ನವದೆಹಲಿ: ಯುಗಾದಿ ಮರುದಿನವಾದ ಭಾನುವಾರ ಕಾಂಗ್ರೆಸ್ ಪಾಳಯ ಮುಂಬರುವ ಲೋಕಸಭೆ ಚುನಾವಣೆಗೆ ಪ್ರಚಾರ ಅಭಿಯಾನವನ್ನು ಪ್ರಾರಂಭಿಸಿದೆ ."ಅಬ್ ಹೋಗಾ ನ್ಯಾಯ್" ಎಂಬ ಧ್ಯೇಯ ವಾಕ್ಯದೊಡನೆ ಪಕ್ಷವು ಚುನಾವಣಾ ಪ್ರಚಾರ ಗಿತೆಯನ್ನು ಬಿಡುಗಡೆ ಮಾಡಿದೆ. ಈ ಮೂಲಕ ದೇಶದಲ್ಲಿ ಪ್ರಸಕ್ತ ನಡೆಯುತ್ತಿರುವ "ಅನ್ಯಾಯ"ವನ್ನು ಕೊನೆಗಾಣಿಸಲು ಕಾಂಗ್ರೆಸ್ ಬೆಂಬಲಿಸಿ ಎಂದು ಜನತೆಗೆ ಕರೆ ನೀಡಲು ಕೈ ಪಾಳಯ ಮುಂದಾಗಿದೆ.
ದೇಶದ ಬಡವರಿಗೆ ಆರ್ಥಿಕ ಭದ್ರತೆ ಖಾತ್ರಿಪಡಿಸುವ "ನ್ಯಾಯ್" ಯೋಜನೆಯಲ್ಲಿ ಕಾಂಗ್ರೆಸ್ ಅಭಿಯಾನ ಕೇಂದ್ರೀಕೃತವಾಗಿದೆ. ಎಂದು ಪಕ್ಷದ ಹಿರಿಯ ನಾಯಕ ಆನಂದ್ ಶರ್ಮಾ ಹೇಳಿದ್ದಾರೆ."ನ್ಯಾಯ್" ಎಂಬ ಶಬ್ದವು ದ್ದೇಶಿತ ಕನಿಷ್ಟ ಆದಾಯ ಖಾತರಿ ಯೋಜನೆಗೆ ಮಾತ್ರ ಸೀಮಿತವಾಗಿಲ್ಲ, ಸಮಾಜದ ಎಲ್ಲಾ ವರ್ಗಗಳಿಗೆ ನ್ಯಾಯವನ್ನು ದೊರಕಿಸಿಕೊಡುವುದು ಇದರ ವ್ಯಾಪ್ತಿಗೆ ಬರಲಿದೆ ಎಂದು ಅವರು ವಿವರಿಸಿದರು
ಜಾವೇದ್ ಅಖ್ತರ್ ಅವರಿಂದ ಪಕ್ಷದ ಪ್ರಚಾರ ಗೀತೆ (ಥೀಮ್ ಸಾಂಗ್) ರಚನೆಯಾಗಿದೆ.ಹಾಗೆಯೇ ಪ್ರಚಾರ ಅಭಿಯಾನದ ವೀಡಿಯೋವನ್ನು ನಿಖಿಲ್ ಅಡ್ವಾಣಿ ಚಿತ್ರೀಕರಿಸಿದ್ದಾರೆ.
ಈ ಹಾಡು ಹಾಗೂ ವೀಡಿಯೋ ನಿರ್ಮಾಣವನ್ನು ಪರ್ಸೆಪ್ಟ್ ಎಡ್ಜ್ ಸಂಸ್ಥೆ ನಿರ್ವಹಿಸಿದೆ.
ಈ ಮಧ್ಯೆ ಥೀಮ್ ಸಾಂಗ್ ನಲ್ಲಿದ್ದ ಕೆಲ ಸಾಲುಗಳನ್ನು ಚುನಾವಣಾ ಆಯೋಗದ ಆಕ್ಷೇಪದ ಹಿನೆಲೆಯಲ್ಲಿ ತೆಗೆದುಹಾಕಲಾಗಿದೆ ಎಂದು ತಿಳಿದು ಬಂದಿದೆ.