HEALTH TIPS

ಕೊಡ್ಯಮ್ಮೆ ಗುತ್ತು ಧರ್ಮ ನೇಮೋತ್ಸವ

   
     ಕುಂಬಳೆ: ಇಚ್ಲಂಪಾಡಿ ಕೊಡ್ಯಮ್ಮೆ ಗುತ್ತು ತರವಾಡು ಮನೆಯ ಗೃಹ ಪ್ರವೇಶ, ಗುಳಿಗ ಪ್ರತಿಷ್ಠೆ ಮತ್ತು ಧರ್ಮ ನೇಮೋತ್ಸವ ಏ.17 ರಿಂದ 20 ರ ವರೆಗೆ ನಡೆಯಲಿದೆ.
   ಏ.17 ರಂದು ಸಂಜೆ 4 ಕ್ಕೆ ತಂತ್ರಿವರ್ಯರ ಆಗಮನ, ಪೂರ್ಣಕುಂಭ ಸ್ವಾಗತ, 6 ಕ್ಕೆ ಸುದರ್ಶನ ಹೋಮ, 18 ರಂದು ಬೆಳಿಗ್ಗೆ 9 ಕ್ಕೆ ತಿಲಹೋಮ, ಸಂಜೆ 4 ಕ್ಕೆ ಸ್ಥಳ ಶುದ್ಧಿ, ಪ್ರಾಸಾದ ಶುದ್ಧಿ, ವಿವಿಧ ವೈದಿಕ ಕಾರ್ಯಕ್ರಮಗಳು, 19 ರಂದು ಬೆಳಿಗ್ಗೆ 9 ಕ್ಕೆ ಗಣಹೋಮ, 10.21 ರ ಮುಹೂರ್ತದಲ್ಲಿ ಗೃಹ ಪ್ರವೇಶ, ದೈವಗಳ ಪ್ರತಿಷ್ಠೆ, ಕಲಶಾಭಿಷೇಕ, ಮಹಾಪೂಜೆ, ಮಧ್ಯಾಹ್ನ 12 ಕ್ಕೆ ಮುಡಿಪು ಸೇವೆ, ಅನ್ನ ಸಂತರ್ಪಣೆ, ಸಂಜೆ 6 ರಿಂದ ಅಂಬಿಲಡ್ಕ ಶ್ರೀ ರಾಮ ಭಜನಾ ಸಂಘದಿಂದ ಭಜನೆ, ರಾತ್ರಿ 8 ರಿಂದ ಬಾವಂದ ಗುತ್ತಿನಿಂದ ಭಂಡಾರ ಬಂದು ದೈವದ ತೊಡಂಙಲ್, ಅನ್ನಸಂತರ್ಪಣೆ ನಡೆಯಲಿದೆ.
   ಏ.20 ರಂದು ಬೆಳಿಗ್ಗೆ 8 ಕ್ಕೆ ಬಬ್ಬರ್ಯ ಕೋಲ, 10 ಕ್ಕೆ ಪಿಲಡ್ಕತ್ತಾಯಿ ಧೂಮಾವತಿ ಮತ್ತು ಕನ್ನ ಭಂಡಾರಿ ದೈವದ ನೇಮೋತ್ಸವ, ಅನ್ನಸಂತರ್ಪಣೆ, ಸಂಜೆ 7 ರಿಂದ ದೀಪಾರಾಧನೆ, ಕುಂಞಮ್ಮ ಆಚಾರ್ತಿ, ಗುಳಿಗ, ಕೊರತಿ ಇತ್ಯಾದಿ ದೈವಗಳ ನೇಮ, ಅನ್ನಸಂತರ್ಪಣೆ ಜರಗಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries