HEALTH TIPS

ಬರಗಾಲ ಪ್ರತಿರೋಧ ಚಟುವಟಿಕೆಗಳು ಚುರುಕು

ಕಾಸರಗೋಡು: ಬೇಸಿಗೆ ಬಿರುಸುಗೊಂಡಿರುವ ಹಿನ್ನೆಲೆಯಲ್ಲಿ ಬರಗಾಲ ಪ್ರತಿರೋಧ ಚಟುವಟಿಕೆಗಳು ಜಿಲ್ಲೆಯಲ್ಲಿ ಸಕ್ರಿಯವಾಗಿವೆ. ಕುಡಿಯುವ ನೀರಿನ ಬರ ಅನುಭವಿಸುತ್ತಿರುವ ವಿವಿಧ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಕೆ ನಡೆದಿದೆ. ಈ ಸಂಬಂಧ ಸ್ಥಳೀಯಾಡಳಿತ ಸಂಸ್ಥೆಗಳ ಕಾರ್ಯದರ್ಶಿಗಳ ಸಭೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಿತು. ಹೆಚ್ಚುವರಿ ದಂಡನಾಧಿಕಾರಿ ಸಿ.ಬಿಜು ಅಧ್ಯಕ್ಷತೆ ವಹಿಸಿದ್ದರು. ಬರಗಾಲ ತೀವ್ರವಾಗಿರುವ ಪ್ರದೇಶಗಳಿಗೆ ನೀರು ಪೂರೈಕೆ ವೇಳೆ ಆದ್ಯತೆ ನೀಡಬೇಕು. ಚುನಾವಣೆ ನೀತಿಸಂಹಿತೆ ಪೂರ್ಣ ರೂಪದಲ್ಲಿ ಪಾಲಿಸುವ ಮೂಕ ಸಿಬ್ಬಂದಿ ಕರ್ತವ್ಯ ನಡೆಸಬೇಕು ಎಂದು ಹೆಚ್ಚುವರಿ ದಂಡನಾಧಿಕಾರಿ ಈ ವೇಳೆ ತಿಳಿಸಿದರು. ಜಿಲ್ಲೆಯ 7 ಗ್ರಾಮಪಂಚಾಯತ್ ಗಳಲ್ಲಿ ಮತ್ತು ಒಂದು ನಗರಸಭೆ ವ್ಯಾಪ್ತಿ ಪ್ರದೇಶದಲ್ಲಿ ಕುಡಿಯುವ ನೀರಿನ ಪೂರೈಕೆಗೆ ಕ್ರಮ ನಡೆಸಲಾಗುತ್ತಿದೆ. ಒಂದು ವಾರದ ಅವಧಿಯಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಕೊಟೇಷನ್ ಮೂಲಕ ಗೊತ್ತುಮಾಡಿರುವ ವಾಹನಗಳಲ್ಲಿ ಬಾಡಿಗೆ ರೂಪದಲ್ಲಿ ನೀರಿನ ಸರಬರಾಜು ನಡೆಸಲಾಗುವುದು. ಈ ವೇಲೆ ಎಲ್ಲ ರೀತಿಯ ಮಾನದಂಡಗಳನ್ನೂ ಪಾಲಿಸಲಾಗುವುದು. ಸ್ಥಳೀಯಾಡಳಿತ ಸಂಸ್ಥೇಗಳು ಇದರ ಖರ್ಚುವೆಚ್ಚವನ್ನು ಸ್ವಂತ ನೆಲೆಯಲ್ಲಿ ಕಂಡುಕೊಳ್ಳಬೇಕು.ಹೆಚ್ಚುವರಿ ಅಗತ್ಯವಿದ್ದರೆ ಸರಕಾರದಿಂದ ಒದಗಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಸಂಬಂಧ ಪಟ್ಟವರು ಸಭೆಯಲ್ಲಿ ತಿಳಿಸಿದರು. ಜಲವಿತರಣೆ ವೇಳೆ ಗುಣಮಟ್ಟದ ಖಚಿತತೆಯೂ ಇರಬೇಕು ಎಂದು ಹೆಚ್ಚುವರಿ ದಂಡನಾಧಿಕಾರಿ ತಿಳಿಸಿದರು. ಈಗ 328 ಕಿಯಾಸ್ಕ್ ಗಳು ಜಿಲ್ಲೆಯಲ್ಲಿವೆ. ಹೆಚ್ಚುವರಿ ಕಿಯಾಸ್ಕ್ ಗಳು ಅಗತ್ಯವಿದ ಎಂಬ ಕುರಿತು ಸ್ಥಳೀಯಾಡಳಿತ ಸಂಸ್ಥೆಗಳು ಸರಕಾರಕ್ಕೆ ಮನವಿ ಸಲ್ಲಿಸಿವೆ. ಈ ಸಂಬಂಧ ಸರಕಾರಕ್ಕೆ ಅರ್ಜಿ ಸಲ್ಲಿಸಲಾಗಿದೆ ಎಂದವರು ಹೇಳಿದರು. ತಾಪಮಾನ ಗರಿಷ್ಠ ಮಟ್ಟಕ್ಕೆ ತಲಪಿರುವ ಹಿನ್ನೆಲೆಯಲ್ಲಿ ಕಾರ್ಮಿಕರ ದುಡಿಮೆಯ ಸಮಯ ಪುನರ್ ರಚಿಸಲಗಿದ್ದು, ಇದನ್ನು ಕಡ್ಡಾಯವಾಗಿ ಪಾಲಿಸುವ ಕುರಿತು ನಗರಸಭೆ-ಪಂಚಾಯತ್ ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಲಾಯಿತು. ಸಭೆಯಲ್ಲಿ ಪಂಚಾಯತ್ ಡೆಪ್ಯೂಟಿ ಡೈರೆಕಟ್ರ್ ಟಿ.ಜೆ.ಅರುಣ್, ಹಿರಿಯ ವರಿಷ್ಠಾಧಿಕಾರಿ ಕೆ.ವಿನೋದ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries