ಬದಿಯಡ್ಕ: ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಿವೃತ್ತರಾಗಲಿರುವ ಅಧ್ಯಾಪಕರಿಗೆ ಹಾಗೂ ಶಾಲಾ ಸಿಬ್ಬಂದಿಯವರಿಗೆ ವಿದಾಯ ಕೂಟ ಸಮಾರಂಭವು ಇತ್ತೀಚೆಗೆ ನಡೆಯಿತು.
ಪೆರಡಾಲ ಎಜ್ಯುಕೇಶನ್ ಸೊಸೈಟಿಯ ಉಪಾಧ್ಯಕ್ಷ ನ್ಯಾಯವಾದಿ ನವೀನ್ ಬನಾರಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಶಾಲಾ ವ್ಯವಸ್ಥಾಪಕ ಡಾ. ಸೂರ್ಯ ಎನ್.ಶಾಸ್ತ್ರಿ ಈ ಸಂದರ್ಭ ಪ್ರಧಾನ ಭಾಷಣಗೈದು, ಅಧ್ಯಾಪನ ವೃತ್ತಿಗೆ ನಿವೃತ್ತಿಯೆಂಬುದಿಲ್ಲ. ಅಧ್ಯಾಪಕರು ಸದಾ ಕಾರ್ಯಶೀಲರಾಗಿದ್ದು ಅನೇಕರಿಗೆ ದಾರಿದೀಪವಾಗಬೇಕಿದೆ. ಉತ್ತಮ ವಿದ್ಯಾರ್ಥಿಗಳನ್ನು ರೂಪಿಸುವಲ್ಲಿ ಅಧ್ಯಾಪಕರ ಪಾತ್ರ ಮಹತ್ತರವಾಗಿದೆ ಎಂದರು.
ಕಳೆದ 34 ವರ್ಷಗಳ ಕಾಲ ಶಾಲೆಯಲ್ಲಿ ಸುದೀರ್ಘ ಸೇವೆಯನ್ನು ಸಲ್ಲಿಸಿದ ಮುಖ್ಯೋಪಾಧ್ಯಾಯ ಕೆ.ಶ್ಯಾಮ ಭಟ್, 15 ವರ್ಷಗಳ ಕಾಲ ಸೇವೆ ಸಲ್ಲಿಸಿದ ಅಧ್ಯಾಪಕ ಕರುಣಾಕರನ್ ಎಂ.ಪಿ., 34 ವರ್ಷಗಳ ಕಾಲ ಸಿಬ್ಬಂದಿಯಾಗಿ ಸೇವೆಗೈದ ನಾರಾಯಣ ಮಣಿಯಾಣಿ ಕನಕಪ್ಪಾಡಿ ಇವರನ್ನು ಗಣ್ಯರು ಶಾಲುಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನು ನೀಡಿ ಬೀಳ್ಕೊಟ್ಟರು. ಶಾಲಾ ಆಡಳಿತ ಮಂಡಳಿಯ ಪಿ.ವೆಂಕಟ್ರಮಣ ಭಟ್ ಪೆರ್ಮುಖ, ರಮೇಶ್ ಭಟ್ ಕುಂಡೆಪ್ಪಾಡಿ, ಪ್ರಸಾದ ರೈ ಪೆರಡಾಲ, ಉದನೇಶ್ವರ ಇಕ್ಕೇರಿ, ಮಾಧವನ್ ಭಟ್ಟಾತ್ತಿರಿ, ಶಾಲಾ ನೌಕರ ಸಂಘದ ಕಾರ್ಯದರ್ಶಿ ಲತಾಬಾಯಿ ಟೀಚರ್ ಶುಭಾಶಂಸನೆಗೈದರು. ಪ್ರಾಂಶುಪಾಲ ರಾಮಚಂದ್ರ ಸ್ವಾಗತಿಸಿ, ಮುಖ್ಯೋಪಾಧ್ಯಾಯಿನಿ ತಂಗಮಣಿ ವಂದಿಸಿದರು. ಅಧ್ಯಾಪಿಕೆ ದಿವ್ಯಾ ಪ್ರಾರ್ಥಿಸಿದರು. ಅಧ್ಯಾಪಕ ರಾಮಕೃಷ್ಣ ಕಾರ್ಯಕ್ರಮ ನಿರೂಪಿಸಿದರು.