ವಾಸ್ ರವರು ನೂತನ ಪದಾಧಿಕಾರಿಗಳಿಗೆ ಶುಭಹಾರೈಸಿದರು.