HEALTH TIPS

ತಲೇಕಳ ನಾಗಬ್ರಹ್ಮ ಪ್ರೆಂಡ್ಸ್ ಕ್ಲಬ್ ತಲೇಕಳ ಸಡಗರದ ತ್ರಿಂಶತಿ ಕಾರ್ಯಕ್ರಮ


      ಮಂಜೇಶ್ವರ: ನಾಗಬ್ರಹ್ಮ ಪ್ರೆಂಡ್ಸ್ ಕ್ಲಬ್ ತಲೇಕಳ ಸಂಘಟನೆಯು ಸಾರ್ಥಕ ಮೂವತ್ತು ವರ್ಷಗಳನ್ನು ಪೂರೈಸಿದ್ದು ಆ ಬಗ್ಗೆ ತ್ರಿಂಶತಿ ಕಾರ್ಯಕ್ರಮವನ್ನು ಇತ್ತೀಚೆಗೆ ಸಡಗರದಿಂದ ಆಚರಿಸಿತು.
    ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕೈರಂಗಳ ಶಾರದ ಗಣಪತಿ ವಿದ್ಯಾಕೇಂದ್ರದ ಸಂಚಾಲಕ ಟಿ.ಜಿ.ರಾಜಾರಾಮ ಭಟ್ ಮಾತನಾಡಿ ನಾಗಬ್ರಹ್ಮ ಪ್ರೆಂಡ್ಸ್ ಕ್ಲಬ್ ಹಳ್ಳಿಯಂಗಳದಲ್ಲಿ ಉದಯಿಸಿ ಸಾರ್ಥಕ ಮೂವತ್ತು ವರ್ಷಗಳನ್ನು ಆಚರಿಸುತ್ತಿರುವುದು ಶ್ಲಾಘನಾರ್ಹ. ಕ್ರೀಡೆ, ಸೇವಾ ಚಟುವಟಿಕೆ, ರಂಗ ಚಟುವಟಿಕೆಗಳಲ್ಲಿ ಮಹತ್ತರ ಸಾಧನೆಯನ್ನು ಮಾಡಿದ ನಾಗಬ್ರಹ್ಮ ಕ್ಲಬ್ ಮುಂದಿನ ದಿನಗಳಲ್ಲಿ ಮಕ್ಕಳಿಗೆ ಸಂಸ್ಕಾರವನ್ನು ನೀಡುವ ಬಾಲ ಕೇಂದ್ರವನ್ನು ಆರಂಭಿಸಿ ಸುಸಂಸ್ಕøತ ಸಮಾಜದ ನಿರ್ಮಾಣದಲ್ಲಿ ಮಹತ್ತರ ಕಾಣ್ಕೆಯನ್ನು ನೀಡುವಂತಾಗಲಿ ಎಂದು ಶುಭ ಹಾರೈಸಿದರು.
     ನಾಗ ಬ್ರಹ್ಮ ಪ್ರೆಂಡ್ಸ್ ಕ್ಲಬ್ ನ ಮೂವತ್ತರ ನೆನಪಿಗಾಗಿ ಯಶವಂತ ಮಾಡ ತಲೇಕಳ ಅವರ ಸಂಪಾದಕತ್ವದಲ್ಲಿ ತ್ರಿಂಶತಿ ಎಂಬ ಸ್ಮರಣ ಸಂಚಿಕೆಯನ್ನು ಪ್ರಕಟಿಸಲಾಗಿದ್ದು ಶ್ರೀ ಅರಸು ಮಂಜಿಷ್ಣಾರ್ ದೈವ ಕ್ಷೇತ್ರದ ಅಣ್ಣ ದೈವದ ಪಾತ್ರಿ ರಾಜ ಬೆಳ್ಚಪ್ಪಾಡ ಸಂಚಿಕೆಯನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು.
    ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮಹಾಗಣಪತಿ ಭಜನಾ ಮಂದಿರ ಮದಂಗಲ್ಲುಕಟ್ಟೆ ಇದರ ಅಧ್ಯಕ್ಷ ಶಂಕರನಾರಾಯಣ ಭಟ್ ಮುಂದಿಲ ವಹಿಸಿದ್ದರು. ನಾಗಬ್ರಹ್ಮ ಪ್ರ್ರೆಂಡ್ಸ್ ಕ್ಲಬ್‍ನ ಗೌರವಾಧ್ಯಕ್ಷ ಪದ್ಮನಾಭ ರೈ ಉಂಬಲ್ತೋಡಿ,  ನಾಗಬ್ರಹ್ಮ ಪ್ರೆಂಡ್ಸ್ ಕ್ಲಬ್‍ನ ಅಧ್ಯಕ್ಷ ಪ್ರಕಾಶ್ ಮದಂಗಲ್ಲು ಕಂಬ್ಲ, ಉಪಸ್ಥಿರಿದ್ದರು. ಉದ್ಯಮಿ ಹಾಗೂ ಮದಂಗಲ್ಲಾಯ ಧೂಮಾವತೀ ದೈವ ಕ್ಷೇತ್ರದ ಧಾರ್ಮಿಕ ಸೇವಾಕರ್ತ ರಾಜೇಶ ಶೆಟ್ಟಿ ಬೆಜ್ಜಂಗಳ ಗುತ್ತು ಇವರನ್ನು ಗಣ್ಯರ ಸಮಕ್ಷಮ ಗೌರವಿಸಲಾಯಿತು. ಸಮಾರಂಭದಲ್ಲಿ ಯಶವಂತ ಮಾಡ ತಲೇಕಳ ಸ್ವಾಗತಿಸಿ, ಮಂಗಳೂರಿನ ಕಪಿತಾನಿಯಾ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ವಿನ್ಸೆಂಟ್ ಲೋಬೋ ಕಾರ್ಯಕ್ರಮ ನಿರೂಪಿಸಿ ನಾಗಬ್ರಹ್ಮ ಪ್ರೆಂಡ್ಸ್ ಕ್ಲಬ್‍ನ ಕಾರ್ಯದರ್ಶಿ ವಿಠಲ ಶೆಟ್ಟಿಗಾರ್ ವಂದಿಸಿದರು.
       ಕ್ಲಬ್‍ನ ಹಿರಿಯ ಸದಸ್ಯರಿಗೆ ಹಾಗೂ ಊರಿನ ಪ್ರತಿಭೆಗಳಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿಧ್ಯ ಹಾಗೂ ಲಯನ್. ಕಿಶೋರ್ ಡಿ ಶೆಟ್ಟಿ ಅವರ ನಿರ್ದೇಶನದಲ್ಲಿ ಲಕುಮಿ ತಂಡದ ಕುಸಾಲ್ದ ಕಲಾವಿರು ಅಭಿನಯಿಸಿದ ಮಂಗೆ ಮಲ್ಪೊಡ್ಚಿ ತುಳು ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries