ಬದಿಯಡ್ಕ: ನೀರ್ಚಾಲು ಸಮೀಪದ ಪುದುಕೋಳಿ ತರವಾಡಿನಲ್ಲಿ ಶುಕ್ರವಾರ) ಹಾಗೂ ಶನಿವಾರ ವಾರ್ಷಿಕ ಧರ್ಮನೇಮೋತ್ಸವ ವಿವಿಧ ವಿಧಿವಿಧಾನಗಳೊಂದಿಗೆ ನೆರವೇರಿತು.
ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ರಾತ್ರಿ ಶ್ರೀದುರ್ಗಾಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ದೈವಗಳ ತೊಡಂಙಲ್, ಬಳಿಕ ಅನ್ನಸಂತರ್ಪಣೆ ನಡೆಯಿತು.
ಶನಿವಾರ ಮುಂಜಾನೆ 5.30ಕ್ಕೆ ಶ್ರೀಉಳ್ಳಾಕ್ಲು ದೈವದ ನೇಮ,ಪ್ರಸಾದ ವಿತರಣೆ, ಬೆಳಿಗ್ಗೆ 9 ಕ್ಕೆ ಶ್ರೀಧೂಮಾವತಿ ದೈವಗಳ ನೇಮ,ಪ್ರಸಾದ ವಿತರಣೆ, ಮಧ್ಯಾಹ್ನ 12 ಕ್ಕೆ ಧರ್ಮದೈವ ಶ್ರೀಪಂಜುರ್ಲಿಯ ನೇಮ ನಡೆಯಿತು.ಬಳಿಕ ಪ್ರಸಾದ ವಿತರಣೆ, ಭೋಜನ ಪ್ರಸಾದದೊಂದಿಗೆ ಧರ್ಮನೇಮೋತ್ಸವ ಸಂಪನ್ನಗೊಂಡಿತು. ನೂರಾರು ಜನರು ಭಾಗವಹಿಸಿ ದೈವಗಳ ಕೃಪೆಗೆ ಪಾತ್ರರಾದರು.ಪ್ರಮುಖರಾದ ಶ್ರೀಕೃಷ್ಣ ಭಟ್ ಪುದುಕೋಳಿ ನೇತೃತ್ವ ವಹಿಸಿದ್ದರು.
(ಸಮರಸ ಚಿತ್ರ ಮಾಹಿತಿ-ಶನಿವಾರ ನಡೆದ ಶ್ರೀಧೂಮಾವತಿ ದೈವ ನೇಮ,2)(3)ಧರ್ಮದೈವ ಶ್ರೀ ಪಂಜುರ್ಲಿಯ ನೇಮ.(ಪಂಜುರ್ಲಿ ದೈವ ಕಲಾವಿದ-ಶಿವರಾಮ.)