ಮುಳ್ಳೇರಿಯ : ಅಡೂರಿನ ವಿದ್ಯಾಭಾರತೀ ವಿದ್ಯಾಲಯದ ಹಳೆವಿದ್ಯಾರ್ಥಿನಿ, ಅಡೂರು ಬೈತನಡ್ಕದ ಬಾಲಸುಬ್ರಹ್ಮಣ್ಯ ಭಟ್ ಹಾಗೂ ಶಾರದಾದೇವಿ ದಂಪತಿಯ ಪುತ್ರಿ ಅಭಿರಕ್ಷಾ ಕೃಷ್ಣವೇಣಿ ಈ ಸಾಲಿನ ಕರ್ನಾಟಕ ರಾಜ್ಯ ದ್ವಿತೀಯ ಪಿಯುಸಿ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ 584 (ಶೇ. 97.33) ಅಂಕ ಪಡೆದು ಸುಳ್ಯ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರು ಈಶ್ವರಮಂಗಲ ಗಜಾನನ ಶಾಲೆ ಹಾಗೂ ಸುಳ್ಯದ ನೆಹರೂ ಸ್ಮಾರಕ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ. ಇವರು ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಭರತನಾಟ್ಯ ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲೂ ವಿಶಿಷ್ಟ ಶ್ರೇಣಿ ಪಡೆದಿದ್ದಾರೆ. ಕೀಬೋರ್ಡ್, ಲಘುಸಂಗೀತವನ್ನೂ ಕಲಿತಿದ್ದಾರೆ. ಯಕ್ಷಗಾನ ಕಲಾವಿದೆಯಾಗಿ ಅನೇಕ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಪ್ರಸ್ತುತ ಇವರು ಮಂಗಳೂರಿನ ತ್ರಿಷಾ ಕ್ಲಾಸಸ್‍ನಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಫೌಂಡೇಶನ್ ಪರೀಕ್ಷೆಗೆ ತರಬೇತಿ ಪಡೆಯುತ್ತಿದ್ದಾರೆ.
ದ್ವಿತೀಯ ಪಿಯು ವಾಣಿಜ್ಯ ವಿಭಾಗದಲ್ಲಿ ಅಭಿರಕ್ಷಾ ಸುಳ್ಯ ತಾಲೂಕಿಗೆ ಪ್ರಥಮ
0
ಏಪ್ರಿಲ್ 28, 2019