HEALTH TIPS

ಮಧೂರಿನಲ್ಲಿ ಆನೆಗುಂದಿಶ್ರೀ ಚಾತುರ್ಮಾಸ್ಯ- ಬದಿಯಡ್ಕ ಪ್ರಾಂತ್ಯ ಸಮಿತಿ ರೂಪೀಕರಣ

    ಬದಿಯಡ್ಕ: ಸಮರ್ಪಣಾ ಭಾವದಿಂದ ಗುರುಸೇವೆಯಲ್ಲಿ ತೊಡಗಿಸಿದಾಗ ಮಾತ್ರವೇ 2020ರ ಆನೆಗುಂದಿಶ್ರೀಗಳವರ ಚಾತುರ್ಮಾಸ್ಯವನ್ನು ಯಶಸ್ವಿಯಾಗಿ ಜರಗಿಸಲು ಸಾಧ್ಯವೆಂದು ಆನೆಗುಂದಿ ಪ್ರತಿಷ್ಠಾನದ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಮತ್ತು ಮಧೂರು ಮಠದ ಉಪಾಧ್ಯಕ್ಷ ವೈ. ಧರ್ಮೇಂದ್ರ ಆಚಾರ್ಯ ಮಧೂರು ಹೇಳಿದರು.
     ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ 2020ರ ಶಾರ್ವರಿನಾಮ ಸಂವತ್ಸರದ ಚಾತುರ್ಮಾಸ್ಯ ವ್ರತಾಚರಣೆ ಮಧೂರು ಶ್ರೀ ಕಾಳಿಕಾಂಬಾ ಮಠದಲ್ಲಿ ನಡೆಯಲಿದ್ದು ಈ ಬಗ್ಗೆ ಬದಿಯಡ್ಕ ಸುಂದರ ಆಚಾರ್ಯ ಇವರ ನಿವಾಸದಲ್ಲಿ ಇತ್ತೀಚೆಗೆ ನಡೆದ  ಬದಿಯಡ್ಕ  ಪ್ರಾಂತ್ಯ ಸಮಿತಿ ರೂಪೀಕರಣ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
   ಕಾರ್ಯಕ್ರಮದ ಯಶಸ್ವಿಗಾಗಿ ಮಧೂರು ಶ್ರೀಮಠದ ಪದಾಧಿಕಾರಿಗಳು ಸಂದರ್ಶಿಸಿದರು. ಗುರುಪೀಠದ ಪುನರ್‍ನಿರ್ಮಾಣ ಕಾಲದಲ್ಲಿ ಮಧೂರು ಮಠದ ಸಮಾಜ ಬಾಂಧವರು ಹಿರಿಯರು, ಕಿರಿಯರು ಅವಿರತವಾಗಿ ಸಮರ್ಪಣಾ ಭಾವದಿಂದ ಶ್ರಮಿಸಿದ್ದರು, ಇದೀಗ ಅಂತಹ ಪ್ರಯತ್ನ  ಮತ್ತೊಮ್ಮೆ ಅಗತ್ಯವಿದೆ ಎಂದು ಅವರು ಈ ಹಿಂದಿನ ಘಟನೆಗಳ ವಿವರಣೆ ನೀಡಿದರು.
ಗುರುವರ್ಯರ 2020ರ ಚಾತುರ್ಮಾಸ್ಯದಂತಹ ಪುಣ್ಯಕಾರ್ಯವನ್ನು ಜರಗಿಸಲು ಇಂದಿನಿಂದಲೇ ಕಟಿಬದ್ಧರಾಗಿ ದುಡಿಯಬೇಕೆಂದು ಸಭೆಯ ಅಧ್ಯಕ್ಷತೆ ವಹಿಸಿದ ಮಧೂರು ಶ್ರೀಮಠದ ಅಧ್ಯಕ್ಷ ಎನ್. ಪರಮೇಶ್ವರ ಆಚಾರ್ಯ ಕರೆನೀಡಿದರು.  ಮಧೂರು ಮಠದಲ್ಲಿ ಆನೆಗುಂದಿಶ್ರೀಗಳವರ 2020ರ ಚಾತುರ್ಮಾಸ್ಯವನ್ನು ಯಶಸ್ವಿಯಾಗಿಸಲು ಹಮ್ಮಿಕೊಳ್ಳಬಹುದಾದ ಯೋಜನೆಗಳ  ಮಾಹಿತಿಯನ್ನು ಶ್ರೀಮತ್ ಆನೆಗುಂದಿ ಜಗದ್ಗುರು ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್.ಎಂ.ಬಿ. ಆಚಾರ್ ಕಂಬಾರು ಅವರು  ನೀಡಿದರು.
     ಇದೇ ಸಂದರ್ಭದಲ್ಲಿ ಬದಿಯಡ್ಕ ಪ್ರಾಂತ್ಯ ಚಾತುರ್ಮಾಸ್ಯ ಸಮಿತಿಯನ್ನು ರೂಪೀಕರಿಸಲಾಯಿತು. ಸಮಿತಿಯ ಉಸ್ತುವಾರಿಯಾಗಿ ಎಂ. ಪುರುಷೋತ್ತಮ ಆಚಾರ್ಯ ನೆಕ್ರಾಜೆ, ಅಧ್ಯಕ್ಷರಾಗಿ ಸುಂದರ ಆಚಾರ್ಯ ಬದಿಯಡ್ಕ, ಗೌರವ ಉಪಾಧ್ಯಕ್ಷರಾಗಿ ಸುಬ್ರಹ್ಮಣ್ಯ ಆಚಾರ್ಯ ಮೂಕಂಪಾರೆ, ಏತಡ್ಕ ರಾಮಚಂದ್ರ ಆಚಾರ್ಯ ಬದಿಯಡ್ಕ ಮತ್ತು ಪ್ರಮೋದ್ ಆಚಾರ್ಯ ಬದಿಯಡ್ಕ, ಉಪಾಧ್ಯಕ್ಷರಾಗಿ ಪುಷ್ಪರಾಜ್ ಆಚಾರ್ಯ ಬದಿಯಡ್ಕ, ಪುಂಡಲೀಕ ಆಚಾರ್ಯ ಬದಿಯಡ್ಕ ಮತ್ತು ಪ್ರಪುಲ್ಲ ಪುಂಡಲೀಕ ಆಚಾರ್ಯ ಬದಿಯಡ್ಕ, ಕಾರ್ಯದರ್ಶಿಯಾಗಿ ಸತೀಶ ಆಚಾರ್ಯ ಬದಿಯಡ್ಕ, ಜೊತೆ ಕಾರ್ಯದರ್ಶಿಗಳಾಗಿ ಸುರೇಶ ಆಚಾರ್ಯ ನೆಕ್ರಾಜೆ, ಯತಿರಾಜ್ ಆಚಾರ್ಯ ನೆಕ್ರಾಜೆ, ದಿನೇಶ್ ಆಚಾರ್ಯ ಬದಿಯಡ್ಕ, ವೇಣುಗೋಪಾಲ ಆಚಾರ್ಯ ನೆಕ್ರಾಜೆ, ಮಮತಾ ಸುಂದರ ಆಚಾರ್ಯ ಬದಿಯಡ್ಕ ಮತ್ತು ಕೋಶಾಧಿಕಾರಿಯಾಗಿ ಸುಬ್ರಹ್ಮಣ್ಯ ಆಚಾರ್ಯ ನೆಕ್ರಾಜೆ ಅವರನ್ನು  ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸಮಿತಿಯ ಕಾರ್ಯಕಾರಿ ಸದಸ್ಯರಾಗಿ ಶಿವಕುಮಾರ ಆಚಾರ್ಯ ಬದಿಯಡ್ಕ, ದಿವಾಕರ ಆಚಾರ್ಯ ಬದಿಯಡ್ಕ, ಭುವನೇಶ ಆಚಾರ್ಯ ಬದಿಯಡ್ಕ, ರಾಜೇಶ ಆಚಾರ್ಯ ಬದಿಯಡ್ಕ, ಬಾಲಕೃಷ್ಣ ಆಚಾರ್ಯ ಬದಿಯಡ್ಕ, ಸುಧೀಶ ಆಚಾರ್ಯ ಬದಿಯಡ್ಕ, ಯಶೋದ ಶಿವಕುಮಾರ್ ಆಚಾರ್ಯ ಬದಿಯಡ್ಕ, ಪುಷ್ಪಲತ ಪುರುಷೋತ್ತಮ ಆಚಾರ್ಯ ಬದಿಯಡ್ಕ, ದಯಾಮಣಿ ರಾಮಚಂದ್ರ ಆಚಾರ್ಯ ಬದಿಯಡ್ಕ, ಗೀತಾ ಯಾದವ ಆಚಾರ್ಯ ಏತಡ್ಕ, ಹರಿಣಿ ಸತೀಶ ಆಚಾರ್ಯ ಬದಿಯಡ್ಕ, ಮನೋಜ್ ಆಚಾರ್ಯ ಬದಿಯಡ್ಕ, ರೇಣುಕ ಸುಬ್ರಹ್ಮಣ್ಯ ಆಚಾರ್ಯ ಬದಿಯಡ್ಕ ಮತ್ತು ಅರುಣ್ ಕುಮಾರ್ ಆಚಾರ್ಯ ಬದಿಯಡ್ಕ ಇವರನ್ನು ಆಯ್ಕೆ ಮಾಡಲಾಯಿತು.  ಸಭೆಯಲ್ಲಿ ಮಧೂರು ಮಠದ ಕೋಶಾಧಿಕಾರಿ ಕೆ. ನಾರಾಯಣ ಆಚಾರ್ಯ ಕಂಬಾರು, ಕಾರ್ಯದರ್ಶಿ ತಾರಾನಾಥ ಆಚಾರ್ಯ ಮಧೂರು, ಯವಕ ಸಂಘದ ಅಧ್ಯಕ್ಷ ಮಹೇಶ್ ಆಚಾರ್ಯ ಮಧೂರು ಮಾತನಾಡಿದರು.  ಭಜನಾ ಸಂಘ, ಮಹಿಳಾ ಸಂಘಗಳ ಸದಸ್ಯರು, ಸಹಿತ ಉಪಸ್ಥಿತರಿದ್ದು ವಿವಿಧ ಸಲಹೆ ಸೂಚನೆಯನ್ನು ನೀಡಿದರು.
  ಎಂ. ಪುರುಷೋತ್ತಮ ಆಚಾರ್ಯ ನೆಕ್ರಾಜೆ ಸ್ವಾಗತಿಸಿ, ಸುಬ್ರಹ್ಮಣ್ಯ ಆಚಾರ್ಯ ನೆಕ್ರಾಜೆ ವಂದಿಸಿದರು. ಸುರೇಶ ಆಚಾರ್ಯ ನೆಕ್ರಾಜೆ ಕಾರ್ಯಕ್ರಮ ನಿರ್ವಹಿಸಿದರು.  ಕು. ವಂಶಿಕ ಆಚಾರ್ಯ ಬದಿಯಡ್ಕ ಪ್ರಾರ್ಥಿಸಿದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries